ಮನೆ ರಾಜ್ಯ ಮಾರ್ಥಾಸ್ ಖಾಸಗಿ ಆಸ್ಪತ್ರೆ ಮೇಲ್ಚಾವಣಿ ಕುಸಿತ: ಅವಶೇಷದಡಿ ನಾಲ್ವರು ಕಾರ್ಮಿಕರು, ಇಬ್ಬರ ರಕ್ಷಣೆ

ಮಾರ್ಥಾಸ್ ಖಾಸಗಿ ಆಸ್ಪತ್ರೆ ಮೇಲ್ಚಾವಣಿ ಕುಸಿತ: ಅವಶೇಷದಡಿ ನಾಲ್ವರು ಕಾರ್ಮಿಕರು, ಇಬ್ಬರ ರಕ್ಷಣೆ

0

ಬೆಂಗಳೂರು(Bengaluru):  ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ಖಾಸಗಿ‌ ಆಸ್ಪತ್ರೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ನಾಲ್ವರು ಕಾರ್ಮಿಕರು ಅವಶೇಷದಡಿ ಸಿಲುಕಿಕೊಂಡಿದ್ದು,  ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ಸೆಂಟ್ ಮಾರ್ಥಾಸ್ ಆಸ್ಪತ್ರೆಯ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕಾಗಿ ನಾಲ್ವರು ಕಾರ್ಮಿಕರು ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೆಲಸಕ್ಕಾಗಿ‌ ಆಗಮಿಸಿದ್ದರು. ಈ ಸಂದರ್ಭ ಏಕಾಏಕಿ ಛಾವಣಿ ಕುಸಿದು ಕೆಳಗೆ ಬಿತ್ತು.‌ ಕೆಲಸ ಮಾಡುತ್ತಿದ್ದ ನಾಲ್ವರು ಅವಶೇಷದಡಿ ಸಿಲುಕಿಕೊಂಡರು. ಕೂಡಲೇ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದರು. ಅವಶೇಷದಡಿ ಮತ್ತಿಬ್ಬರು ಸಿಲುಕಿಕೊಂಡಿದ್ದು, ಜೆಸಿಬಿ ಬಳಸಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ . . .ಮಗಳ ಶವದೊಂದಿಗೆ 4 ದಿನ ಕಳೆದ ಮಾನಸಿಕ ಅಸ್ವಸ್ಥ ತಾಯಿ