ಮನೆ ಅಪರಾಧ `ಸವಾಲ್’ ಪತ್ರಿಕೆಯ ವರದಿ ಫಲಶ್ರುತಿ: ಆರೋಪಿಗಳಿಗೆ ಜೈಲೇ ಖಾಯಂ

`ಸವಾಲ್’ ಪತ್ರಿಕೆಯ ವರದಿ ಫಲಶ್ರುತಿ: ಆರೋಪಿಗಳಿಗೆ ಜೈಲೇ ಖಾಯಂ

0

ಮೈಸೂರು: ಸವಾಲ್’ ಪತ್ರಿಕೆಯಲ್ಲಿಸುಧಾಳ ಆಟ ಮಹೇಶನ ಪಾಠ’ ತಲೆ ಬರಹದಡಿ ಪ್ರಕಟವಾಗಿದ್ದ ಸುದ್ದಿಗೆ ಫಲಶ್ರುತಿ ದೊರಕಿದ್ದು, ಆರೋಪಿಗಳಿಗೆ ಮೈಸೂರಿನ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಪ್ರಕರಣದ ಆರೋಪಿಗಳಾದ ಮಹೇಶ, ಸುಧಾ ಹಾಗೂ ದೀಪುರವರ ಭಾವಚಿತ್ರ.


ಏನಿದು ಪ್ರಕರಣ?:
ಪಿರಿಯಾಪಟ್ಟಣದ ಕೊತವಳ್ಳಿ ಗ್ರಾಮದ ನಿವಾಸಿಗಳಾದ ಸುಧಾ ಎಂಬ ಮಹಿಳೆಯೊಂದಿಗೆ ಸೇರಿ ಮಹೇಶ್ ಬಿನ್ ರೇವಪ್ಪ ಎಂಬ ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರನು ತಾನೇ ಸತ್ತಿರುವೆನೆಂದು ನಕಲಿ ಮರಣ ದೃಢೀಕರಣ ಸೃಷ್ಟಿಸಿಕೊಂಡು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಕೋಟ್ಯಾಂತರ ರೂ ಮೋಸ ಮಾಡಿರುವ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಖ್ಯೆ ೨೪೧/೨೦೨೧ ರಲ್ಲಿ ದೂರು ದಾಖಲಿಸಲಾಗಿತ್ತು.
`ಸವಾಲ್’ ಪತ್ರಿಕೆಯ ಸಹಯೋಗದಲ್ಲಿ ಪತ್ರಕರ್ತರಾದ ಕಸ್ತೂರಿ ಚಂದ್ರು, ವಕೀಲರಾದ ಸೋಮಣ್ಣ, ಶ್ರೀಕಾಂತ್ ಮತ್ತು ಪರಮೀಶ್ ಈ ಭಾರಿ ಭ್ರಷ್ಟಚಾರ ಪ್ರಕರಣವನ್ನು ಬಯಲು ಮಾಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿರುವ ಮೈಸೂರಿನ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಾದ ಸುಧಾ ಮತ್ತು ಮಹೇಶನಿಗೆ ಜಾಮೀನು ನಿರಾಕರಿಸಿದೆ.

ಹಿಂದಿನ ಲೇಖನಹೈಕೋರ್ಟ್​​ನಲ್ಲಿ ಹಿಜಾಬ್ ವಿವಾದ ವಿಚಾರಣೆ: ರುದ್ರಾಕ್ಷಿ, ಮೂಗುತಿ ಬಗ್ಗೆಯೂ ಗಹನ ಚರ್ಚೆ
ಮುಂದಿನ ಲೇಖನರಾಜ್ಯದಲ್ಲಿ ಪಿಯು, ಡಿಗ್ರಿ ಕಾಲೇಜು ಪುನರಾರಂಭ: ಹೆಚ್ಚಿದ ಭದ್ರತೆ