ಮನೆ ಯೋಗಾಸನ ಮತ್ಸ್ಯಾಸನ

ಮತ್ಸ್ಯಾಸನ

0

    ಮತ್ಸ್ಯವೆಂದರೆ ಮೀನು. ವಿಷ್ಣುವಿನ ದಶಾವತಾರಗಳಲ್ಲಿ ಮೊದಲನೆಯದಾದ ‘ಮತ್ಸ್ಯವತಾರಕ್ಕೆ’ ಈ ಆಸನವನ್ನು ಮೀಸಲಾಗಿಸಿದೆ. ಸರ್ವಶಕ್ತ ಸರ್ವಜ್ಞ ಸರ್ವಾಂತರ್ಯಾಮಿಯೂ ಆಗಿ,ಜಗತ್ತಿನ ಆಗೂಹೋಗುಗಳಿಗೆ ಕಾರಣವಾದ ಮತ್ತು ಸರ್ವ ವ್ಯಾಪ್ತಿಯಾದ ವಿಷ್ಣುವೆಂಬ ದೈವವು ತಾನು ನಿರಾಕರನಾದರೂ ಕೂಡ, ತನ್ನಿಂದ ಸೃಷ್ಟಿಸಲ್ಪಟ್ಟ ಈ ಸ್ಥಾವರ ಜಗನ್ಮಾತ್ಮಕವಾದ ಧರ್ಮ ಸಾಮ್ರಾಜ್ಯವೆನಿಸಿದ ಈ ಪ್ರಪಂಚದಲ್ಲಿ ಅಧರ್ಮಕ್ಕೆ ಎಡಯುಂಟಾಗ ಬಾರದೆಂದೆಣಿಸಿ, ಯಾವಾಗ ಅಧರ್ಮದ ಕಳೆಗಳು ಹೆಚ್ಚಿ ಧರ್ಮದ ಬೆಳೆಗಳನ್ನು ಹಾಳು ಮಾಡಲು ತೊಡಗುವದೋ, ಆಗೆಲ್ಲವೂ ತಾನು ದುಷ್ಟಶಿಕ್ಷಣ, ಶಿಷ್ಟಪರಿಪಾಲನೆಯ ಕಾರ್ಯದಲ್ಲಿ ಆ ಸನ್ನಿವೇಶ ತಕ್ಕಂತೆ ಆಕಾರವನ್ನು ಧರಿಸಿ, ಅಂದರೆ ಅವತರಿಸಿ ತಾನು ಸಂಕಲ್ಪಿಸಿದ ಕಾರ್ಯವನ್ನು ನೆರವೇರಿಸಿದನು ಎಂಬುದಕ್ಕೆ ಪುರಾಣಗಳೆಲ್ಲೆಲ್ಲ ಆಧಾರವುಂಟು.ಶ್ರೀ ಮಹಾವಿಷ್ಣುವು ಈ ರೀತಿಯಾದ ಕಾರ್ಯಸಾಧನೆಗೆ ಹತ್ತು ಅವತಾರಗಳನ್ನೇತ್ತಬೇಕಾಯಿತು.ಅವುಗಳಲ್ಲಿ ಮೊದಲನೆಯದೇ ಮತ್ಸ್ಯವತಾರ ಈ ಅವತಾರವನ್ನೆ ತ್ತಲು ಕಾರಣವಾದ ಕಥೆಯನ್ನು ಮತ್ಸ್ಯ ಪುರಾಣದಲ್ಲಿ ಎರಡು ಬಗೆಯಲ್ಲಿ ತಿಳಿಸಿದೆ. ಅದರಲ್ಲಿ ಮೊದಲನೆಯದು ಹೀಗಿದೆ : ಸೃಷ್ಟಿಕರ್ತನಾದ ಬ್ರಹ್ಮನು, ಮೊದಲು ಜ್ಞಾನಗ್ರಂಥಿಗಳೆಂಬ ಚತುರ್ವೇದ,  (ಋಕ್, ಯಜುರ್, ಸಾಮ, ಮತ್ತು ಅರ್ಥವೇದ)ಗಳನ್ನು ರಚಿಸಿ, ಮೂಲಕ ಪ್ರಪಂಚದ ಉದ್ಧಾರಕ್ಕಾಗಿ ಅವನ್ನು ರಚಿಸಲ್ಪಟ್ಟ, ಆದರೆ ಅಧರ್ಮಿ ಮತ್ತು ಅಜ್ಞಾನಿಯಾದ ತಾಮಾಸುರ (ಸೋಮಕಾಸುರ) ಎಂಬುವನು, ಅಪಚಾರ ಮಾಡಲೆಣಿಸಿ, ಆ ವೇದಗಳನ್ನು ಕದ್ದು ಸಮುದ್ರದೊಳಹೊಕ್ಕನು. ಇದಕ್ಕಾಗಿ ಬ್ರಹ್ಮನು ದಿಕ್ಕು ತೋರದೆ ವಿಷ್ಣುವಿನಲ್ಲಿ ಮೊರೆಯಿಡಲು ವಿಷ್ಣುದೇವನು, ನೀರಿನಲ್ಲಿ ಪ್ರವೇಶಿಸಬಹುದಾದ ಮತ್ಸ್ಯವತಾರವನ್ನು ತಳೆದು, ಆ ದೈತ್ಯನನ್ನು ಬೆನ್ನಟ್ಟಿ ಅವನ್ನನ್ನು ಕೊಂದು ಮತ್ತೆ ವೇದಗಳನ್ನು ಕೊಂಡೊಯ್ದು ಬ್ರಹ್ಮನಿಗಿತ್ತನು. ಇದರ ನೆರವಿನಿಂದ ಚತುರ್ಮುಖ ಬ್ರಹ್ಮನು ಸೃಷ್ಟಿಕಾರ್ಯವನ್ನು ನೆರವೇರಿಸಿದ.

Join Our Whatsapp Group

        ಎರಡನೆಯ ಕಥೆ ಹೀಗಿದೆ ಯುಗಾಂತ್ಯದಲ್ಲಿ ಪ್ರಪಂಚವು ಜಲಪ್ರಳಯಕ್ಕೆ ತುತ್ತಾದಾಗ, ಸಮಸ್ತ ಜೀವರಾಶಿಗಳಿಗೂ ಅದರೊಡನೆಯೇ ನಾಶವಾಗುವ ಸಂದರ್ಭವೊದಗಿತು. ಆಗ ಬ್ರಹ್ಮನು ಮತ್ತೆ ಸೃಷ್ಟಿಕಾರ್ಯದಲ್ಲಿ ತೊಡಗ ಬೇಕಾಗಿತ್ತು. ಇದನ್ನು ತಪ್ಪಿಸಲು ಶ್ರೀವಿಷ್ಣುದೇವನು, ಮುಂದಿನ ಉತ್ಪತ್ತಿ ಸಾಧಕವಾದ 84 ಲಕ್ಷ  ಜೀವರಾಶಿಗಳನ್ನು ಬೀಜ ರೂಪದಿಂದ ರಕ್ಷಿಸುವುದಕ್ಕಾಗಿಯೂ, ಸಪ್ತರ್ಷಿ ಮಂಡಲವನ್ನು ಈ ಪ್ರಳಯ ದಿಂದುಳಿಸುವ ಸಲುವಾಗಿಯೂ, ವಿಷ್ಣುವಿನ ಸಲಹೆಯಂತೆ ಪ್ರಚೇತ ಸಮನವು ಬೀಜರೂಪದ ಸಮಸ್ತ ಜೀವರಾಶಿಗಳನ್ನೂ ಮತ್ತು ಕ್ಯಾಶ್ಯಪಾದಿ ಸಪ್ತರ್ಷಿಗಳನ್ನೂ ಒಂದು ದೊಡ್ಡ ನಾವೆಯಲಿಟ್ಟು,ಅದನ್ನು ನೀರಿನಲ್ಲಿ ತೇಲಿಬಿಟ್ಟಾಗ,ವಿಷ್ಣುವು ಮತ್ಸ್ಯವತಾರವನ್ನು ತಾಳಿ ತನಗಿದ್ದ ಮುಂದಿನ ಕೊಂಬಿಗೆ ಅದನ್ನು ಕಟ್ಟಿ ಮೇರುಪರ್ವತದ ಬಳಿ ಅದನ್ನೂಯ್ದು.  ಅದರ ಶಿಖರಕ್ಕೆ ಕಟ್ಟಿಸಿದ . ಆ ಜೀವವರ್ಗವೇ ಮುಂದಿನ ಯುಗಗಳಲ್ಲಿ( ಬ್ರಹ್ಮನು ಮತ್ತೆ ಸೃಷ್ಟಿಕರ್ಮ ಕೈಗೊಳ್ಳದಂತೆ) ನೆಲೆಯಾಗಿ ನಿಲ್ಲುವಂತೆ ಅನುಗ್ರಹಿಸಿದ ;ಎಂಬುದೇ ಈ ಮತ್ಸ್ವತಾರದ ಕಥೆ. ಒಟ್ಟಿನಲ್ಲಿ ಮಹಾವಿಷ್ಣುವು ದುಷ್ಟಶಿಕ್ಷಣ ಶಿಷ್ಟ ಪರಿಪಾಲನೆಗಾಗಿ ಕೈಗೊಂಡ ದಶಾವತಾರಗಳಲ್ಲಿ “ಮತ್ಸ್ವತಾರ ವೆಂಬುದು ಮೊದಲನೆಯದು. ಅಂಥ ಮತ್ಸ್ಯ ವತಾರಿ ಯಾದ ವಿಷ್ಣುದೇವನಿಗೆ ಈ ಹಾಸನವನ್ನು ಅರ್ಪಿಸಿದೆ.

ಅಭ್ಯಾಸ ಕ್ರಮ

1. ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು.

2. ಬಳಿಕ ಕಾಲುಗಳನ್ನು ನೀಳವಾಗಿ, ಚಾಚಿ ಅಂಗತಲೆ ಯಾಗಿ ನೆಲದಮೇಲೆ ಮಲಗಬೇಕು.

3. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಎದೆಯನ್ನು ಕತ್ತನ್ನೂ ನೆಲದಿಂದ ಮೇಲೆಬ್ಬಿಸಿ,  ಬೆನ್ನನ್ನು ಬಿಲ್ಲಿನಂತೆ ಬಗ್ಗಿಸಿ, ತಲೆಯನ್ನು ಹಿಂದಕ್ಕೆಳೆದು, ನೆಡುನೆತ್ತಿಯನ್ನು ನೆಲದ ಮೇಲೆ ಉರಿಡಬೇಕು. ತಲೆಯನ್ನು ಮತ್ತಷ್ಟು ಹಿಂದಕ್ಕೆಳೆದು ಕಾಲುಗಳನ್ನು ಕೈಗಳ ನೆರವಿನಿಂದ ಒಂದಕ್ಕೊಂದು ತೊಡರಿಸಿ, ಬೆನ್ನಿನ ಕಮಾನನ್ನು ಮತ್ತಷ್ಟು ಹೆಚ್ಚಿಸಬೇಕು.

4. ಈಗ ಕೈಗಳನ್ನು ಕಾಲುಗಳಿಂದಾ ಚೆ ತೆಗೆದು, ತೋಳುಗಳನ್ನು ಬಗ್ಗಿಸಿ ಮೊಣಕೈಗಳನ್ನು ಕೈಗಳಿಂದ ಪರಸ್ಪರ ಹಿಡಿದು, ಮುಂಗೈಗಳನ್ನು ತಲೆಯ ಹಿಂಬದಿಯಲ್ಲಿ ನೆಲದ ಮೇಲೆ ಊರಿಡಬೇಕು.

5. ಈ ಭಂಗಿಯಲ್ಲಿ 30 ರಿಂದ 60 ಸೆಕೆಂಡುಗಳಕಾಲ ನೀಳವಾಗಿ ಉಸಿರಾಟ ನಡೆಸುತ್ತ ನಿಲ್ಲಬೇಕು.

6. ಆ ಬಳಿಕ ಉಸಿರನ್ನು ಒಳಕ್ಕೆಳೆ ದು ಮತ್ತೆ ಪದ್ಮಾಸನಕ್ಕೆ ಹಿಂದಿರುಗಿ,ಕಾಲುಗಳನ್ನು ಬಿಚ್ಚಿ ವಿಶ್ರಮಿಸಿಕೊಳ್ಳಬೇಕು.

7. ಈಗ ಕಾಲುಗಳ ಸ್ಥಾನಗಳನ್ನು ಬದಲಿಸಿ,ಇದೇ ವಿಧವಾದ ಭಂಗಿಯನ್ನು ಇನ್ನೊಂದು ಕಡೆಯೂ ಅಷ್ಟೇಕಾಲ ಅಭ್ಯಸಿಸಬೇಕು.

8. ಮೂರನೆಯ ಮತ್ತು ನಾಲ್ಕನೆಯ ಸ್ಥಿತಿಗಳನ್ನು ಕೈವಶಮಾಡಿಕೊಳ್ಳಲು ಕಷ್ಟವಾದರಲ್ಲಿ ಕಾಣಿಸಿದಂತೆ ನೆಲದ ಮೇಲೆ ಬೆನ್ನಿನ ಭಾಗವನ್ನಿಟ್ಟು ಕೈಗಳನ್ನು ತಲೆಯಿಂದ ಮೇಲ್ಭಾಗಕ್ಕೆ ಉದ್ದವಾಗಿ ಚಾಚಬೇಕು.

ಪರಿಣಾಮಗಳು 

ಈ ಭಂಗಿಯ ಅಭ್ಯಾಸದಿಂದ ಬೆನ್ನಭಾಗವೆಲ್ಲವೂ ಚೆನ್ನಾಗಿ ಹಿಗ್ಗುವುದಲ್ಲದೆ,  ಎದೆಯ ಭಾಗವೂ ವಿಶಾಲವಾಗುತ್ತದೆ. ಮತ್ತು ಉಸಿರಾಟವು ತುಂಬಿ ನಡೆಯುತ್ತದೆ. ಕತ್ತಿನ ಭಾಗವನ್ನು ಈ ಆಸನಾಭ್ಯಾಸದಲ್ಲಿ ಹಿಗ್ಗಿಸಬೇಕಾಗಿರುವುದರಿಂದ ಗೋಮಾಳ ಅಥವಾ ಕಂಠ ಮಣಿಯ ಒಳಭಾಗಗಳು ಹೆಚ್ಚು ಪ್ರಯೋಜನವನ್ನು ಪಡೆಯುತ್ತದೆ. ಇದೂ ಅಲ್ಲದೆ ವಸ್ತಿಕುಹರದ ಬಳಿ ಇರುವ ಕೀಲುಗಳು, ಹೆಚ್ಚಿನ ಸ್ಥಿತಿ ಸ್ಥಾಪಕತ್ವವನ್ನು ಪಡೆಯುತ್ತದೆ.ಮೋಳೆಯ ಉಪದ್ರವದಿಂದ ನೆತ್ತರೂ ಸುರಿಯುತ್ತಿದ್ದರೆ ಈ ಆಸನದಿಂದ ಗುಣಹೊಂದಲು ಅವಕಾಶವಿದೆ.

ಹಿಂದಿನ ಲೇಖನಕಿವಿ ನೋವು
ಮುಂದಿನ ಲೇಖನಹಾಸ್ಯ