ಮನೆ ರಾಷ್ಟ್ರೀಯ ಬಾಲ್ಯ ವಿವಾಹ ವಿರುದ್ಧ ಪೊಲೀಸರ ಬೃಹತ್ ಕಾರ್ಯಾಚರಣೆ: 1800 ಕ್ಕೂ ಹೆಚ್ಚು ಮಂದಿ ಬಂಧನ

ಬಾಲ್ಯ ವಿವಾಹ ವಿರುದ್ಧ ಪೊಲೀಸರ ಬೃಹತ್ ಕಾರ್ಯಾಚರಣೆ: 1800 ಕ್ಕೂ ಹೆಚ್ಚು ಮಂದಿ ಬಂಧನ

0

ಗುವಾಹಟಿ: ಬಾಲ್ಯ ವಿವಾಹ ವಿರುದ್ಧದ ಪೊಲೀಸರ ಬೃಹತ್ ಕಾರ್ಯಾಚರಣೆ  ಇಂದು ಬೆಳಿಗ್ಗೆಯಿಂದಲೇ  ಆರಂಭವಾಗಿದ್ದು, 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಇನ್ನೂ ಕೆಲವು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ಬಾಲ್ಯ ವಿವಾಹ ಪಿಡುಗಿನ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಿಎಂ ಹಿಮಂತ್ ಬಿಸ್ವಾ ತಿಳಿಸಿದ್ದಾರೆ. ರಾಜ್ಯದಲ್ಲಿ ಬಾಲ್ಯ ವಿವಾಹ ನಿಗ್ರಹ ತಡೆ ಕಾಯ್ದೆಯನ್ನು ಉಲ್ಲಂಘಿಸಿರುವ 1,800ಕ್ಕೂ ಅಧಿಕ ಮಂದಿಯನ್ನು ಈವರೆಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದು ಮಹಿಳೆಯರ ಮೇಲಿನ ಪೈಶಾಚಿಕ ಹಾಗೂ ಕ್ಷಮಿಸಲಾರದ ಕೃತ್ಯವಾಗಿದೆ ಎಂದು ಬಿಸ್ವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗಾಗಲೇ ರಾಜ್ಯಾದ್ಯಂತ 4,000ಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.