ಮನೆ ಅಪರಾಧ ಬಾರ್ ಸಿಬ್ಬಂದಿ ಮೇಲೆ ಹಲ್ಲೆ: ಕೋಲಾರ ಗ್ರಾಮಾಂತರ ಠಾಣಾ ಎಎಸ್ ಐ ಅಮಾನತು

ಬಾರ್ ಸಿಬ್ಬಂದಿ ಮೇಲೆ ಹಲ್ಲೆ: ಕೋಲಾರ ಗ್ರಾಮಾಂತರ ಠಾಣಾ ಎಎಸ್ ಐ ಅಮಾನತು

0

ಕೋಲಾರ: ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯ ಎಎಸ್ ಐ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾರಾಯಣ ಆದೇಶ ಹೊರಡಿಸಿದ್ದಾರೆ.

ಕಳೆದ ಶನಿವಾರ ಬಂಗಾರಪೇಟೆ ವೃತ್ತದಲ್ಲಿರುವ ಬಾರ್’​ನ​​ ಸಿಬ್ಬಂದಿ ತನಗೆ ನಮಸ್ಕಾರ ಹೇಳಿಲ್ಲವೆಂದು ಕುಡಿದ ಮತ್ತಿನಲ್ಲಿ ಎಎಸ್​’ಐ ನಾರಾಯಣಸ್ವಾಮಿ ಗಲಾಟೆ ಮಾಡಿದ್ದು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಎಎಸ್ ​​ಐ ಗಲಾಟೆ ಮಾಡಿರುವ ವಿಡಿಯೋ ವೈರಲ್​​ ಆಗಿದೆ.

ಪ್ರಕರಣ ಸಂಬಂಧ ಎಎಸ್ ​ಐ ನಾರಾಯಣ ಸ್ವಾಮಿ ಬಾರ್​ ಸಿಬ್ಬಂದಿ ವಿರುದ್ಧ ಎಸ್​​ ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ಸಮೇತ ಎಎಸ್ ​ಐ ನಡೆ ವಿರುದ್ಧ ಬಾರ್​ ಅಸೋಷಿಯೇಷನ್​ ಎಸ್​​ ಪಿಗೆ ದೂರು ನೀಡಿದೆ. ಹೀಗಾಗಿ ಇಲಾಖೆಗೆ ಅಗೌರವ, ದುರ್ನಡತೆ, ಬೇಜವಾಬ್ದಾರಿ, ಉದಾಸೀನ ತೋರಿದ ನಾರಾಯಣ ಸ್ವಾಮಿಯನ್ನು ಅಮಾನತು ಮಾಡಲಾಗಿದೆ.

ಹಿಂದಿನ ಲೇಖನತಮಿಳುನಾಡಿನಲ್ಲಿ ಟ್ಯಾಂಕರ್ ಟ್ರಕ್ – ಕಾರು ನಡುವೆ ಅಪಘಾತ: ಐವರು ಸಾವು
ಮುಂದಿನ ಲೇಖನಬಳ್ಳಾರಿ ಆರ್ ​ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಇಬ್ಬರು ವಶಕ್ಕೆ