ಮನೆ ಯೋಗಾಸನ ಧ್ಯಾನವು ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ

ಧ್ಯಾನವು ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ

0

ಧ್ಯಾನವನ್ನು ಒಬ್ಬ ವ್ಯಕ್ತಿಯ ಮನಸ್ಸಿನ ತರಬೇತಿ ಎಂದೇ ಕರೆಯಲಾಗುತ್ತದೆ. ಧ್ಯಾನ ಮಾಡುವುದರಿಂದ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ, ಆಂತರಿಕ ಶಕ್ತಿಯನ್ನು ನಿರ್ಮಿಸುತ್ತದೆ. ಅಲ್ಲದೆ ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳನ್ನು ಉತ್ತೇಜಿಸಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಧ್ಯಾನ ಮಾಡುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದೇ ಹೇಳಬಹುದು. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುವುದು ಮಾತ್ರವಲ್ಲ ಅಲ್ಜೈಮರ್’ನಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.

ನಿಮಗೆ ತಿಳಿದಿರಲಿ, ಸ್ಮರಣಾಶಕ್ತಿ, ಗಮನವನ್ನು ಹೆಚ್ಚಿಸಿ ಭಯ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

ಅಷ್ಟಕ್ಕೂ ಧ್ಯಾನವನ್ನು ಏಕೆ ಮಾಡಬೇಕು? ಧ್ಯಾನ ಮಾಡುವುದರಿಂದ ದೊರೆಯುವ ಲಾಭಗಳೇನು? ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.

ಒತ್ತಡವನ್ನು ಕಡಿಮೆ ಮಾಡುತ್ತದೆ

• ಜೀವನವು ಒತ್ತಡದಿಂದ ತುಂಬಿದೆ. ಇದರಿಂದ ಮಾನಸಿಕವಾಗಿ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

• ಅಂತವರು ಪ್ರತಿನಿತ್ಯ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು.

• ನಿಮ್ಮ ಒತ್ತಡವನ್ನು ನಿವಾರಿಸುವ ಮೂಲಕ ಆತಂಕವನ್ನು ಕಡಿಮೆ ಮಾಡುತ್ತದೆ.

• ಒತ್ತಡ ಹೆಚ್ಚಾದಂತೆ ಹೃದ್ರೋಗ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಪಡೆಯುವ ಅಪಾಯವಿರುತ್ತದೆ.

• ಒತ್ತಡ ಸಂಬಂಧಿತ ಸಮಸ್ಯೆಗಳನ್ನು ನೀವು ಹೊಂದಿದ್ದರೆ ಧ್ಯಾನ ಮಾಡುವುದನ್ನು ಮರೆಯದಿರಿ.

ಭಾವನಾತ್ಮಕತೆ

• ಒತ್ತಡದಿಂದ ಮುಕ್ತರಾದವರು ಉತ್ತಮ ಭಾವನೆಗಳನ್ನು ಅನುಭವಿಸುತ್ತಾರೆ.

• ಧ್ಯಾನ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿರುವುದು ಮಾತ್ರವಲ್ಲ, ಮನಸ್ಸನ್ನು ತೆರವುಗೊಳಿಸುತ್ತದೆ. ಚಿಂತೆಗಳನ್ನು ದೂರ ಮಾಡಿ ಶಾಂತ ಮನೋಭಾವನೆಯನ್ನು ಉತ್ತೇಜಿಸುತ್ತದೆ.

• ಮನಸ್ಸು ಮತ್ತು ಮೆದುಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಧ್ಯಾನವು ಸಹಾಯ ಮಾಡುತ್ತದೆ.

• 15 ನಿಮಿಷಗಳ ಧ್ಯಾನವು ದಿನವೀಡಿ ಉಲ್ಲಾಸ ಮತ್ತು ಉತ್ಸಾಹದಿಂದ ಇರಲು ಕಾರಣವಾಗುತ್ತದೆ.

• ಕೆಲವು ಸಂಶೋಧನೆಗಳ ಪ್ರಕಾರ, ಧ್ಯಾನ ಮಾಡುವ ಜನರು ತಮ್ಮ ಜೀವನದಲ್ಲಿ ಹೆಚ್ಚು ತೃಪ್ತಿಕರವಾದ ಭಾವನೆಯನ್ನು ಹೊಂದಿರುತ್ತಾರೆ.

• ಇನ್ನು ಕಡಿಮೆ ಆಕ್ರಮಣಶೀಲತೆಯುಳ್ಳವರಾಗಿರುತ್ತಾರೆ.

• ನಕಾರಾತ್ಮಕ ಹೇಳಿಕೆಗಳಿಗೆ ಕಡಿಮೆ ಪ್ರತಿಕ್ರಿಯಿಸುತ್ತಾರೆ.

ಕರುಣಾಮಯಿ ಗುಣಗಳನ್ನು ಹೊಂದಿರುತ್ತೀರಿ

• ಧ್ಯಾನವು ಒಬ್ಬರನ್ನು ಸಹಾನುಭೂತಿ ಮತ್ತು ಕರುಣಾಮಯಿ ಗುಣಗಳನ್ನು ಹೊಂದುವಂತೆ ಪ್ರೇರೇಪಿಸುತ್ತದೆ.

• ಈ ಗುಣವು ಅವರ ತಾಳ್ಮೆಯ ಮಟ್ಟವನ್ನು ಹೆಚ್ಚಿಸುತ್ತದೆ.

• ಧ್ಯಾನವು ಅರಿವು, ಸ್ಪಷ್ಟತೆ ಮತ್ತು ಸಹಾನುಭೂತಿಯನ್ನು ಹೆಚ್ಚಿಸುವ ಮೂಲಕ ಧನಾತ್ಮಕ ಚಿಂತನೆಯ ಬಗ್ಗೆ ಒಲವು ತೋರುವಂತೆ ಮಾಡುತ್ತದೆ.

• ಒಟ್ಟಾರೆ ಧ್ಯಾನವು ನಿಮ್ಮ ಮನಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು.

ಖಿನ್ನತೆಗೆ ಚಿಕಿತ್ಸೆ

ಮಾನಸಿಕವಾಗಿ ಬಹುತೇಕರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಅಂತವರು ಪ್ರತಿನಿತ್ಯ ತಪ್ಪದೇ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು.

ಆಯುರ್ವೇದದ ಪ್ರಕಾರ, ಧ್ಯಾನವು ದೇಹದಲ್ಲಿ ಜೀವ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ನಿಮಗೆ ತಿಳಿದಿರಲಿ, ಜೀವ ಶಕ್ತಿಯ ಮಟ್ಟ ಹೆಚ್ಚಾದಂತೆ ಆತಂಕ ದೂರವಾಗುತ್ತದೆ. ಯಾರೆಲ್ಲಾ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆಯೋ ಅಂತವರಿಗೆ ಧ್ಯಾನ ಬಹಳ ಒಳ್ಳೆಯದು.

ಆರೋಗ್ಯಕರವಾದ ಮೆದುಳು

ಪ್ರತಿನಿತ್ಯ ಬೇಡದ ವಿಷಯಗಳಿಗೆ ಚಿಂತಿಸುವ ಕಾರಣ ಮೆದುಳಿಗೆ ಹೆಚ್ಚು ಕೆಲಸ ಕೊಟ್ಟಂತಾಗುತ್ತದೆ. ಮಾನಸಿಕ ಆರೋಗ್ಯ ಚೆನ್ನಾಗಿರಲು ಮೆದುಳಿನ ಆರೋಗ್ಯವನ್ನು ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ಧ್ಯಾನವು ‘ಮಿ ಸೆಂಟರ್’ ಎಂದೂ ಕರೆಯಲ್ಪಡುವ ಮೆದುಳಿನ ಮಧ್ಯದ ಪೂರ್ವ ಭಾಗದ ಕಾರ್ಟೆಕ್ಸ್ಗೆ ನಕಾರಾತ್ಮಕ ನರವೈಜ್ಞಾನಿಕ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ಭಯ, ಒತ್ತಡ, ಆತಂಕದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಇನ್ನು ಗಮನವನ್ನು ಕೇಂದ್ರೀಕರಿಸಲು, ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಲು, ಕಲಿಕೆ, ಸ್ಮರಣೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಧ್ಯಾನವು ಮಾನಸಿಕ ಸಮಸ್ಯೆಗಳಿಗೆ ಕಡಿವಾಣ ಹಾಕಿ, ಉತ್ತಮವಾದ ಅಲೋಚನೆಯನ್ನು ಹೆಚ್ಚಿಸುತ್ತದೆ.

ಹಿಂದಿನ ಲೇಖನಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ
ಮುಂದಿನ ಲೇಖನಮೀನ ರಾಶಿಗೆ ಶುಕ್ರ ಸಂಚಾರ: ಈ 5 ರಾಶಿಯವರಿಗೆ ಶುಕ್ರದೆಸೆ