ಮೈಸೂರು(Mysuru): ಬಸವ ಬಳಗ ಚಾಮುಂಡಿಪುರಂ ಸಂಘದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರು ಚಾಲನೆ ನೀಡಿದರು.
ಇಲ್ಲಿನ ಚಾಮುಂಡಿಪುರಂನಲ್ಲಿರುವ ಬಸವ ಬಳಗದ ಸದಸ್ಯರು ಕಳೆದ ಹತ್ತು ವರ್ಷಗಳಿಂದ ಬಸವೇಶ್ವರರ ಜಯಂತಿಯ, ರಾಮನವಮಿ, ಚಾಮುಂಡೇಶ್ವರಿ ಹಬ್ಬ ಹಾಗೂ ವಿವಿಧ ಹಬ್ಬಗಳ ಆಚರಣೆ ಚಾಮುಂಡಿಪುರಂ ವೃತ್ತದಲ್ಲಿ ಆಚರಿಸುತ್ತಾ ಬಂದಿದ್ದು, ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ “ಬಸವ ಬಳಗ ಚಾಮುಂಡಿಪುರಂ” ಹೆಸರಿನಲ್ಲಿ ಸಂಘವನ್ನು ನೋಂದಾಯಿಸಿದ್ದು, ಇದರ ಸದಸ್ಯತ್ವ ನೊಂದಣಿ ಪ್ರಾರಂಭಿಸಲಾಗಿದೆ.
ಇದೇ ಸಂಧರ್ಭದಲ್ಲಿ ಬಸವ ಬಳಗ ಚಾಮುಂಡಿಪುರಂ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಅಧ್ಯಕ್ಷ ಸಂದೀಪ್ ಚಂದ್ರಶೇಖರ್, ಉಪಾಧ್ಯಕ್ಷ ಎಂ ಬಸವರಾಜು, ಕಾರ್ಯದರ್ಶಿ ಮಲ್ಲಪ್ಪ ಖಜಾಂಜಿ ವಿ ಬಸವರಾಜು, ನಿರ್ದೇಶಕರಾದ ಜಿ ಮಹದೇವಪ್ಪ, ವಿ ಮಂಜುನಾಥ್, ಯೋಗೇಶ್, ನವೀನ್, ಡಿ ಸಿ ಮಂಜುಳಾ, ಕೆ ಎಂ ಸೋಮೇಶ್, ಎನ್ ಧರ್ಮೇಂದ್ರ, ಹಾಗೂ ಸಮಾಜ ಮುಖಂಡರಾದ ಮೋಹನ್, ಶಿವಣ್ಣ, ದೇವೇಂದ್ರ ಸ್ವಾಮಿ, ಚನ್ನಪ್ಪ, ರುದ್ರಸ್ವಾಮಿ, ದೀಪಕ್, ಸಂದೇಶ್, ಪ್ರದೀಪ್, ವಿನಯ್, ಸುರೇಶ್, ಪಾರ್ವತಿ, ಗಾಯತ್ರಿ , ಮಧುರ, ರೇಖಾ, ನಾಗಮ್ಮ, ನಾಗರಾಜ್, ನಾಗೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.