ಮನೆ ಆರೋಗ್ಯ ಕೀಲು ನೋವು ಮತ್ತು ಊತಕ್ಕೆ ಸಬ್ಬಸಿಗೆ ಸೊಪ್ಪಿನ ಹೀಗೊಂದು ಪ್ರಯೋಗ

ಕೀಲು ನೋವು ಮತ್ತು ಊತಕ್ಕೆ ಸಬ್ಬಸಿಗೆ ಸೊಪ್ಪಿನ ಹೀಗೊಂದು ಪ್ರಯೋಗ

0

ವಯಸ್ಸಾದ ನಂತರದಲ್ಲಿ ಮನುಷ್ಯನಿಗೆ ಮೂಳೆ ನೋವು ಮತ್ತು ಕೀಲುಗಳ ಭಾಗದಲ್ಲಿ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಇತ್ತೀಚಿಗೆ ಯುವ ಜನತೆಯಲ್ಲೂ ಕೂಡ ಇಂತಹ ಸಮಸ್ಯೆಯನ್ನು ನೋಡುತ್ತಿದ್ದೇವೆ. ಕೆಲವರು ಹುಟ್ಟಿನಿಂದಲೇ ಮೂಳೆಗಳ ದೌರ್ಬಲ್ಯ ಸಮಸ್ಯೆಯನ್ನು ಹೊಂದಿರುತ್ತಾರೆ.

ಮೂಳೆಗಳಲ್ಲಿ ಪ್ರಮುಖವಾಗಿ ಇರುವುದು ಕ್ಯಾಲ್ಸಿಯಂ. ಯಾವಾಗ ನಮ್ಮ ದೇಹಕ್ಕೆ ನಾವು ತಿನ್ನುವ ಆಹಾರಗಳಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ ಆಗ ಮೂಳೆಗಳ ಸಮಸ್ಯೆ ಶುರುವಾಯಿತು ಎಂದರ್ಥ. ಹಾಗಾಗಿ ಕ್ಯಾಲ್ಸಿಯಂ ಹೆಚ್ಚಾಗಿರುವ ಆಹಾರ ಪದಾರ್ಥಗಳ ಸೇವನೆಗೆ ನಾವು ಒಲವು ತೋರಬೇಕು. ಯಾವ ತರಕಾರಿಗಳಲ್ಲಿ ಹಣ್ಣುಗಳಲ್ಲಿ ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಹೆಚ್ಚು ಸಿಗುತ್ತದೆ ಎಂಬುದನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.

ಸಬ್ಬಸಿಗೆ ಸೊಪ್ಪು

ಈ ನಿಟ್ಟಿನಲ್ಲಿ ನೋಡಲು ಹೋದಾಗ ಆಹಾರ ತಜ್ಞರ ಸಲಹೆಯಂತೆ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಒಂದು ಆಹಾರ ಪದಾರ್ಥ ಎಂದರೆ ಅದು ಸಬ್ಬಸಿಗೆ ಸೊಪ್ಪು. ಸಬ್ಬಸಿಗೆ ಸೊಪ್ಪು ಎಂತಲೂ ಕೂಡ ಇದನ್ನು ಕರೆಯುತ್ತಾರೆ.

 ಸಾಮಾನ್ಯವಾಗಿ ಬೋಂಡಾ ಮಾಡುವಾಗ ಉಪಯೋಗಿಸುವ ಈ ಸೊಪ್ಪನ್ನು ನಾವು ಆಗಾಗ ಇನ್ನು ಬೇರೆ ಬೇರೆ ರೂಪಗಳಲ್ಲಿ ಆಹಾರಗಳನ್ನು ತಯಾರು ಮಾಡಿ ತಿನ್ನುವುದರಿಂದ ಮೂಳೆಗಳ ತೊಂದರೆಗಳು ಕ್ರಮೇಣವಾಗಿ ಮಾಯವಾಗುತ್ತವೆ ಎಂಬುದು ಸಾಬೀತಾಗಿದೆ.

ಕೀಲು ನೋವಿಗೂ ಸಬ್ಬಸ್ಸಿಗೆ ಸೊಪ್ಪಿಗೂ ಏನು ಸಂಬಂಧ?

ಸಬ್ಬಸಿಗೆ ಸೊಪ್ಪಿನಲ್ಲಿ ನೋವು ನಿವಾರಕ ಗುಣಗಳು ಹೆಚ್ಚಾಗಿವೆ. ಮೂಳೆಯಲ್ಲಿ ಆಗುವ ಬದಲಾವಣೆಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಗುಣ ಸಬ್ಬಸಿಗೆ ಸೊಪ್ಪಿನಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ವಯಸ್ಸಾ ದವರು ಎದುರಿಸುವ ಕೀಲು ನೋವು ಮತ್ತು ಮೂಳೆಗಳ ತೊಂದರೆಗಳಿಂದ ಪ್ರತಿದಿನದ ಕಾರ್ಯ ಚಟುವ ಟಿಕೆಗಳನ್ನು ಸಹಜವಾಗಿ ಮಾಡಿಕೊಳ್ಳಲು ಕಷ್ಟಪಡುತ್ತಾರೆ.

ಸಬ್ಬಸಿಗೆ ಸೊಪ್ಪಿನಲ್ಲಿ ಸಿಗುವ ಕ್ಯಾಲ್ಸಿಯಂ ಪ್ರಮಾಣ…

• ಮೂಳೆಗಳಲ್ಲಿ ಮತ್ತು ಕೀಲುಗಳ ಭಾಗದಲ್ಲಿ ಸವೆತ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣ. ಸಬ್ಬಸಿಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಪಾರವಾಗಿ ಕಂಡುಬರುತ್ತದೆ.

• ಹಾಗಾಗಿ ಇದನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಸೇರಿಸಿಕೊಂಡು ಯಾವುದಾದರೂ ಒಂದು ರೂಪದಲ್ಲಿ ಸೇವನೆ ಮಾಡುವುದರಿಂದ ಮೂಳೆಗಳ ತೊಂದರೆ ಮತ್ತು ಆಸ್ಟಿಯೊ ಪೋರೋಸಿಸ್ ನಂತಹ ಮೂಳೆಗಳ ದೌರ್ಬಲ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಸಬ್ಬಸಿಗೆ ಸೊಪ್ಪು ಬಳಸುವುದು ಹೇಗೆ?

ತಾಜಾ ಸಬ್ಬಸಿಗೆ ಸೊಪ್ಪು ಮೊದಲಿಗೆ ಒಂದು ಹಿಡಿ ತೆಗೆದುಕೊಂಡು ಚೆನ್ನಾಗಿ ತೊಳೆದು ಆರಿಸಿ ಎಳ್ಳೆಣ್ಣೆ ಯಲ್ಲಿ ಕುದಿಸಬೇಕು. ಆನಂತರ ಇದನ್ನು ತಣ್ಣಗಾಗಲು ಬಿಟ್ಟು ನಿಮಗೆ ಕೀಲು ನೋವುಗಳು ಕಂಡು ಬರುತ್ತಿರುವ ಜಾಗದಲ್ಲಿ ಈ ಎಣ್ಣೆಯಿಂದ ಮಸಾಜ್ ಮಾಡಬೇಕು.

• ಬೇರೆ ಬೇರೆ ತರಕಾರಿಗಳು, ಆಲೂಗಡ್ಡೆ, ದಾಲ್ ಇವುಗಳನ್ನು ಬಳಸಿ ತಯಾರು ಮಾಡುವ ಸಾಂಬಾರ್ ಇತ್ಯಾದಿಗಳಲ್ಲಿ ಕೂಡ ಸಬ್ಬಸಿಗೆ ಸೊಪ್ಪು ಮಿಶ್ರಣ ಮಾಡಿದ ಎಳ್ಳೆಣ್ಣೆಯನ್ನು ಬಳಸಿದರೆ ಒಳ್ಳೆಯದು.

• ಹಾಗೆ ಕೂಡ ಸಬ್ಬಕ್ಕಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಸಲಾಡ್ ಮತ್ತು ರೈತಾಗಳಲ್ಲಿ ಬಳಸಬಹುದಾಗಿದೆ. ಸಬ್ಬಕ್ಕಿ ಸೊಪ್ಪನ್ನು ಪಲ್ಯ ಮಾಡಿಕೊಂಡು ಆಗಾಗ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡುಬರುವುದಿಲ್ಲ.

ಹಿಂದಿನ ಲೇಖನಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಡಿ.19 ರಂದು ಮಂಡ್ಯ ಬಂದ್
ಮುಂದಿನ ಲೇಖನಕೇರಳ: ಪ್ರಿಯಕರನಿಂದಲೇ ವಿವಾಹಿತ ಮಹಿಳೆಯ ಹತ್ಯೆ