ಮನೆ ಸುದ್ದಿ ಜಾಲ ಕೊರೊನಾದಿಂದ ಪತಿಯನ್ನು ಕಳೆದುಕೊಂಡವಳಿಗೆ ಬಾಳು ಕೊಟ್ಟ ಪತಿಯ ಸ್ನೇಹಿತ

ಕೊರೊನಾದಿಂದ ಪತಿಯನ್ನು ಕಳೆದುಕೊಂಡವಳಿಗೆ ಬಾಳು ಕೊಟ್ಟ ಪತಿಯ ಸ್ನೇಹಿತ

0

ಚಾಮರಾಜನಗರ: ಕೊರೊನಾದಿಂದ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದ ಮಹಿಳೆಗೆ ಮೃತನ ಆತ್ಮೀಯ ಸ್ನೇಹಿತ ಮದುವೆಯಾಗಿ ಬಾಳು ಕೊಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಪತಿ ಚೇತನ್ ಕುಮಾರ್‌ನನ್ನು ಕಳೆದುಕೊಂಡು ಮನನೊಂದಿದ್ದ ಅಂಬಿಕಾಳನ್ನು ಚಾಮರಾಜನಗರ ತಾಲೂಕಿನ ನಂಜದೇವನಪುರ ನಿವಾಸಿ ಲೋಕೇಶ್ ಮದುವೆಯಾಗಿ ಹೊಸ ಬಾಳು ಕೊಟ್ಟಿದ್ದಾರೆ.

ಮೃತ ಚೇತನ್ ಕಳೆದ ಎಂಟು ವರ್ಷದ ಹಿಂದೆ ಹನೂರಿನ ಅಂಬಿಕಾ ಜೊತೆಗೆ ವಿವಾಹವಾಗಿದ್ದರು. ಕೊರೊನಾದಿಂದಾಗಿ ಅಂಬಿಕಾಳ ಪತಿ ಚೇತನ್ ಮೃತಪಟ್ಟಿದ್ದಾರೆ. ಪತಿ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಂಬಿಕಾ, ಆತ್ಮಹತ್ಯೆಗೂ‌ ಯತ್ನಿಸಿದ್ದರು. ಅಂಬಿಕಾಳ ನೋವನ್ನು ಕಣ್ಣಾರೆ ಕಂಡ ಲೋಕೇಶ್ ಆಕೆಗೆ ಬಾಳು ಕೊಡುವ ನಿರ್ಧಾರ ಮಾಡಿ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಇತ್ತೀಚೆಗೆ ವಿವಾಹವಾಗಿದ್ದಾರೆ. ಅಂಬಿಕಾಗೆ ಈಗಾಗಲೇ ಏಳು ವರ್ಷದ ಗಂಡು ಮಗುವಿದೆ. ಮಗು, ತಾಯಿ ಅಂಬಿಕಾಗೆ ಆಸರೆಯಾಗುವ ನಿಟ್ಟಿನಲ್ಲಿ ಲೋಕೇಶ್ ಬಾಳು ಕೊಟ್ಟಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಈ ಕುಟುಂಬ ವಾಸವಿದೆ. ಲೋಕೇಶ್ ಸರ್ಪಭೂಷಣ ಮಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕೇಶ್ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಮೃತ ಚೇತನ್ ಕುಮಾರ್ ಗೆ ಆತ್ಮೀಯ ಗೆಳೆಯರಾಗಿದ್ದ ಲೋಕೇಶ್, ಮೃತ ಚೇತನ್ ಕುಟುಂಬಸ್ಥರು, ಅಂಬಿಕಾ ಕುಟುಂಬಸ್ಥರ ಸಮ್ಮುಖದಲ್ಲೇ ಮದುವೆಯಾಗಿ ಕುಟುಂಬಗಳಲ್ಲಿದ್ದ ನೋವನ್ನು ಮರೆಸಿದ್ದಾರೆ.

ಹಿಂದಿನ ಲೇಖನಪತ್ರಕರ್ತರು ಪೂರ್ವಗ್ರಹಪೀಡಿತರಾಗಿ ವರ್ತಿಸಿದರೆ ಮಾನ್ಯತೆ ರದ್ದು: ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮುಂದಿನ ಲೇಖನಹಿಜಾಬ್ ವಿವಾದ: ರಾಜ್ಯದ ಕಾಲೇಜುಗಳಿಗೆ ರಜೆ ಘೋಷಿಸಲು ಸಿಎಂ ಬೊಮ್ಮಾಯಿ ಸೂಚನೆ