ಮನೆ ಜ್ಯೋತಿಷ್ಯ ವೈದ್ಯಕೀಯ ಉಪಚಾರಗಳು

ವೈದ್ಯಕೀಯ ಉಪಚಾರಗಳು

0

       ಅಸ್ತಮಾ ವ್ಯಾಧಿಯಿಂದ ಉಸಿರಾಟದ ತೊಂದರೆಯಾಗಿ ನಾವು ತೆಗೆದುಕೊಳ್ಳುವ ಗಾಳಿಯ ಪ್ರಮಾಣ ಕಡಿಮೆಯಾಗಿ ನಮ್ಮ ದೇಹಕ್ಕೆ ಬೇಕಾಗುವಷ್ಟು ಆಮ್ಲಜನಕ ರಕ್ತಕ್ಕೆ ಸೇರುವುದಿಲ್ಲ ಇದರಿಂದ ನಾವು ಬದುಕುವುದು ಕಷ್ಟವಾಗುತ್ತದೆ ಆದ್ದರಿಂದ ಆಸ್ತಮದ ತೀವ್ರತೆಯನ್ನು ಅರಿತು  ಅವರಿಗೆ ಮೂಗಿನ ಮೂಲಕ ಆಮ್ಲಜನಕವನ್ನು ನೀಡಬೇಕು.

Join Our Whatsapp Group

       ಶ್ವಾಸನಾಳಗಳನ್ನು ಸಂಕುಚಿತವಾಗಿರುವುದರಿಂದ  ಶ್ವಾಸನಾಳಗಳು ವಿಕಾಸವಾಗುವ ಔಷಧಗಳನ್ನು ನೀಡಬೇಕು. ಆದರೆ ಕೆಲವು ಸಲ ಔಷಧಿಗಳು ಅಲರ್ಜಿಗಳಾಗಿ,ಹೃದಯಕ್ಕೆ ಅಪಘಾತವಾಗುವ ಸಾಧ್ಯತೆ ಇರುತ್ತದೆ.ಆದ್ದರಿಂದ ಔಷಧ ಅವಶ್ಯಕವಾಗಿ ಪರಿಶೀಲಿಸಿ  ನೀಡಬೇಕು.ನಾಳಗಳಲ್ಲಿ ಸುಲಭವಾಗಿ ಉಸಿರಾಟವಾಗಲು ಮಾತ್ರೆಗಳನ್ನು ಅಥವಾ ಚುಚ್ಚು ಮುದ್ದುಗಳನ್ನು ಉಪಯೋಗಿಸಬೇಕು.

      ಆಸ್ತಮ ವ್ಯಾಧಿ ತೀವ್ರತೆಯಿಂದ ಉಸಿರಾಟದ ತಡೆಯಿಂದ ಸೋಂಕು ವ್ಯಾಧಿಗಳೂ ಸಹ ತಗುಲಬಹುದು. ಆದ್ದರಿಂದ ಸೋಂಕು ನಿವಾರಣೆ ಮಾತ್ರೆಗಳನ್ನು ಪರಿಶೀಲಿಸಿ ನೀಡಬೇಕು.

 ಸಾಮಾನ್ಯ ಪರಿಹಾರಗಳು :

 ಅಸ್ತಮ ವ್ಯಾದಿಗ್ರಸ್ತರಿಗೆ ಆಹಾರ ಪತ್ಯಗಳು :

       ಈ ವ್ಯಾಧಿಗೃಸ್ತರು ತಮ್ಮ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು, ಹೊಟ್ಟೆ ತುಂಬಾ ಊಟ ಮಾಡುವುದನ್ನು ನಿಲ್ಲಿಸಬೇಕು.ಅದರಲ್ಲೂ ಮಧ್ಯಾಹ್ನದ ಊಟವನ್ನು ಸ್ವಲ್ಪ ಕಡಿಮೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೊಟ್ಟೆ ಉಬ್ಬಿ ಉಸಿರಾಟದ ತೊಂದರೆ ಬರುತ್ತದೆ.ಆಹಾರದಲ್ಲಿ ಶೀಘ್ರವಾಗಿ ಜೀರ್ಣ ಆಗದ ಅಥವಾ ವಾಯು ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು.ಶೀತ ಅಥವಾ ಸಿಂಬಳ ಉಂಟುಮಾಡುವ ಆಹಾರಗಳಾದ ಅನ್ನ,ಆಲೂ,ಬಾಳೆ,ಉದ್ದು, ಬೆಂಡೆಕಾಯಿ, ಸಿಹಿ, ಹಾಲಿನ ಪದಾರ್ಥ, ಮೊಸರು,ಹುಳಿ, ಹುಳಿಯಾದ ಹಣ್ಣುಗಳು, ಐಸ್, ಚಾಕ್ಲೇಟ್, ಎಣ್ಣೆ, ತುಪ್ಪದ ಪದಾರ್ಥಗಳನ್ನು ಕಡಿಮೆ ಮಾಡಿ ರಾತ್ರಿಕಾಲದಲ್ಲಿ ಈ ಆಹಾರ, ಶೀತಯುಕ್ತವಾದ ಹಣ್ಣು, ಆಹಾರವನ್ನು ಸೇವಿಸುವುದು ತಡೆಯಿರಿ. ನಿದ್ದೆಗೆ ಎರಡು ಗಂಟೆ ಮೊದಲೇ ಊಟ ಸೇವಿಸಿ. ನೀರನ್ನು ಚೆನ್ನಾಗಿ ಸೇವಿಸಬಹುದು. ರಾತ್ರಿ ಕಾಲದಲ್ಲಿ ಬಿಸಿನೀರು ಉತ್ತಮ ಆದರೆ ಮಧ್ಯ ಸೇವನೆ,ತಂಬಾಕು ಧೂಮಪಾನ ಸೇವನೆಯಿಂದ ದೂರವಾದರೆ ಉತ್ತಮ.

    ಮೆಣಸು, ಮೆಣಸಿನಕಾಯಿ   ಬೆಳ್ಳುಳ್ಳಿ ಮತ್ತು ಶುಂಠಿ ಸೇವನೆ ಉತ್ತಮ  ಇದು ಗಂಟಲಿನಲ್ಲಿ ಕಫ ಶೇಖರಿಸಲು ಅವಕಾಶ ನೀಡುವುದಿಲ್ಲ.ಸಾಮಾನ್ಯವಾಗಿ ಶೀತಗಾಲದಲ್ಲಿ ಕಫ ಹೆಚ್ಚಾಗುತ್ತದೆ. ಇವರು ಆಹಾರ ಹೆಚ್ಚು ಸೇವಿಸದೆ ಉಪವಾಸ ಇರುವುದು ಉತ್ತಮ ಅಥವಾ ರಾತ್ರಿ ಭೋಜನವನ್ನು ಕಡಿಮೆ ಮಾಡಿ. ವಾರಕ್ಕೊಮ್ಮೆ ಅಭ್ಯಂಗನ ಸ್ಥಾನ ಮಾಡಿ.

 ನೇಟಿ ಕ್ರಿಯೆ : ಇದು ನಮ್ಮ ಮೂಗಿನ ಎರಡು ಹೊಳ್ಳೆಗಳ್ಳನ್ನು ಉಪ್ಪು ನೀರಿನಿಂದ ಸುದ್ದಿ ಮಾಡುವ ಕ್ರಿಯೆ ಇದರಿಂದ ಮೂಗಿನ ಹೊಳ್ಳೆಗಳಲ್ಲಿ ಅಡತಡೆ ನಿವಾರಣೆಯಾಗುತ್ತದೆ. ಮೂಗಿನ ಒಂದು ಹೊಳ್ಳೆಯಿಂದ ನೀರನ್ನು ಹರಿಸಿ ಮತ್ತೊಂದು ಹೊಳ್ಳೆಯಿಂದ ಹೊರಬರುವಂತೆ ಮಾಡುವ ಕ್ರಿಯೆ.

 ವ್ಯಾಯಾಮ :

      ಪ್ರತಿದಿನ ಜೀವನದಲ್ಲಿ ಅಸ್ತಮ ವ್ಯಾಧಿಗ್ರಸ್ತರಿಗೆ ಸೂರ್ಯೋದಯದ ಕಾಲವು ಸೂಕ್ಷ್ಮವಾಗಿ ಇರುತ್ತದೆ. ಆ ಕಾಲದಲ್ಲಿ ಚಟುವಟಿಕೆಯಿಂದ ಕೂಡಿರಿ ಶೀತಕಾಲ. ಚಳಿಗಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗೆ ಹೊದ್ದಿಕೊಳ್ಳಿ. ಬಿಸಿನೀರಿನಿಂದ ಮುಖವನ್ನು ತೊಳೆಯಿರಿ. ಮನೆಯಲ್ಲಿ ಅಥವಾ ಹೊರಗೆ ಬರಿ ಕಾಲಿನಲ್ಲಿ ನಡೆಯಬೇಡಿ.ರಾತ್ರಿ ಊಟ ಕಡಿಮೆ ಮಾಡಿ.ಮಲಗುವ 2 ಗಂಟೆ ಮೊದಲು ರಾತ್ರಿ ಊಟ ಮುಗಿಸಿ, ದೂಳು,ಧೂಮಪಾನ, ಮಧುರ ಅಥವಾ ಕೆಟ್ಟ ಕರೆದ ಎಣ್ಣೆ ವಾಸನೆಯಿಂದ ದೂರವಿಡಿ.

      ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬ್ರಿಸ್ಕ್ ವಾಕ್ ಮಾಡಿ, ಮಲಗುವ ಮುನ್ನ ಕಿಟಕಿ ಹಾಕಿ ಮಲಗಬೇಡಿ *.

 ತರಕಾರಿ ಮತ್ತು ಹಣ್ಣುಗಳಿಂದ :

 ಹಾಗಲಕಾಯಿ – ಶ್ವಾಸಕೋಶ ವ್ಯಾದಿಯಿಂದ ರಕ್ಷಣೆ ನೀಡುತ್ತದೆ.

 ಅಗಸೆ ಬೀಜ –  ಶ್ವಾಸಕೋಶದ ಇತರ ಹಲವು ಸಮಸ್ಯೆಗಳನ್ನು ಗುಣಪಡಿಸುತ್ತದೆ.

      ಈರುಳ್ಳಿ ಬೀಜದೊಂದಿಗೆ ಜೇನುತುಪ್ಪ ಸಮ ಪ್ರಮಾಣದಲ್ಲಿ ಬೆರೆಸಿ ಪ್ರತಿದಿನ ಎರಡು-ಮೂರು ಚಮಚದಷ್ಟು ಸೇವಿಸಿದರೆ ಕಫವನ್ನು ನಿವಾರಿಸುತ್ತದೆ.ಇದರಿಂದ ಶ್ವಾಸ ಚೆನ್ನಾಗಿ ಕೆಲಸ ಮಾಡುತ್ತಾ ಕೆಮ್ಮು ಅಸ್ತಮಾ ನಿವಾರಣೆ ನಿವಾರಿಸುತ್ತದೆ.