ಮನೆ ಸುದ್ದಿ ಜಾಲ ಮೇ 16ಕ್ಕೆ ರಕ್ತ ಚಂದ್ರಗ್ರಹಣ

ಮೇ 16ಕ್ಕೆ ರಕ್ತ ಚಂದ್ರಗ್ರಹಣ

0

ನವದೆಹಲಿ(New Delhi): 2022ನೇ ವರ್ಷದ ಮೊದಲ ರಕ್ತ ಚಂದ್ರಗ್ರಹಣ ಮೇ 15, 16ರಂದು ನಡೆಯಲಿದ್ದು, ಯುರೋಪ್‌, ಆಫ್ರಿಕಾ, ಅಂಟಾರ್ಟಿಕಾ, ಅಮೆರಿಕ ಸೇರಿದಂತೆ ಪೂರ್ವ ಪೆಸಿಫಿಕ್‌ ಭಾಗಗಳಲ್ಲಿ ಸಂಪೂರ್ಣವಾಗಿ ಕಾಣಲಿದೆ.

ಇನ್ನು ಭಾಗಶಃ ಪ್ರಮಾಣದಲ್ಲಿ ನ್ಯೂಜಿಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರಕ್ತ ಚಂದ್ರಗ್ರಹಣ ಕೆಲವು ದೇಶಗಳಲ್ಲಿ ಮೇ 15ಕ್ಕೆ ಗೋಚರಿಸಿದರೆ, ಮತ್ತೆ ಕೆಲವು ಭಾಗಗಳಲ್ಲಿ ಮೇ 16ರಂದು ಕಾಣಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ರಕ್ತ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ 2022ರ ನವೆಂಬರ್‌ನಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಹಾಗೇ ಅಕ್ಟೋಬರ್‌ ತಿಂಗಳಲ್ಲಿ ಸೂರ್ಯ ಗ್ರಹಣ ಸಂಭವಿಸಲಿವೆ. ಈ ಎರಡು ಗ್ರಹಣಗಳು ಭಾರತದಲ್ಲಿ ಗೋಚರಿಸುವುದು ವಿಶೇಷ.

ಸೂರ್ಯ ಮತ್ತು ಭೂಮಿಯ ಸಮಾನಾಂತರ ರೇಖೆಯಲ್ಲಿ ಚಂದ್ರ ಹಾದು ಹೋಗಲಿದೆ. ಭೂಮಿಯು ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಮರೆ ಮಾಡುವುದರಿಂದ ಅರೆ ನೆರಳು–ಬೆಳಕಿನ ಆಟದಲ್ಲಿ ಚಂದ್ರ ಕೆಂಪೇರಲಿದೆ. ಇದನ್ನು ರಕ್ತ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಹಿಂದಿನ ಲೇಖನಎಸಿಬಿ ಬಲೆಗೆ ಬಿದ್ದ ಪಾಲಿಕೆ ಜೂನಿಯರ್‌‌ ಇಂಜಿನಿಯರ್
ಮುಂದಿನ ಲೇಖನಪಠ್ಯಪುಸ್ತಕ ಪೂರೈಕೆಯಲ್ಲಿ ವಿಳಂಬ: ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ