ಮನೆ ಉದ್ಯೋಗ ಮಂಗಳೂರು ವಿಶ್ವವಿದ್ಯಾಲಯ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮಂಗಳೂರು ವಿಶ್ವವಿದ್ಯಾಲಯ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಮಂಗಳೂರು ವಿಶ್ವವಿದ್ಯಾಲಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Join Our Whatsapp Group

ಒಟ್ಟು 4 ಟೆಕ್ನಿಷಿಯನ್, ಕುಕ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 10, 2023 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಯ ಮಾಹಿತಿ:

ಟೆಕ್ನಿಷಿಯನ್ ಗ್ರೇಡ್ II- 1

ಶಿಫ್ಟ್ ಮೆಕ್ಯಾನಿಕ್- 1

ಕುಕ್/ ಅಸಿಸ್ಟೆಂಟ್ ಕುಕ್- 2

ವಿದ್ಯಾರ್ಹತೆ:

ಟೆಕ್ನಿಷಿಯನ್ ಗ್ರೇಡ್ II- 12ನೇ ತರಗತಿ, ಐಟಿಐ

ಶಿಫ್ಟ್ ಮೆಕ್ಯಾನಿಕ್- 10ನೇ ತರಗತಿ

ಕುಕ್/ ಅಸಿಸ್ಟೆಂಟ್ ಕುಕ್- 10ನೇ ತರಗತಿ

ವಯೋಮಿತಿ:

ಮಂಗಳೂರು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಮಾಜಿ ಸೈನಿಕ, PH ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.

ಉಳಿದ ಎಲ್ಲಾ ಅಭ್ಯರ್ಥಿಗಳು- 200 ರೂ.

ಪಾವತಿಸುವ ಬಗೆ- ಚಲನ್/ ಡಿಮ್ಯಾಂಡ್ ಡ್ರಾಫ್ಟ್

ವೇತನ:

ಟೆಕ್ನಿಷಿಯನ್ ಗ್ರೇಡ್ II- ಮಾಸಿಕ ₹ 27,650- 52,650

ಶಿಫ್ಟ್ ಮೆಕ್ಯಾನಿಕ್- ಮಾಸಿಕ ₹21,400-42,000

ಕುಕ್/ ಅಸಿಸ್ಟೆಂಟ್ ಕುಕ್- ಮಾಸಿಕ ₹ 18,600-32,600

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಉದ್ಯೋಗದ ಸ್ಥಳ:

ಮಂಗಳೂರು

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ರಿಜಿಸ್ಟ್ರಾರ್

ಮಂಗಳೂರು ವಿಶ್ವವಿದ್ಯಾನಿಲಯ

ಮಂಗಳ ಗಂಗೋತ್ರಿ-574199

ದಕ್ಷಿಣ ಕನ್ನಡ

ಕರ್ನಾಟಕ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/03/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 10, 2023