ಮನೆ ಸುದ್ದಿ ಜಾಲ ಹೃದಯಾಘಾತದಿಂದ ಖ್ಯಾತ ‘ಆರ್ ಜೆ ರಚನಾ’ನಿಧನ

ಹೃದಯಾಘಾತದಿಂದ ಖ್ಯಾತ ‘ಆರ್ ಜೆ ರಚನಾ’ನಿಧನ

0

ಬೆಂಗಳೂರು:  ಖ್ಯಾತ ರೇಡಿಯೋ ಜಾಕಿ ಆರ್ ಜೆ ರಚನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ರೇಡಿಯೋ ಸಂಸ್ಥೆಯಲ್ಲಿ ಆರ್ ಜೆಯಾಗಿ ಕಾರ್ಯ ನಿರ್ವಹಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದ ಆರ್ ಜೆ ರಚನಾ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement
Google search engine

ಮೂಲಗಳ ಪ್ರಕಾರ ಜೆ.ಪಿ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಅವರಿಗೆ ಕಾರ್ಡಿಯಾಕ್ ಅರೆಸ್ಟ್ (ಹೃದಯಾಘಾತ)ಆಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅವರು ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

ಈ ಹಿಂದೆ ರಕ್ಷಿತ್ ಶೆಟ್ಟಿಯವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ಸಹೋದರಿ ಪಾತ್ರದ ಮೂಲಕ ರಚನಾ ಖ್ಯಾತಿಯಾಗಿದ್ದರು. ಮೂರು ವರ್ಷಗಳಿಂದ ರೇಡಿಯೋ ಜಾಕಿ ಕೆಲಸ ಬಿಟ್ಟಿದ್ದರು. ರೇಡಿಯೋ ಮಿರ್ಚಿಯಲ್ಲಿ ಅಪಾರ ಕೇಳುಗರನ್ನು ತನ್ನ ಮಾತಿನ ಮೂಲಕ ರಂಜಿಸಿದ ರಚನಾ ಅವರ ಹಠಾತ್ ನಿಧನ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ರಚನಾ ಅವರ ಪೋಷಕರು ಚಾಮರಾಜಪೇಟೆಯಲ್ಲಿ ವಾಸವಿದ್ದು, ಮೃತದೇಹವನ್ನು ಪೋಷಕರ ನಿವಾಸಕ್ಕೆ ಕೊಂಡೊಯ್ಯಲಾಗಿದೆ ಎನ್ನಲಾಗಿದೆ.

ಇನ್ನು ಆರ್ ಜೆ ರಚನಾ ಅವರ ಆಸೆಯಂತೆ ಅವರ ಕುಟುಂಬಸ್ಥರು ಆಕೆಯ ದೇಹದ ಅಂಗಾಂಗ ದಾನಕ್ಕೆ ಮುಂದಾಗಿದ್ದು, ಆ ಮೂಲಕ ಆರ್ ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದಾರೆ.  ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಹಿಂದಿನ ಲೇಖನಸರಳವಾಗಿ ನಡೆದ ಗೋಣಹಳ್ಳಿ ಶ್ರೀ ಮಾರಮ್ಮ ರಥೋತ್ಸವ
ಮುಂದಿನ ಲೇಖನಪತ್ನಿಯ ನಗ್ನ ಫೋಟೋ ಶೇರ್ ಮಾಡಿದ ಪತಿಗೆ ಥಳಿತ; ಇಬ್ಬರ ಬಂಧನ