ಮಂಡ್ಯ ಅ31: ಬರಗಾಲದ ಸಂದರ್ಭವನ್ನು ಸರಿಯಾಗಿ ನಿರ್ವಹಿಸಿ. ಅಧಿಕಾರಿಗಳ ಬೇಜವಾಬ್ದಾರಿಯನ್ನು ಸರ್ಕಾರ ಸುತಾರಾಂ ಸಹಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನ ಜಾನವಾರುಗಳಿಗೆ ಕುಡಿಯುವ ನೀರು, ಆಹಾರ, ಮೇವಿನ ಕೊರತೆ ಆಗಬಾರದು. ಹಣಕ್ಕೆ ತೊಂದರೆ ಇಲ್ಲ. ಅಗತ್ಯವಿದ್ದಷ್ಟು ಕೇಳಿ ಎಂದು ಸೂಚನೆ ನೀಡಿದರು.
ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಕೃಷಿ ಇಲಾಖೆಗಳ ಪ್ರಗತಿಗೆ ಪ್ರಥಮ ಆಧ್ಯತೆ ನೀಡಬೇಕು. DC, CEO, ಕಾರ್ಯದರ್ಶಿಗಳ ಸಭೆಯಲ್ಲಿ ನಾನು ಕೊಟ್ಟ ಸೂಚನೆಗಳು, ನಿರ್ದೇಶನಗಳು ಚಾಚೂ ತಪ್ಪದೆ ಜಾರಿ ಆಗಿದೆಯಾ ? ಎಷ್ಟು ಜಾರಿ ಆಗಿದೆ ಎನ್ನುವ ಕುರಿತು ಸಭೆಗೆ ಸ್ಪಷ್ಟ ಮಾಹಿತಿ ನೀಡಿ. ತಪ್ಪು ಮಾಹಿತಿ ನೀಡಿದರೆ ಕಠಿ ಕ್ರಮ. ನಮ್ಮನ್ನು ಒಪ್ಪಿಸುವುದಕ್ಕಾಗಿ ಸಭೆಗೆ ತ್ಪಪ್ಪು ಮಾಹಿತಿ ನೀಡಬೇಡಿ ಎಂದರು.
ಬರಗಾಲ ನಿರ್ವಹಣೆಗೆ ಎಷ್ಟೇ ಹಣ ಅಗತ್ಯವಿದ್ದರೂ, ಎಷ್ಟೇ ಕಷ್ಟ ಆದರೂ ಸರ್ಕಾರ ಹಣ ಒದಗಿಸುತ್ತದೆ. ನೀವು ಜನ ಜಾನವಾರುಗಳಿಗೆ ಯಾವುದಕ್ಕೂ ತೊಂದರೆ ಆಗದಂತೆ ಕೆಲಸ ಮಾಡಬೇಕು. ಮಾರ್ಚ್, ಏಪ್ರಿಲ್, ಮೇ ತಿಂಗಳಿಗಿಂತ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಆಗ 11 ಸಾವಿರ ಮೆಗಾವ್ಯಾಟ್ ಬಳಕೆ ಆಗುತ್ತಿತ್ತು. ಈಗ 15-16 ಸಾವಿರ ಮೆಘಾವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. ರೈತರ ಪಂಪ್ ಸೆಟ್ ಮತ್ತು ಜನರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ನಕಾಶೆ, ಯೋಜನೆ ಸಿದ್ದಪಡಿಸಿ ಅದಕ್ಕೆ ತಕ್ಕಂತೆ ಕ್ರಮ ವಹಿಸಿ. ಸದ್ಯ ಕಟಾವಿಗೆ ಬರುವ ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ನಿಗಾವಹಿಸಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.