ಮಂಗಳೂರು: ಸಾಲಗಾರನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ತಾನು ನಿರಪರಾಧಿಯಾಗಿದ್ದುಇಡೀ ಪ್ರಕರಣ ಕಟ್ಟುಕಥೆಯಾಗಿದೆ ಹಾಗಾಗಿ ಜಾಮೀನು ನೀಡಬೇಕು ಎಂದು ಅರ್ಜಿದಾರ ತನ್ನ ಮಧ್ಯಂತರ ಜಾಮೀನು ಅರ್ಜಿಯಲ್ಲಿ ಕೋರಿದ್ದು, ಈ ಹಂತದಲ್ಲಿ ಜಾಮೀನು ನೀಡುವುದಕ್ಕೆ ಯಾವುದೇ ನ್ಯಾಯಯುತ ಆಧಾರ ಕಂಡುಬರುವುದಿಲ್ಲ ಎಂದು ಕೋರ್ಟ್ ಹೇಳಿ ಅರ್ಜಿ ತಿರಸ್ಕರಿಸಿದೆ. ಮುಂದಿನ ಪ್ರಧಾನ ಅರ್ಜಿ ವಿಚಾರಣೆ ಡಿ.27ರಂದು ನಡೆಯಲಿದೆ.