ಬೆಂಗಳೂರು(Bengaluru)-ಹುತಾತ್ಮ ಯೋಧ ವಿಜಯಪುರ ಜಿಲ್ಲೆಯ ಕಾಶಿರಾಯ ಬಮ್ಮನಳ್ಳಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಹುತಾತ್ಮ ಯೋಧ ಕಾಶಿರಾಯ ಬಮ್ಮನಳ್ಳಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿ ರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಕನ್ನಡಿಗ ಯೋಧನೊಬ್ಬ ಪಡೆದಿರುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಬಮ್ಮನಳ್ಳಿ ಅವರ ಶೌರ್ಯ, ಸಾಹಸ, ಬಲಿದಾನ ಗಳಿಗೆ ಸಂದ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿರುವುದಲ್ಲದೆ, ಬಮ್ಮನಳ್ಳಿ ಅವರ ಕುಟುಂಬಕ್ಕೆ ಸರ್ಕಾರ ನಿಯಮಾನುಸಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕಳೆದ ಜುಲೈನಲ್ಲಿ ಪಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಕಾಶಿರಾಯ ಬಮ್ಮನಳ್ಳಿ ಹುತಾತ್ಮರಾಗಿದ್ದರು.