ಮನೆ ಅಪರಾಧ ಮಂಡ್ಯ: ಮನೆ ಜಮೀನಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ

ಮಂಡ್ಯ: ಮನೆ ಜಮೀನಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ

0

ಮಂಡ್ಯ: ಮನೆ ಕಾಯಲು ಬಂದವನೇ ಮನೆಯಲ್ಲಿದ್ದ ವಸ್ತುಗಳನ್ನೆ ದೋಚಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರ ತಾಲ್ಲೂಕಿನ ಮಾಚಹಳ್ಳಿಯಲ್ಲಿ ನಡೆದಿದ್ದು, ಆರೋಪಿಯನ್ನು ಕೆಸ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಾಚಹಳ್ಳಿ ಗ್ರಾಮದ ಉಮಾಶಂಕರ್ ಎಂಬುವವರ ಮನೆ ಹಾಗೂ ಜಮೀನಿನಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ರಾಮನಗರ ಜಿಲ್ಲೆಯ ಯರಹಳ್ಳಿ ಗ್ರಾಮದ ಸೋಮಶೇಖರ್ (48) ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಮೀನಿನಲ್ಲಿದ್ದ ಮನೆ ನೋಡಿಕೊಳ್ಳಲು ತಿಂಗಳ ಸಂಬಳಕ್ಕೆ ನೇಮಕವಾಗಿದ್ದ ಸೋಮಶೇಖರ್, ಮಾಲೀಕನಿಗೆ ಮೋಸ ಮಾಡಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ.

2023 ಜನವರಿ 1 ರಿಂದ ಮೇ 29 ರ ವರಗೆ ಮನೆಯಲ್ಲಿದ್ದ ಸಿಲಿಂಡರ್, ಸ್ಕೂಟರ್, ಮೊಬೈಲ್, ಹಾಗೂ ಕೃಷಿ ಚಟುವಟಿಕೆಯ ಜಮೀನಿನಲ್ಲಿದ್ದ ಕಳ್ಳತನ ಮಾಡಿದ್ದಾನೆ. ಆಗಸ್ಟ್ 3 ರಂದು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ಉಮಾಶಂಕರ್ ದೂರು ದಾಖಲಿಸಿದ್ದರು.

ದೂರು ದಾಖಲು ಬೆನ್ನಲ್ಲೆ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯಿಂದ 2 ಲಕ್ಷದ 30ಸಾವಿರ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

5ತೇಗದ ಮರ, 2 ಅರ್ಕುಲೆಸ್ ಮರ,1 ಪಂಪ್ ಸೆಟ್ ಮೋಟಾರು, ಪವರ್ ಕೇಬಲ್, 20 ಅಡಿ ಉದ್ದದ 30 ಕಬ್ಬಿಣದ ಪೈಪ್ ಗಳು ಹಾಗೂ ಒಂದು ಬೈಕ್ ನ್ನು  ಜಪ್ತಿ ಮಾಡಿದ್ದಾರೆ.

ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕೆಸ್ತೂರು ಪೊಲೀಸ್ ಠಾಣೆಯ ಪಿಎಸ್ಐ  ನರೇಶ್ ಕುಮಾರ್, ಎಎಸ್ ಐ ರಾಜು, ಪ್ರಶಾಂತ್ ಕುಮಾರ್, ಸ್ವಾಮಿ ಸೇರಿ ಹಲವರು ಕಾರ್ಯಾಚರಣೆ ನಡೆಸಿದ್ದು, ಕೆಸ್ತೂರು ಠಾಣಾ ಪೊಲೀಸರ ಕಾರ್ಯವನ್ನು ಮಂಡ್ಯ ಎಸ್ಪಿ ಎನ್.ಯತೀಶ್ ಪ್ರಶಂಸಿಸಿದ್ದಾರೆ.