ಮನೆ ರಾಷ್ಟ್ರೀಯ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

0

ಜಮ್ಮು (Jammu): ದಿಢೀರ್ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯನ್ನು ಸೋಮವಾರ ಬೆಳಿಗ್ಗೆ ಪುನರಾರಂಭಿಸಲಾಗಿದೆ.

ದಕ್ಷಿಣ ಕಾಶ್ಮೀರದ ಪವಿತ್ರ ಗುಹಾಲಯದ ಸಮೀಪದಲ್ಲಿ ಜುಲೈ 8ರಂದು ಉಂಟಾದ ದಿಢೀರ್ ಪ್ರವಾಹದಿಂದಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಈಗ ತೀರ್ಥಯಾತ್ರೆ ಪುನರಾರಂಭವಾಗಿದ್ದು, ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಜಮ್ಮುವಿನ ಮೂಲ ಶಿಬಿರದಿಂದ ತೆರಳಲು ಪ್ರಾರಂಭಿಸಿವೆ.

ಪ್ರ‌ವಾಹದಿಂದಾಗಿ ಶಿಬಿರಗಳಲ್ಲಿ ತಂಗಿದ್ದ ಯಾತ್ರಿಕರಲ್ಲಿ 16 ಜನರು ಮೃತಪಟ್ಟು, ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ. ಅಮರನಾಥ ಕ್ಷೇತ್ರದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಆದರೆ ಬದುಕುಳಿಯುವ ಸಾಧ್ಯತೆ ಕ್ಷೀಣವಾಗಿದೆ ಎನ್ನಲಾಗಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಮಳೆಗಾಲದಲ್ಲಿ ಸವಿಯಿರಿ ಹೆಸರು ಬೇಳೆ ಪಕೋಡ