ಶಿವಮೊಗ್ಗ: ಇಲ್ಲಿನ ಕೆಂದ್ರ ಕಾರಾಗೃಹ ಕ್ಕೆ ಬುಧವಾರ(ಆ 28) ಬೆಳ್ಳಂಬೆಳಗ್ಗೆ ಎಸ್ ಪಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ 120 ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡದಿಂದ ಕಾರ್ಯಾಚರಣೆ ಮತ್ತು ಬ್ಯಾರಕ್ ತಪಾಸಣೆ ನಡೆಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿಗಳಿಬ್ಬರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆತರುತ್ತಿರುವ ಮುನ್ನವೇ ನಡೆದ ದಾಳಿ ಮಹತ್ವ ಪಡೆದುಕೊಂಡಿದೆ.
ಆರೋಪಿಗಳಾದ ಲಕ್ಷ್ಮಣ ಹಾಗು ಜಗದೀಶ್ ಅವರನ್ನು ಪೊಲೀಸರು ಶಿವಮೊಗ್ಗ ಕಾರಾಗೃಹಕ್ಕೆ ಕರೆತರುತ್ತಿದ್ದಾರೆ.ತಪಾಸಣೆ ವೇಳೆ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.