ಉದಾಹರಣೆ ಜಾತಕ :3-12-1965, 8-15 ಆಮ್
ಇದು ಪುರುಷ ಜಾತಕ.ಇವರಿಗೆ 2011 ರಲ್ಲಿ ಶುಕ್ರ ದೇಶ ಗುರುಭುಕ್ತಿ ಯಲ್ಲಿ ಮೂತ್ರದಲ್ಲಿ ಪ್ರೋಟೀನ್ ಅವರ ಹೋಗುತ್ತಿದೆ ಎಂದು ತಿಳಿಯಿತು. ಇದರಿಂದ ಮೂತ್ರಪಿಂಡವು ತೊಂದರೆಯಾಗಿ ಸರಿಯಾಗಿ ಮೂತ್ರದಲ್ಲಿರುವ ಪ್ರೋಟೀನ್ ಅನ್ನು ಪ್ರೋಟೀನ್ ನನ್ನು ಮೂತ್ರಪಿಂಡವು ಮೂತ್ರಪಿಂಡವು ಸರಿಯಾಗಿ ಸೋಸುತಿಲ್ಲವೆಂದು ತಿಳಿದಿದೆ.ಇವರ ಜಾತಕದಲ್ಲಿ ಪ್ರೋಟೀನ್ ಕಾರಕ ಗ್ರಹ ಬುಧ,ವಕ್ರಿಯವಾಗಿ ವೃಶ್ಚಿಕದಲ್ಲಿ ರವಿ ಮತ್ತು ರಾಹು ಕೇತು ಗ್ರಹಣದಲ್ಲಿ ಶನಿ ದೃಷ್ಟಿಯೂ ಇದೆ.ಶನಿ ದೃಷ್ಟಿಯಿಂದ ಪ್ರೋಟಿನ್ ಸೋಸುವುದಕ್ಕೆ ಅಡ್ಡಿಯಾಗುತ್ತಿದೆ.ಇವರು ಗುರು ಶನಿ ರಾಹು ಮತ್ತು ರವಿಗೆ ಪರಿಹಾರ ಮಾಡಿಕೊಳ್ಳಬೇಕು.
ಉದಾಹರಣೆ ಜಾತಕ : 13-9-1963
ಈ ಜಾತಕರಿಗೆ ಕಳೆದ 2009 ಫೆಬ್ರವರಿ, 7ರಂದು ದೇಹದ ಬಲಪಾರ್ಶ್ವಕ್ಕೆ ಪಾರ್ಶ್ವವಾಯು ಹೊಡೆದು, ಬೆಂಗಳೂರು ನಗರದ ಸೆಂಟ್ ಜಾನ್ ಆಸ್ಪತ್ರೆಗೆ ಸೇರಿಸಿದ್ದರು ಬಲಬಾಯಿ, ಬಲಕಣ್ಣು ಬಲ ಕೈಕಾಲುಗಳು, ಬಲ ಮಿದುಳು ಸಹ ನಿಷ್ಕ್ರೀಯವಾಯಿತು. ಕೋಮಾಗೆ ಹೋಗಿ ಬದುಕಿ ಉಳಿಯುವುದೇ ಕಷ್ಟವಾಯಿತು ನಮ್ಮ ಪರಿಹಾರದಿಂದ ಮೂರು ದಿನದಲ್ಲಿ ಪ್ರಜ್ಞೆ ಬಂದಿತ್ತು ಆದರೂ ವೈದ್ಯರು ಮನೆಗೆ ಹೋಗುವುದು ಉತ್ತಮವೆಂದರೆಂತೆ ಏಕೆಂದರೆ ಅವರಿಗೆ ಪ್ರಜ್ಞೆ ಬಂದಿತ್ತು ಅಷ್ಟೇ, ಆದರೆ ಉಳಿದ ಬಲ ಭಾಗದ ಅಂಗಗಳು ಕೆಲಸ ಮಾಡುತ್ತಿರಲಿಲ್ಲ.ಇದರ ಜೊತೆ ಮೂತ್ರಪಿಂಡವೂ ಸಹ ಕೆಲಸ ಮಾಡದೆ ಒಂದು ಸಲ ಡಯಾಲಿಸಿಸ್ ಮಾಡಿದರು. ಆಗ ಅವರ ಅಕ್ಕ ನನ್ನನ್ನು ಹುಡುಕಿಕೊಂಡು ಬಂದರು.
ತಮ್ಮನಿಗೆ ಪ್ರಜ್ಞೆ ಬಂದಿದ್ದಕ್ಕೆ ಸಂತೋಷಪಟ್ಟರು. ಆದರೆ ಮೂತ್ರಪಿಂಡದ ವಿಷಯ ತಿಳಿಸಿ ಪರಿಹಾರ ಕೇಳಿದರು. ನಾನು ಗುರುವಿಗೆ ಕಡಲೆದಾನ ಮಾಡಿ ಉಳಿದ ಪರಿಹಾರವನ್ನು ಹಾಗೇ ಮುಂದುವರೆಸಿ ಎಂದು ಸಲಹೆ ನೀಡಿದೆ. ಆ ದಿನದಿಂದಲೇ ಕಡಲೆದಾನ ಮಾಡಿದರು. ಆದರೆ ಮತ್ತೆ ಡಯಾಲಿಸಿಸ್ ಮಾಡುವ ಅವಶ್ಯಕತೆ ಬರಲಿಲ್ಲ. ಕಾರಣ ಮತ್ತೆ ಮೂತ್ರಪಿಂಡ ಎಂದಿನಂತೆ ಕೆಲಸ ಆರಂಭಿಸಿತು. ಈಗ ವೈದ್ಯರಿಗೂ ನಂಬರ ಹಾಗೆ ಅವರ ಆರೋಗ್ಯದಲ್ಲಿ ಬದಲಾವಣೆ ಯಾಗಿ 20 ದಿನಗಳಲ್ಲಿ ಮನೆಗೆ ಹೋಗಿ, ಮೂರು ತಿಂಗಳಲ್ಲಿ ಶೇಕಡ 60ರಷ್ಟು ಭಾಗ ಮಾತು, ನಡಿಗೆ ಆರೋಗ್ಯದಲ್ಲಿ ಆಹಾರ ಸೇವನೆಯಲ್ಲಿ ಮೂರು ತಿಂಗಳಲ್ಲಿ ಶೇಕಡ 60ರಷ್ಟು ಭಾಗ ಮಾತು, ನಡಿಗೆ ಆರೋಗ್ಯದಲ್ಲಿ ಆಹಾರ ಸೇವನೆಯಲ್ಲಿ ವೃದ್ಧಿಯಾದರು, ಇವರ ಜಾತಕದಲ್ಲಿ ಲಗ್ನದಿಂದ ಎರಡನೇ ನಾಲ್ಕನೇ ಭಾವಗಳು, ರವಿ,ಶನಿಯು ಪೀಡಿತರಾಗಿ ಇರುವುದರಿಂದ ಇವರು ಪಾರ್ಶ್ವ ವಾಯುವಿಗೆ ತುತ್ತಾದರು. ಎರಡನೇ ಭಾವದಲ್ಲಿ ರವಿ ಇದ್ದರೂ ಸಹ ಶುಕ್ರನಿಂದ ಮತ್ತು ಕೇತುವಿನಿಂದ ಪೀಡಿತ, ನಾಲ್ಕನೇ ಭಾವದಲ್ಲಿ ಕುಜ ಸ್ಥಿತನಾಗಿ ರಾಹು ಮತ್ತು ವಕ್ರ ಶನಿಯಿಂದ ಪೀಡಿತ.ಜಾತಕದಲ್ಲಿ ತುಲಾರಾಶಿಗೆ ರಾಹು, ವಕ್ರ ಶನಿಯ ದೃಷ್ಟಿ ತುಲಾ ರಾಶ್ಯಾಧಿಪತಿ ಶುಕ್ರ ರವಿಯಿಂದ ಆಸ್ತ. ಮೂತ್ರಪಿಂಡ ಕಾರಕ ಗ್ರಹ ಗುರು ಸಹ ವಕ್ರಿಯಾಗಿ ವಕ್ರ ಶನಿಯಿಂದ ಪೀಡಿತ.ಇವರಿಗೆ ಮೊದಲು ಶನಿ,ಚಂದ್ರನಿಗೆ ಕೋಮಾದಿಂದ ಹೊರಬರಲು ಪರಿಹಾರ ನೀಡಿದೆ. ಪಾರ್ಶ್ವ ವಾಯುವಿಗೆ ಸೂರ್ಯನಿಗೆ, ಅನಂತರ ಮಿದುಳು ನಿಷ್ಕ್ರಿಯಕ್ಕೆ ರಾಹು ಕೇತುಗಳಿಗೆ ನೀಡಿದೆ. ಇದರಿಂದ ಕೋಮಾದಿಂದ ಹೊರಬಂದರು.ಆನಂತರ ಗುರುವಿಗೆ ಮೂತ್ರಪಿಂಡ ಕೆಲಸ ಮಾಡಲು ಪರಿಹಾರ ನೀಡಿದೆ.
ಜ್ಯೋತಿಷ್ಯ ಪರಿಹಾರಗಳು:
★ಮೂತ್ರಪಿಂಡ ಕಾರಕಗ್ರಹ ಗುರುವಿಗೆ ಅನಂತರ ಶುಕ್ರ ಮತ್ತು ಬುಧರಿಗೆ ಪರಿಹಾರ ಮುಖ್ಯವಾಗಿ ಮಾಡಬೇಕು.
★ ಇವರನ್ನು ಪೀಡಿಸುವ ಪಾಪಗ್ರಹಗಳಿಗೆ ಪರಿಹಾರ ಮಾಡಿ.
★ ಮಧುಮೇಹವಿದ್ದರೆ ಚಂದ್ರ ಗುರು ರಕ್ತದೊತ್ತಡವಿದ್ದರೆ ಸೂರ್ಯ ಬುಧನಿಗೆ ಪರಿಹಾರ.
★ ಕೋಮಾಗೆ ಚಂದ್ರ ಮತ್ತು ಶನಿಗೆ ಪರಿಹಾರ ನೀಡಿ.
★ ಯಾವುದೇ ಅಂಗದಲ್ಲಿ ಸೊಂಕುಜಾಡ್ಯವಾದರೆ ರಾಹು ಕುಜರಿಗೆ ಪರಿಹಾರ ನೀಡಿ.ಹೀಗೆ ಜ್ಯೋತಿಷ್ಯಶಾಸ್ತ್ರವು ಪ್ರತಿ ವ್ಯಾಧಿಗೂ ಗ್ರಹ, ರಾಶಿ, ಭಾವ, ಕಾರಕವಾಗಿರುತ್ತಾರೆ. ಜ್ಯೋತಿಷಿಯು ಬುದ್ಧಿ ಉಪಯೋಗಿಸಿ ಅನುಭವದಿಂದ ಪರಿಹಾರ ನೀಡಬೇಕಾಗುತ್ತದೆ.ಇವರು ವೈದ್ಯರಿದ್ದಂತೆ!