ಮನೆ ರಾಜ್ಯ ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಡಿ.19 ರಂದು ಮಂಡ್ಯ ಬಂದ್

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಡಿ.19 ರಂದು ಮಂಡ್ಯ ಬಂದ್

0

ಮೈಸೂರು(Mysuru): ಕಬ್ಬು ಬೆಲೆ ನಿಗದಿ ಮಾಡದ ಸರ್ಕಾರದದ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ  ಡಿ. 19 ರಂದು ಮಂಡ್ಯ ಬಂದ್‌ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 6 ತಿಂಗಳಿಂದ ರಾಜ್ಯಾದ್ಯಂತ ಕಬ್ಬು ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತರು ಬೀದಿಗಿಳಿದಿದ್ದಾರೆ. ಸರ್ಕಾರ ಟನ್‌’ ಒಂದಕ್ಕೆ ಕೇವಲ ರೂ. 50/- ಹೆಚ್ಚಿಸಿ ಕೈ ತೊಳೆದುಕೊಂಡಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಪ್‌ಅರ್‌ಪಿ ಬೆಲೆ ಖರ್ಚನ್ನು ವಾಪಸ್‌ ಭರಿಸುತ್ತಿಲ್ಲ. ರಾಜ್ಯ ಸರ್ಕಾರ ಕನಿಷ್ಠ ರೂ. 500/- ಗಳನ್ನಾದರೂ ಟನ್ ಒಂದಕ್ಕೆ ಹೆಚ್ಚುವರಿಯಾಗಿ ಎಸ್‌ಪಿ ಘೋಷಣೆ ಮಾಡಬೇಕು, ಸರ್ಕಾರವು ರೈತರನ್ನು ನಿರ್ಲಕ್ಷಿಸಿರುವುದನ್ನು ವಿರೋಧಿಸಿ, ರಾಜ್ಯಾದ್ಯಂತ ವಿವಿಧ ರೀತಿಯ ಹೋರಾಟವನ್ನು ರೈತ ಸಂಘ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಅದರಂತೆ ಡಿಸೆಂಬರ್ 19 ರಂದು ಮಂಡ್ಯ ನಗರದ ಸಂಪೂರ್ಣ ಬಂದ್‌’ಗೆ ಕರೆ ನೀಡಿದ್ದು, ಈ ಕರೆಗೆ ಹತ್ತಾರು ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಹೋಟೆಲ್ ಮಾಲೀಕರು, ಎಲ್ಲಾ ವರ್ಗದ ಜನ ಸಮುದಾಯ ಸ್ವಯಂ ಪ್ರೇರಿತವಾಗಿ ಈ ಬಂ‌ಗೆ ಬೆಂಬಲ ವ್ಯಕ್ತಪಡಿಸಿವೆ. ಜಿಲ್ಲಾದ್ಯಂತ ಎಲ್ಲಾ ಗ್ರಾಮಗಳಿಂದ ಮಹಿಳೆಯರೂ ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಜನ ಸೇರಿ ಬೃಹತ್‌ ಮೆರವಣಿಗೆ ಅಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಡಿ. 20 ರಂದು ಸುವರ್ಣ ಸೌಧ ಮುತ್ತಿಗೆ:

ಕಬ್ಬಿಗೆ ಟನ್ ಒಂದಕ್ಕೆ ರೂ. 4500 ಬೆಲೆ ನಿಗದಿ ಮಾಡುವಂತೆ ಹಾಲಿಗೆ ಲೀಟರ್ ಒಂದಕ್ಕೆ ರೂ.40 ನಿಗದಿಗಾಗಿ, ಭತ್ತ ಬೆಳೆಗಾರರಿಗೆ ಪ್ರೋತ್ಸಾಹಧನ ಭರಿಸುವಂತೆ ಆಗ್ರಹಿಸಿ ಡಿಸೆಂಬರ್ 20 ರಂದು ಸುರ್ವಣ ಸೌಧವನ್ನು ಮುತ್ತಿಗೆ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ ಎಂದರು./

ಜನಸಂಕಲ್ಪ ಯಾತ್ರೆ ವಿರುದ್ಧ ಪ್ರತಿಭಟನೆ

ರಾಜ್ಯದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ತಂದು ರೈತ ವಂಶವನ್ನೇ ನಿರ್ವಂಶ ಮಾಡಲು ಹೊರಟಿದೆ. ಈ ಜನ ವಿರೋಧಿ ಆಡಳಿತವನ್ನು ಪ್ರತಿಭಟಿಸಿ ಜನಸಂಕಲ್ಪ ಯಾತ್ರೆ ಬರುವ ಎಲ್ಲಾ ಕಡೆ ಪ್ರತಿಭಟನೆ ನಡೆಸಲು ರೈತ ಸಂಘ ಕರೆ ನೀಡಿದೆ.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಕುಮಾ‌ರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಪೇಟೆ ಬಸವರಾಜ್, ರಾಜ್ಯ ಮುಖಂಡ ಪ್ರಸನ್ನ ಎನ್ ಗೌಡ,   ನೇತ್ರಾವತಿ ಇದ್ದರು.