ಮನೆ ರಾಷ್ಟ್ರೀಯ ನಕಲಿ ವೈದ್ಯರಿಗೆ ಸಿಬಿಐ ಶಾಕ್: ಏಕಕಾಲಕ್ಕೆ 91 ಸ್ಥಳಗಳಲ್ಲಿ ದಾಳಿ

ನಕಲಿ ವೈದ್ಯರಿಗೆ ಸಿಬಿಐ ಶಾಕ್: ಏಕಕಾಲಕ್ಕೆ 91 ಸ್ಥಳಗಳಲ್ಲಿ ದಾಳಿ

0

ನವದೆಹಲಿ(Newdelhi): ವಿದೇಶದಲ್ಲಿ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಪಡೆದುಕೊಂಡು ದೇಶದಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಶಾಕ್ ನೀಡಿದ್ದು, ಏಕಕಾಲಕ್ಕೆ 91 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಬಿಹಾರ, ತಮಿಳುನಾಡು, ಹರಿಯಾಣ, ಸಿಕ್ಕಿಂ, ಮೇಘಾಲಯ, ಉತ್ತರ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ರಾಜಸ್ಥಾನ, ತೆಲಂಗಾಣ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಆಂದ್ರ ಪ್ರದೇಶ, ಪಂಜಾಬ್, ದಿಲ್ಲಿ ಸೇರಿ ದೇಶದ 91 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ನಕಲಿ ವೈದ್ಯಕೀಯ ಪ್ರಮಾಣ ಪತ್ರ, ನಕಲಿ ಅನುಮತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಿದೇಶದಲ್ಲಿ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಂಡಿದ್ದ ಕೆಲವರು ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ವೃತ್ತಿಗೆ ಸೇರಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಡಿ.21ರಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ಹಿಂದಿನ ಲೇಖನವಕೀಲರ ಮೇಲೆ ದೌರ್ಜನ್ಯ: ಹಾನಗಲ್ ಪಿಎಸ್’ಐ ಶ್ರೀಶೈಲ ಪಟ್ಟಣಶೆಟ್ಟಿ ಅಮಾನತು
ಮುಂದಿನ ಲೇಖನಅಹಮದಾಬಾದ್’​ನಲ್ಲಿ  ನಡೆದ ಹೀರಾಬೆನ್ ಅವರ ಅಂತ್ಯಸಂಸ್ಕಾರ