ಮಂಡ್ಯ: ಮರಳೇಕಾಯಿ ತಿಂದು 8 ಮಂದಿ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮನೆಯೊಂದರ ಹಿಂದೆ ಬೆಳೆದಿದ್ದ ಮರಳೇಕಾಯಿ ತಿಂದು ಗ್ರಾಮದ 8 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಸೃಜನ್ (11), ಜ್ಞಾನವಿ (9) , ಸಿಂಚನ (5), ಆಷಿಕಾ (6), ಭುವನೇಶ್ವರಿ (7), ಚರಣ (9), ಧ್ರುವಚರಣ್ (9) , ಚಂದ್ರ (7) ಅಸ್ವಸ್ಥಗೊಂಡ ಮಕ್ಕಳು
ಇಂದು ಸಂಜೆ 5 ಗಂಟೆ ವೇಳೆಗೆ ಆಟವಾಡುವಾಗ ಅದೇ ಗಿಡದ ಕಾಯಮಿಯನ್ನು ಮಕ್ಕಳು ಸೇವಿಸಿದ್ದು, ಕಾಯಿ ತಿಂದ ಕೂಡಲೇ ಅಸ್ವಸ್ಥಗೊಂಡಿದ್ದಾರೆ.
ಸ್ಥಳದಲ್ಲಿ ಕೆಲ ಮಕ್ಕಳಿಗೆ ವಾಂತಿಯಾಗಿದ್ದು, ಕೂಡಲೇ ಮಕ್ಕಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದಾರೆ.
ಮದ್ದೂರು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿಸುತ್ತಿದ್ದಾರೆ.