ಮಂಡ್ಯ: ಮನ್ಮುಲ್ ಮೆಗಾ ಡೈರಿ ಅಗ್ನಿ ಅವಘಡದಲ್ಲಿ 90 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಡಿಸಿ ಡಾ.ಕುಮಾರ್ ಮಾಹಿತಿ ನೀಡಿದ್ದಾರೆ.
ಮನ್ಮುಲ್ ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ ವೇಳೆ ಅಗ್ನಿಶಾಮಕ ಸಿಬ್ಬಂದಿ ತುರ್ತಾಗಿ ಆಗಮಿಸಿ ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ. ನಾವು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇವೆ. ಯಾವ ಕಾರಣಕ್ಕೆ ಅವಘಡ ನಡೆದಿದೆ ಅನ್ನೋದನ್ನ ತಿಳಿಯಲು ತನಿಖಾ ತಂಡ ರಚನೆಗೆ ಸೂಚನೆ ನೀಡಲಾಗಿದೆ. ತನಿಖೆ ವರದಿ ಬಂದ ಮೇಲೆ ಸೂಕ್ತ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.
ಅವಘಡ ಸಂದರ್ಭದಲ್ಲಿ ವಸ್ತುಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, 90 ಲಕ್ಷಕ್ಕೂ ಹೆಚ್ಚು ನಷ್ಟದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಪಡೆದು ಕ್ರಮ. ಎನ್.ಓ.ಸಿ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ಈಗಾಗಲೇ ಅಗ್ನಿಶಾಮಕದಳಕ್ಕೆ ವರದಿ ನೀಡಲು ಸೂಚನೆ ಕೊಟ್ಟಿದ್ದೇನೆ. ಅಗ್ನಿಶಾಮಕ ದಳದಿಂದ ಅನುಮತಿ ಪಡೆಯುವುದು ಅವಶ್ಯಕತೆ ಇದೆ. ವರದಿ ಬಂದ ಬಳಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.
ಮನ್ಮುಲ್ ಲೋಪ ಎದ್ದು ಕಾಣುತ್ತಿದೆ. ಉಲ್ಲಂಘನೆಯಾಗಿದ್ದಲ್ಲಿ ಕ್ರಮ ಕೈಗೊಳ್ಳಿತ್ತೇನೆ. ತನಿಖಾ ವರದಿ ಬಳಿಕ ಕ್ರಮ. ಸರ್ಕಾರಕ್ಕೂ ವರದಿ ಸಲ್ಲಿಸಿದ್ದೇನೆ. ಈ ಪ್ರಕರಣ ಸರ್ಕಾರದ ಗಮನದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.