ಮನೆ ರಾಜ್ಯ ಮಂತ್ರಿ ಮಾಲ್ ​ಗೆ ಮತ್ತೊಮ್ಮೆ ಬೀಗ: ಲೈಸೆನ್ಸ್​ ಕ್ಯಾನ್ಸಲ್ ಮಾಡಿದ ಬಿಬಿಎಂಪಿ

ಮಂತ್ರಿ ಮಾಲ್ ​ಗೆ ಮತ್ತೊಮ್ಮೆ ಬೀಗ: ಲೈಸೆನ್ಸ್​ ಕ್ಯಾನ್ಸಲ್ ಮಾಡಿದ ಬಿಬಿಎಂಪಿ

0

ಬೆಂಗಳೂರು: ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ​ಗೆ ಮತ್ತೊಮ್ಮೆ ಬೀಗ ಜಡಿದಿದ್ದಾರೆ.

ಮುಂಜಾನೆಯೇ ಮಾಲ್​ ಗೆ ಬೀಗ ಹಾಕಲಾಗಿದ್ದು ಲೈಸೆನ್ಸ್​ ಕ್ಯಾನ್ಸಲ್​​​ ಮಾಡಲಾಗಿದೆ.

ಮಂತ್ರಿ ಮಾಲ್​ ಸುಮಾರು 32 ಕೋಟಿ ವರೆಗೂ ತೆರಿಗೆ ಬಾಕಿ ಉಳಿಸಿಕೊಂಡಿದೆ. ಪಾಲಿಕೆ ಒನ್ ಟೈಂ ಪೇಮೆಂಟ್​ ಗೆ ಅವಕಾಶ ಕೊಟ್ಟಿತ್ತು. ಆದರೆ ಸೆಟಲ್​ ಆಗದಿರುವ ಕಾರಣ ಮಾಲ್ ​ಗೆ ಬೀಗ ಜಡಿದಿದೆ.

ಮಾರ್ಷಲ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಜಡಿಯಲಾಗಿದೆ. ತೆರಿಗೆ ಪಾವತಿಸದ ಹಿನ್ನೆಲೆ ಲೈಸೆನ್ಸ್ ಕೂಡ ರದ್ದು ಮಾಡಲಾಗಿದೆ.

ಮಾಲ್ ​​ನ ಮುಖ್ಯ ದ್ವಾರಕ್ಕೆ ಬೀಗ ಹಾಕುವುದರೊಂದಿಗೆ ನೋಟಿಸ್ ಕೂಡ ಅಂಟಿಸಲಾಗಿದೆ. ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆಯಂತೆ, ನಿಮ್ಮ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಬಿಬಿಎಂಪಿ ಆದೇಶ ಮೇರೆಗೆ ಬಾಕಿ ಆಸ್ತಿ ತೆರಿಗೆಗಳನ್ನು ಪಾವತಿಸದ ಕಾರಣಕ್ಕಾಗಿ ಆಸ್ತಿಯನ್ನು ಸೀಲ್ ಮಾಡಲಾಗಿದೆ ಎಂದು ಬ್ಯಾನರ್ ಅಳಡಿಸಲಾಗಿದೆ.