ಮನೆ ಸುದ್ದಿ ಜಾಲ ಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದ ಮತದಾನ ಆರಂಭ

ಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದ ಮತದಾನ ಆರಂಭ

0

ಲಕ್ನೊ: ಉತ್ತರ ಪ್ರದೇಶ ವಿಧಾನಸಭೆ-2022ರ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪಶ್ಚಿಮ ಉತ್ತರ ಪ್ರದೇಶ ಭಾಗದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಾಯಂಕಾಲ 6 ಗಂಟೆಯವರೆಗೆ ಮುಂದುವರಿಯಲಿದೆ. ಮೊದಲ ಹಂತದಲ್ಲಿ 73 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.24 ಕೋಟಿ ಪುರುಷರು, 1.04 ಕೋಟಿ ಮಹಿಳೆಯರು ಸೇರಿದಂತೆ 2.28 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಇಂದಿನ ಮತದಾನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮಹತ್ವವಾಗಿದೆ. ಮಥುರಾದಿಂದ ಶ್ರೀಕಾಂತ್ ಶರ್ಮ, ಗಜಿಯಾಬಾದ್ ನಿಂದ ಅತುಲ್ ಗಾರ್ಗ್, ಥಾನ ಭವನ್ ಕ್ಷೇತ್ರದಿಂದ ಸುರೇಶ್ ರಾಣಾ, ಮುಜಾಫರ್ ನಗರದಿಂದ ಕಪಿಲ್ ದೇವ್ ಅಗರ್ವಾಲ್ ಮತ್ತು ಅತ್ರೌಲಿ ಕ್ಷೇತ್ರದಿಂದ ಸಂದೀಪ್ ಸಿಂಗ್, ಛತ ಕ್ಷೇತ್ರದಿಂದ ಲಕ್ಷ್ಮೀನಾರಾಯಣ ಚೌಧರಿ, ಶಿಕಾರ್ಪುರ್ ಕ್ಷೇತ್ರದಿಂದ ಅನಿಲ್ ಖರ್ಮ, ಆಗ್ರಾ ಕಂಟೋನ್ಮೆಂಟ್ ನಿಂದ ಜಿ ಎಸ್ ಧರ್ಮೇಶ್ ಮತ್ತು ಹಸ್ತಿನಾಪುರ ಕ್ಷೇತ್ರದಿಂದ ದಿನೇಶ್ ಖಾತಿಕ್ ಕೂಡ ಸ್ಪರ್ಧಿಸುತ್ತಿದ್ದು ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಹಿಂದಿನ ಲೇಖನಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಬಿಜೆಪಿ ಪಕ್ಷಗಳೇ ಕಾರಣ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ
ಮುಂದಿನ ಲೇಖನಕೊರೊನಾ: ದೇಶದಲ್ಲಿ 67,084 ಹೊಸ ಪ್ರಕರಣ ಪತ್ತೆ