ಮೈಸೂರು (Mysuru):ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಮತದಾರರ ಸಭೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ ಅವರನ್ನು ಕಡೆಗಣಿಸಿದ ಘಟನೆ ನಡೆದಿದೆ.
ಸಭೆಯ ವೇದಿಕೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಜಾಗವಿರಲಿಲ್ಲ. ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ವೇದಿಕೆಯ ಅತಿಥಿ ಎಂದು ಹಾಕಿದ್ದರು. ಆದರೆ ಅವರಿಗೆ ವೇದಿಕೆಯಲ್ಲಿ ಜಾಗ ಸಿಗಲಿಲ್ಲ. ಹೀಗಾಗಿ ವೇದಿಕೆಯ ಮುಂಭಾಗ ಕಾರ್ಯಕರ್ತರ ಜೊತೆ ಕುರ್ಚಿಯಲ್ಲಿ ಕುಳಿತುಕೊಂಡರು. ಮೇಯರ್ ಆದಾಗಿಂದಲೂ ಪಾಲನೇತ್ರರವರಿಗಿದೆ ವೇದಿಕೆಯಲ್ಲಿನ ಕುರ್ಚಿ ಸಮಸ್ಯೆಯಾಗುತ್ತಲೇ ಇದೆ.
ಸುನಂದಾ ಪಾಲನೇತ್ರ ಅವರು ಮೈಸೂರು ನಗರ ಪಾಲಿಕೆಯ ಬಿಜೆಪಿಯ ಮೊದಲ ಮೇಯರ್. ಆದರೂ ಪ್ರತೀ ಬಾರಿ ಕಾರ್ಯಕ್ರಮಗಳಲ್ಲಿ ಸುನಂದಾ ಪಾಲನೇತ್ರ ಅವರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಪಾಲನೇತ್ರ ಅವರು ಹೆಸರಿಗಷ್ಟೇ ಮೇಯರ್ ಆದ್ರ ಎಂಬ ಪ್ರಶ್ನೆ ಮೂಡಿದೆ.
ಸಪ್ಪೆ ಮೋರೆ ಹಾಕಿ ಮಹಿಳಾ ಕಾರ್ಯಕರ್ತೆಯರೊಂದಿಗೆ ಕುಳಿತಿದ್ದ ಪಾಲನೇತ್ರ ಅವರಿಗೆ ಸಭೆ ಪ್ರಾರಂಭವಾಗಿ ಅರ್ಧಗಂಟೆಯ ನಂತರ ವೇದಿಕೆಯಲ್ಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಕೊನೆಗೆ ಪಾಲನೇತ್ರ ಅವರು ಇದು ನನಗೆ ಹೊಸದೇನಲ್ಲ ಎಂಬಂತೆ ವೇದಿಕೆಯಲ್ಲಿ ಆಸೀನರಾದರು.