ಮನೆ ರಾಜ್ಯ ಮಂಗಳೂರು: ಬಂದರು ಪ್ರದೇಶದ ಮನೆಯಲ್ಲಿ ಅಗ್ನಿ ಅವಘಡ

ಮಂಗಳೂರು: ಬಂದರು ಪ್ರದೇಶದ ಮನೆಯಲ್ಲಿ ಅಗ್ನಿ ಅವಘಡ

0

ಮಂಗಳೂರು: ಬಂದರು ಪ್ರದೇಶದ ಜಿಎಂ ರಸ್ತೆಯಲ್ಲಿರುವ ಹೆಂಚಿನ ಅಂತಸ್ತಿನ ಹಳೆಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರ (ಎ.06) ನಡೆದಿದೆ.

Join Our Whatsapp Group

ಇಂದು 11:30 ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿದ್ದವರು ಕೂಡಲೇ ಹೊರಗೆ ಬಂದ ಕಾರಣ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

ಘಟನೆಗೆ ಶಾರ್ಟ್‌ ಸರ್ಕ್ಯೂಟ್ ಕಾರಣವೆನ್ನಲಾಗಿದೆ. ಮನೆಯಲ್ಲಿದ್ದ ಪರಿಕರಗಳು ಸುಟ್ಟಿವೆ. ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.