ಮನೆ ಅಪರಾಧ ಮಂಡ್ಯ: ಶಾರ್ಟ್ ಸರ್ಕ್ಯೂಟ್ ನಿಂದ ರೆಫ್ರಿಜರೇಟರ್ ಸ್ಪೋಟ

ಮಂಡ್ಯ: ಶಾರ್ಟ್ ಸರ್ಕ್ಯೂಟ್ ನಿಂದ ರೆಫ್ರಿಜರೇಟರ್ ಸ್ಪೋಟ

0

ಮಂಡ್ಯ: ಶಾರ್ಟ್ ಸರ್ಕ್ಯೂಟ್ ನಿಂದ ರೆಫ್ರಿಜರೇಟರ್ ಸ್ಪೋಟಗೊಂಡು ಮನೆಯಲ್ಲಿದ್ದ ಕೆಲವು ವಸ್ತುಗಳು ಬೆಂಕಿಗೆ ಆಹುತಿ ಯಾಗಿರುವ ಘಟನೆ ಮಂಡ್ಯ ನಗರದ ಕೆರೆ ಅಂಗಳದಲ್ಲಿ ನಡೆದಿದೆ.

Join Our Whatsapp Group

ನಗರದ ನಿವಾಸಿ ಶೈಲಜಮ್ಮ ಎಂಬವರಿಗೆ ಸೇರಿದ ವರ್ಲ್ ಪೂಲ್ ಕಂಪನಿಯ ಫ್ರಿಡ್ಜ್ ಸ್ಪೋಟಗೊಂಡಿದೆ.

ಸ್ಪೋಟಗೊಂಡ ವೇಳೆ ಸದ್ಯ ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಫ್ರಿಡ್ಜ್ ಸ್ಪೋಟದಿಂದ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿದೆ. ಮಂಡ್ಯದ ಗಿರಿಯಾಸ್ ಶೋರೂಂ ನಲ್ಲಿ ಖರೀದಿ ಮಾಡಲಾಗಿತ್ತು. ಕಂಪನಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.