ಮೈಸೂರು : ಆತನಿಗೆ ಮದುವೆಯಾಗಿದ್ದರು ಸಹ ಇನ್ಸ್ಟಾಗ್ರಾಮ್ ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಬಳಿಕ ಭೀಕರವಾಗಿ ಕೊಲೆಯಾದ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸೂರ್ಯ ಎಂದು ತಿಳಿದುಬಂದಿದೆ. ಮದುವೆಯಾಗಿದ್ದರು ಸಹ ಅನೈತಿಕ ಸಂಬಂಧ ಹೊಂದಿದ ಸೂರ್ಯನನ್ನು ಹತ್ಯೆ ಮಾಡಲಾಗಿದೆ ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಎಂಬಾಕೆಯನ್ನು ಸೂರ್ಯ ಪರಿಚಯಿಸಿಕೊಂಡಿದ್ದ. ಇದರಿಂದ ಬೇಸತ್ತು ಸೂರ್ಯನ ಪತ್ನಿ ಆಗುತ್ತಾ ತಾಯಿ ಮನೆ ಬಿಟ್ಟು ಹೋಗಿದ್ದರು.
ಇಬ್ಬರು ಜೊತೆಗಿರುವ ಖಾಸಗಿ ಫೋಟೋ ಸೂರ್ಯ ಸ್ಟೇಟಸ್ ಗೆ ಹಾಕಿದ್ದ. ಕೆಲ ದಿನಗಳಿಂದ ಹಣ ಹಾಗೂ ಆಸ್ತಿಗಾಗಿ ಶ್ವೇತ ಸೂರ್ಯನನ್ನು ಪೀಡಿಸಿದ್ದಾಳೆ. ಹಣಕ್ಕೆ ಬಿಡಿಸುತ್ತಿರುವ ಕುರಿತು ಸೂರ್ಯ ತನ್ನ ಕುಟುಂಬಸ್ಥರಿಗೂ ತಿಳಿಸಿದ್ದ.ನಿನ್ನೆ ರಾತ್ರಿ ಶ್ವೇತಾ ಜೊತೆ ತೋಟದಲ್ಲಿದ್ದ ಸೂರ್ಯ ಇಂದು ಬೆಳಗಾಗುವಷ್ಟರಲ್ಲಿ ಕೊಲೆಯಾಗಿದ್ದಾನೆ. ಶ್ವೇತಾಳೆ ಕೊಲೆ ಮಾಡಿದ್ದಾಳೆ ಎಂದು ಕುಉಂಬದವರು ಆರೋಪಿಸಿದ್ದಾರೆ. ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.