ಮನೆ ರಾಜ್ಯ ಮಂಡ್ಯ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು: ಸರ್ಕಾರದ ವಿರುದ್ಧ ಗರಂ

ಮಂಡ್ಯ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು: ಸರ್ಕಾರದ ವಿರುದ್ಧ ಗರಂ

0

ಮಂಡ್ಯ: ಕೇಂದ್ರ ಸಚಿವ ಹೆಚ್ ಡಿಕೆ ಕುಮಾರಸ್ವಾಮಿ ಅವರು ತವರು ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದಾರೆ.

Join Our Whatsapp Group

ಆದರೆ, ಜನತಾ ದರ್ಶನ ಕಾರ್ಯಕ್ರಮಕ್ಕೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಗೈರಾಗಿದ್ದು, ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಇರಿಸುಮುರಿಸಾಗಿದೆ. ಅಧಿಕಾರಿಗಳ ಗೈರಿನಿಂದ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಹೆಚ್​ಡಿ ಕುಮಾರಸ್ವಾಮಿ, “ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜಿಲ್ಲಾಧಿಕಾರಿಗಳಿಗೆ ನಾನು ಮನವಿ ಮಾಡಿದ್ದೆ. ಆದರೆ, ಜನತಾ ದರ್ಶನ ಕಾರ್ಯಕ್ರಮ ಹಾಜರಾಗದಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸುತ್ತೋಲೆ ನೀಡಿದೆ. ಇದು ಸರ್ಕಾರದ ಸಣ್ಣತನ ತೋರಿಸುತ್ತದೆ ಎಂದು ಸಿಡಿಮಿಡಿಗೊಂಡರು.

ಗುರುವಾರ (ಜು.05) ನಡೆದ ಕ್ಯಾಬಿನೆಟ್​ನಲ್ಲಿ ಮುಖ್ಯಮಂತ್ರಿ, ಸಚಿವರಿಗೆಷ್ಟೇ ಮಾತ್ರ ಜನತಾ ದರ್ಶನ ಮಾಡುವ ಅಧಿಕಾರವಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳಿಗೂ ಕೂಡ ಈಗಾಗಲೇ ಈ ಕುರಿತು ಸೂಚನೆ‌ ನೀಡಲಾಗಿದೆ ಎಂದು ಆರೋಪ ಮಾಡಿದರು.

ಡಿ.ಕೆ.ಸುರೇಶ್ ಸಂಸದರಾಗಿದ್ದ ಸಂದರ್ಭದಲ್ಲಿ ರಾಮನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.

ಜನಸ್ಪಂದನ ಹೆಸರಲ್ಲಿ ಅಧಿಕಾರಿಗಳನ್ನ ಹಳ್ಳಿಹಳ್ಳಿ‌ ತಿರುಗಿಸಿದರು. ಉಸ್ತುವಾರಿ ಸಚಿವರು ಮಾಡಬೇಕಾದ ಸಭೆಗಳನ್ನು ಡಿಕೆ ಸುರೇಶ್​ ಮಾಡಿದರು. ಅದಕ್ಕೆ ಅನುಮತಿ ಕೊಟ್ಟವರು ಯಾರು? ಆ ಸಂದರ್ಭದಲ್ಲಿ ಯಾವ ನಿಯಮ ಇತ್ತು? ಇವತ್ತು ಕೇಂದ್ರದ ಒಬ್ಬ ಮಂತ್ರಿ ಜನರ ಅಹವಾಲು ಸ್ವೀಕರಿಸಲು ಬಂದಿದ್ದೇನೆ, ಹೊಸ ನಿಯಾಮವಳಿ ಮೂಲಕ ತಡೆಯಲು ಮುಂದಾಗಿದ್ದಾರೆ. ಇದು ನನ್ನ ಮನೆಯ ಕಾರ್ಯಕ್ರಮವಲ್ಲ. ಇದರಿಂದ ಅವರಿಗೆ ಏನು ದೊರಕಲ್ಲ ಎಂದು ವಾಗ್ದಾಳಿ ಮಾಡಿದರು.