ಮನೆ ಸುದ್ದಿ ಜಾಲ ಯಳಂದೂರು ಜ್ಞಾನ ದೀಪ ಭವನದಲ್ಲಿ ಜುಲೈ 10 ರಂದು ಆರೋಗ್ಯಕ್ಕಾಗಿ ಧ್ಯಾನ ಶಿಬಿರ

ಯಳಂದೂರು ಜ್ಞಾನ ದೀಪ ಭವನದಲ್ಲಿ ಜುಲೈ 10 ರಂದು ಆರೋಗ್ಯಕ್ಕಾಗಿ ಧ್ಯಾನ ಶಿಬಿರ

0

ಯಳಂದೂರು: ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನದೀಪ ಭವನದಲ್ಲಿ ಜುಲೈ ೧೦ ಗುರುವಾರದಿಂದ ಆರೋಗ್ಯಕ್ಕಾಗಿ ಧ್ಯಾನ ಶಿಬಿರವನ್ನು ಮೈಸೂರು ಜ್ಞಾನ ಸರೋವರ ರಿಟ್ರೀಟ್ ಸೆಂಟರ್‌ನ ರಾಜಯೋಗ ಶಿಕ್ಷಣ ತಜ್ಞ ರಾಜಯೋಗಿ ಬ್ರಹ್ಮಾಕುಮಾರ ಪ್ರಾಣೇಶ್ ರವರು ಉಚಿತವಾಗಿ ಪಟ್ಟಣದ ಜನತೆಗೆ ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಮಹಾಲಕ್ಷ್ಮೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾನವನ ಮನಸ್ಸು ಚಂಚಲವಾಗಿದೆ ಇದರಿಂದ ಸುಖ ಶಾಂತಿ ಮತ್ತು ಸಂತೋ?ಗಳು ಅವನಿಂದ ದೂರವಾಗುತ್ತಿವೆ. ಆರೋಗ್ಯವು ಏರುಪೇರು ಆಗುತ್ತಿದೆ. ನಿದ್ರೆಯಲ್ಲೂ ತೊಂದರೆಯಾಗುತ್ತಿದೆ. ಜೀವನ ಗೊಂದಲಗಳಿಂದ ಮನೋಬಲವು ಕುಸಿಯುತ್ತಿದೆ. ಇವುಗಳಿಂದ ಮುಕ್ತರಾಗಲು, ಆರೋಗ್ಯಕ್ಕಾಗಿ ಧ್ಯಾನ ಶಿಬಿರದ ಪೂರ್ಣ ಲಾಭವನ್ನು ಪಟ್ಟಣದ ಜನತೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಹಾಗಾಗಿ ಪಟ್ಟಣದ ಜನತೆಯ ಹಿತ ದೃಷ್ಟಿಯಿಂದ ಪ್ರತಿನಿತ್ಯ ಬೆಳಗ್ಗೆ ೧೦.೩೦ ರಿಂದ ೧೨ ಗಂಟೆವರೆಗೆ ಪುರು?ರಿಗೆ, ಸಂಜೆ ೪ ರಿಂದ ೫:೩೦ ಗಂಟೆಯವರಿಗೆ ಮಹಿಳೆಯರಿಗಾಗಿ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿದೆ. ಆಸಕ್ತ ಸಾರ್ವಜನಿಕರು ಹೆಚ್ಚಿನ ವಿವರಗಳಿಗಾಗಿ ಮೊ. ಸಂಖ್ಯೆ ೯೫೩೫೬೬೮೯೪೪ ಇಲ್ಲವೇ ೯೮೮೦೨೮೩೭೫೩ ನ್ನು ಸಂಪರ್ಕಿಸುವಂತೆ ಕೋರಲಾಗಿದೆ.