ಮನೆ ರಾಜ್ಯ ಎತ್ತಿನಗಾಡಿ ಏರಿ ಮತದಾನ ಜಾಗೃತಿ

ಎತ್ತಿನಗಾಡಿ ಏರಿ ಮತದಾನ ಜಾಗೃತಿ

0

ಮೈಸೂರು: ಗ್ರಾಮೀಣ ಸೊಗಡಿನ ಶೈಲಿಯಲ್ಲಿ ಎತ್ತಿನಗಾಡಿ ಜಾಥಾ ಮೂಲಕ ನಂಜನಗೂಡು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹುಲ್ಲಹಲ್ಲಿ ಹೋಬಳಿ ಮಟ್ಟದಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.

Join Our Whatsapp Group

ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕು ಸಹಾಯಕ ಲೆಕ್ಕಾಧಿಕಾರಿ ಶ್ರೀಕಂಠನಾಯಕ ಹಾಗೂ ತಾಲ್ಲೂಕು ಯೋಜನಾಧಿಕಾರಿ ಗುರುಮಹದೇವು ಅವರು ಜಾಥಾಗೆ ಚಾಲನೆ ನೀಡಿದರು. ಎತ್ತಿನ ಗಾಡಿ ಏರಿದ‌ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ  ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಜೀವಿನಿ ಸಂಘದ ಮಹಿಳೆಯರು ಮೇ 10 ರಂದು‌ ಕಡ್ಡಾಯವಾಗಿ  ಹಕ್ಕು ಚಲಾಯಿಸುವ ಮೂಲಕ‌ ಪ್ರಜಾಪ್ರಭುತ್ವದ ಹಬ್ಬ ಆಚರಿಸುವಂತೆ ಅರಿವು ಮೂಡಿಸಿದರು.

20ಕ್ಕೂ ಹೆಚ್ಚು ಎತ್ತಿನ‌ಗಾಡಿ ಹಾಗೂ 10ಕ್ಕೂ ಹೆಚ್ಚು  ಸ್ವಚ್ಚತಾ ವಾಹಿನಿ ಮೂಲಕ ಹುಲ್ಲಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾನದ ಮಹತ್ವ ಸಾರಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು‌ ಪಂಚಾಯಿತಿ ಸಿಬ್ಬಂದಿ, ತಾಲ್ಲೂಕು‌ ಎನ್.ಆರ್.ಎಲ್.ಎಂ.ಸಿಬ್ಬಂದಿ, ಹುಲ್ಲಹಳ್ಳಿ ಹೋಬಳಿ‌ಮಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಹಲವರು ಉಪಸ್ಥಿತರಿದ್ದರು.

ಹಿಂದಿನ ಲೇಖನಗಂಡ ದಿನಾ ಬೇರೆ ಮಹಿಳೆಯರ ಜೊತೆ ಮಾತನಾಡುತ್ತಿದ್ದರೆ, ಹೀಗೆ ಮಾಡಿ
ಮುಂದಿನ ಲೇಖನಮ್ಯಾಟ್ರಿಮೋನಿಯಲ್​ ಸೈಟ್’​ನಲ್ಲಿ ಪರಿಚಯವಾದ ಮಹಿಳೆ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಸಾಫ್ಟ್​​’ವೇರ್ ಇಂಜಿನಿಯರ್​