ಮನೆ ಕ್ರೀಡೆ ಎನ್‌’ಎಸ್’ಎಸ್ ರಾಷ್ಟ್ರ ಪ್ರಶಸ್ತಿಗೆ ಮಂಗಳೂರಿನ ವಿದ್ಯಾರ್ಥಿನಿ ಆಯ್ಕೆ

ಎನ್‌’ಎಸ್’ಎಸ್ ರಾಷ್ಟ್ರ ಪ್ರಶಸ್ತಿಗೆ ಮಂಗಳೂರಿನ ವಿದ್ಯಾರ್ಥಿನಿ ಆಯ್ಕೆ

0

ಬೆಂಗಳೂರು(Bengaluru): ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕಿ ರಾಷ್ಟ್ರ ಪ್ರಶಸ್ತಿಗೆ ಸುರತ್ಕಲ್‌ ನ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ  ಆಯ್ಕೆಯಾಗಿದ್ದಾರೆ.

ಸೆ.24 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಸಚಿವ ಡಾ.ನಾರಾಯಣಗೌಡ ಅಭಿನಂದನೆ

ರಶ್ಮಿ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಭಿನಂದನೆ ತಿಳಿಸಿದ್ದು, ಎನ್‌’ಎಸ್‌’ಎಸ್ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಗೆ ನಮ್ಮ ಕನ್ನಡದ ವಿದ್ಯಾರ್ಥಿನಿ ಆಯ್ಕೆಯಾಗಿರುವುದು ಸಂತಸ ತಂದಿದೆ. ರಾಜ್ಯದಲ್ಲಿರುವ ಎನ್‌ ಎಸ್‌ ಎಸ್  ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಇವರಿಗೆ ಸಂದಿರುವ ರಾಷ್ಟ್ರ ಪ್ರಶಸ್ತಿ ಎನ್‌ ಎಸ್‌ ಎಸ್ ಕೋಶದ ಎಲ್ಲಾ ಸೇವಕ/ಸೇವಕಿಯರಿಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಶಸ್ತಿ ಕರ್ನಾಟಕಕ್ಕೆ ದೊರೆಯುವಂತಾಗಲಿ ಎಂದು  ಸಚಿವ ಡಾ.ನಾರಾಯಣಗೌಡ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.