ಮನೆ ರಾಜ್ಯ ಹೃದಯಾಘಾತಕ್ಕೆ ಒಳಗಾದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ ಮಂಗಳೂರಿನ ಕೋಸ್ಟ್‌ ಗಾರ್ಡ್‌

ಹೃದಯಾಘಾತಕ್ಕೆ ಒಳಗಾದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ ಮಂಗಳೂರಿನ ಕೋಸ್ಟ್‌ ಗಾರ್ಡ್‌

0

ಮಂಗಳೂರು(ದಕ್ಷಿಣ ಕನ್ನಡ): ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾದ ಮೀನುಗಾರನಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಮಂಗಳೂರಿನ ಕೋಸ್ಟ್‌ ಗಾರ್ಡ್‌ ನೆರವಾಗಿದೆ.

Join Our Whatsapp Group

ಮೀನುಗಾರರಾದ ವಸಂತ ಎಂಬವರು ಜೀವ ಉಳಿಸಿಕೊಂಡವರು.

ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್‌ ಮೈಲು ದೂರದಲ್ಲಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ವಸಂತ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿಯ ಸಿಬಂದಿ ಕೋಸ್ಟ್‌ ಗಾರ್ಡ್‌ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ನೆರವು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಕೋಸ್ಟ್‌ ಗಾರ್ಡ್ ಪಡೆಯು ಸಾಗರ ರಕ್ಷಣ ಉಪಕೇಂದ್ರ- ಮರೈನ್‌ ರೆಸ್ಕ್ಯು ಸಬ್‌ ಸೆಂಟರ್‌ ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶವನ್ನು ಕಳುಹಿಸಿದೆ.

ಈ ವೇಳೆ ಈ ದೋಣಿಗೆ ಸಮೀಪದಲ್ಲಿದ್ದ ಕೋಸ್ಟ್‌ ಗಾರ್ಡ್ ಪಡೆಯ ಇಂಟರ್‌ಸೆಪ್ಟರ್‌ ದೋಣಿ ವಸಂತ ಅವರಿದ್ದ ಇದ್ದ ದೋಣಿಯ ಬಳಿ ತೆರಳಿ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿತು.

ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತರಲಾಯಿತು. ಬಂದರಿನ ಜೆಟ್ಟಿಯಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸಿ, ಬಳಿಕ ಬೆಂದೂರುವೆಲ್‌ ನ ಎಸ್‌ ಸಿಎಸ್‌ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸಲು ವ್ಯವಸ್ಥೆ ಕಲ್ಪಿಸಿದೆ.