ಮೈಸೂರು: ಲಂಚ ಸ್ವೀಕರಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 4ರ ಜೂನಿಯರ್ ಇಂಜಿನಿಯರ್ ಗುರು ಸಿದ್ದಯ್ಯ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.
‘ಮಹಿಳೆಯು ಹೊಸ ಕಟ್ಟಡ ನಿರ್ಮಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಯೋಜನೆ ಮಂಜೂರಾತಿ ಕುರಿತು ವಿಚಾರಿಸಿದಾಗ ಗುರುಸಿದ್ಧಯ್ಯ ₹ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ₹ 3 ಸಾವಿರವನ್ನು ಮುಂಗಡ ಪಡೆದಿದ್ದರು. ಉಳಿದ 3 ಸಾವಿರ ಲಂಚದ ಹಣವನ್ನು ಗುರುಸಿದ್ಧಯ್ಯ ತಮ್ಮ ಕಚೇರಿಯಲ್ಲಿ ಪಡೆಯುವಾಗ ದಾಳಿ ನಡೆಸಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.