ಮನೆ ಸುದ್ದಿ ಜಾಲ ಮಂಗಳೂರು: ಲವ್ ಜಿಹಾದ್ ಸಂತ್ರಸ್ತರಿಗೆ ಸಹಾಯವಾಣಿ ಆರಂಭಿಸಿದ ವಿಶ್ವ ಹಿಂದೂ ಪರಿಷತ್

ಮಂಗಳೂರು: ಲವ್ ಜಿಹಾದ್ ಸಂತ್ರಸ್ತರಿಗೆ ಸಹಾಯವಾಣಿ ಆರಂಭಿಸಿದ ವಿಶ್ವ ಹಿಂದೂ ಪರಿಷತ್

0

ಮಂಗಳೂರು: ಲವ್ ಜೆಹಾದ್’ನಿಂದ ಸಂತ್ರಸ್ತರಾದವರಿಗಾಗಿ ವಿಶ್ವ ಹಿಂದೂ ಪರಿಷತ್ ಸಹಾಯವಾಣಿ (ಹೆಲ್ಪ್  ಲೈನ್) ಆರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಬ್ಲ್ಯಾಕ್’ಮೇಲ್’ಗೆ ಒಳಗಾಗಿ ಜೀವನವನ್ನುಕಳೆದುಕೊಂಡಿದ್ದಾರೆ. ಅಂಥವರ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ.

9148658108ಗೆ ಕರೆ ಮಾಡಬಹುದು ಅಥವಾ9591658108ಗೆ ವಾಟ್ಸ್’ಆ್ಯಪ್ ಮಾಡಬಹುದು ಅಥವಾ ಸಂಸ್ಕೃತಿ ಸೇವಾ ಪ್ರತಿಷ್ಠಾನ, ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ದೇವಸ್ಥಾನ ಹತ್ತಿರ, ಕದ್ರಿ ಮಂಗಳೂರು, ಇ-ಮೇಲ್ antilovejihadmlr@gmail.com  ಸಂಪರ್ಕಿಸಬಹುದು.

ಲವ್ ಜಿಹಾದ್ ಪ್ರಕರಣ ಕಂಡುಬಂದರೆ ಅಥವಾ ಲವ್ ಜೆಹಾದ್’ಗೆ ಸಂಬಂಧಿಸಿ ಯಾವುದೇ ಸಲಹೆ, ದೂರುಗಳನ್ನು ಕೂಡ ತಿಳಿಸಬಹುದಾಗಿದೆ. ಅಗತ್ಯವಿದ್ದರೆ ಕಾನೂನು ಸಲಹೆ ನೀಡಲಾಗುವುದು. ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಕಟಣೆ ತಿಳಿಸಿದೆ.

ಹಿಂದಿನ ಲೇಖನಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಗೊತ್ತಿರದಿದ್ದರೆ ಮನೆ ಮಾಲೀಕ ಜವಾಬ್ದಾರನಲ್ಲ
ಮುಂದಿನ ಲೇಖನಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಳವೆ ಬಾವಿಗೆ ತಳ್ಳಿದ ಆರೋಪಿಗಳು: ಇಬ್ಬರ ಬಂಧನ