ಮನೆ ಮಾನಸಿಕ ಆರೋಗ್ಯ ಮಾನಸಿಕ ಕಾಯಿಲೆ

ಮಾನಸಿಕ ಕಾಯಿಲೆ

0

         ಮೂರನೇ ಹಂತದಲ್ಲಿ ಮಗುವಿಗೆ ಮಾತನಾಡಲು, ಸಭ್ಯ ಹಾಗೂ ಶಿಷ್ಟ ನಡವಳಿಕೆಗಳನ್ನು ಕಲಿಸಬೇಕು ಎಲ್ಲಿ ನಮಸ್ತೆ ಮಾಡು ಮಾಮಾ ಎಂದು ಹೇಳು , ಅತ್ತೆಗೆ ಈ ತಿಂಡಿಯನ್ನು ಕೊಡು, ಚೆನ್ನಾಗಿದ್ದೀರಾ ಎಂದು ಕೇಳು, ಮತ್ತೆ ಬನ್ನಿ ಎಂದು ಹೇಳು’ ಎಂದು ಹೇಳಿಕೊಟ್ಟು, ಸಭ್ಯತೆಯನ್ನು ಕಲಿಸಿರಿ.

Join Our Whatsapp Group

       ನಾಲ್ಕನೆಯ ಹಂತದಲ್ಲಿ ಮಗುವಿಗೆ ಸಣ್ಣಪುಟ್ಟ ಮನೆಕೆಲಸಗಳನ್ನು ಮಾಡಲು ಕಲಿಸಿ, ಹೆಣ್ಣು ಮಗುವಾದರೆ ಕಸಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಣಗಿ ಹಾಕುವುದು, ಮನೆ ಚೊಕ್ಕಟ ಮಾಡುವುದು ಇತ್ಯಾದಿ. ಗಂಡು ಮಗುವಾದರೆ ನೀರು ತುಂಬುವುದು, ಗಿಡಗಳಿಗೆ ಪಾತಿಮಾಡಿ ನೀರುಣಿಸುವುದು, ಮನೆ ಚೊಕ್ಕಟ ಮಾಡುವುದು, ಸಾಕು ಪ್ರಾಣಿಗಳಿದ್ದರೆ ಅವುಗಳಿಗೆ ಆಹಾರ ನೀರು ಕೊಡುವುದು, ಮೈ ತೊಳೆಯುವುದು ಇತ್ಯಾದಿ. ನಂತರ ನಾಣ್ಯಗಳನ್ನು ಗುರುತಿಸಿ, ಎಣಿಸಲು ಹಾಗೂ ನೀವು ಅಂಗಡಿಗೆ ಹೋದಾಗ ಅವನನ್ನೂ ಕರೆದೊಯ್ದು ಸಾಮಾನು ತರಲು ಕಲಿಸಿ.

       ಮನೋವೈದ್ಯರ ಸಲಹೆ ಪಡೆದು, ಮಗುವನ್ನು ವಿಶೇಷ ಶಾಲೆಗೆ (ಅನುಕೂಲತೆ ಇದ್ದರೆ) ಕಳುಹಿಸಲು ವ್ಯವಸ್ಥೆ ಮಾಡಿ. ಉಪಾಧ್ಯಾಯರೊಂದಿಗೆ ಜೊತೆಗೂಡಿ, ಮಗುವಿಗೆ ವಿಶೇಷ ಕೌಶಲಗಳನ್ನು ಕಲಿಸಲು ಪ್ರಯತ್ನಪಡಿ. ಇದು ಸಾಧ್ಯವಾಗದಿದ್ದರೆ ನಿರಾಶರಾಗಬೇಡಿ. ಮಗುವನ್ನು ಸರಳವಾದ ಉದ್ಯೋಗದಲ್ಲಿ ತೊಡಗಿಸಿ. ಸುಲಭವಾದ ಕೆಲಸವನ್ನು ಕಲಿಸಿ, ಆತ ತನ್ನ ಜೀವನದಲ್ಲಿ ಸ್ವಾವಲಂಬಿಯಾಗಲು ಪ್ರೋತ್ಸಾಹಿಸಿ. ದನ. ಕುರಿ, ಎಮ್ಮೆ ಮೇಯಿಸುವುದು, ತೋಟದ ಕೆಲಸ ಅಥವಾ ವ್ಯವಸಾಯ, ಮರಗೆಲಸ, ಬುಟ್ಟಿ ಹೆಣೆಯುವುದು, ಕುಂಬಾರಿಕೆ, ನೇಯ್ದೆ, ಬೈಂಡಿಂಗ್ ಕೆಲಸ, ಕಾಗದದ ಚೀಲ ಗಳನ್ನು ಮಾಡುವುದು, ಸಾಮಾನುಗಳನ್ನು ಎತ್ತಿಕೊಡುವ ಸಹಾಯಕನ ಕೆಲಸ ಇತ್ಯಾದಿ ಉದ್ಯೋಗಗಳನ್ನು ಮಾಡಿ. ತನ್ನ ಅನ್ನ ಸಂಪಾದನೆ ಮಾಡಬಲ್ಲರು.

ಹೀಗೆ ವ್ಯವಸ್ಥಿತವಾಗಿ, ಕ್ರಮವಾಗಿ, ನಿಧಾನವಾಗಿ, ಹಂತ ಹಂತವಾಗಿ ಪ್ರತಿಯೊಂದು ಕೌಶಲವನ್ನೂ ಮಗುವಿಗೆ ಕಲಿಸುವುದರಿಂದ, ಬುದ್ದಿ ಮಾಂದ್ಯ ಮಗು ಯಾರಿಗೂ ಹೊರೆಯಾಗದೆ ಬಾಳಿ, ಸಮಾಜಕ್ಕೆ ತನ್ನ ಕೊಡುಗೆಯನ್ನು ನೀಡಬಲ್ಲುದು.

 ತಂದೆತಾಯಿಗಳಿಗೆ ಬುದ್ದಿ ಮಾಂದ್ಯ ಮಗುವನ್ನು ನೋಡಿಕೊಳ್ಳಲು ಯಾರಾರು ಸಹಾಯ ಮಾಡಬಲ್ಲರು?

       ಮನೋವೈದ್ಯರು, ತರಪೇತಿ ಪಡೆದ ಮಕ್ಕಳ ವೈದ್ಯತಜ್ಞರು, ಚಿಕಿತ್ಸಾ ಮನಶ್ಯಾಸ್ತ್ರಜ್ಞರು, ವಿಶೇಷ ಶಾಲೆಯ ಉಪಾಧ್ಯಾಯರು, ಮನೋವೈದ್ಯಕೀಯ ಸಮಾಜ ಕಾರಕರ್ತರು, ಅಂಗ ಚಿಕಿತ್ಸಕರು, ವಿಶೇಷ ತರಪೇತಿ ಪಡೆದ ಸ್ವಯಂ ಸಹಾಯಕರು। ಇವರೆಲ್ಲ ತಂದೆ ತಾಯಿಗಳಿಗೆ ಮಾರ್ಗದರ್ಶನ ಮತ್ತು ನೆರವನ್ನು ನೀಡಬಲ್ಲರು. ಇವರಲ್ಲದೆ ತರಪೇತಿ ಪಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ನೆರವಾಗುತ್ತಾರೆ.

 ಬುದ್ಧಿಮಾಂದ್ಯತೆ ಬರದಂತೆ ನಿರ್ವರಣಾ ಕ್ರಮಗಳು :

       ಮಗುವಿಗೆ ಬುದ್ಧಿ ಮಾಂದ್ಯತೆ ಬಂದ ಮೇಲೆ, ಅದರ ಚಿಕಿತ್ಸೆಗೆ ಕಷ್ಟ ಪಡುವುದಕ್ಕಿಂತ, ಅದು ಬಾರದಂತೆ ತಡೆಯುವುದು ಜಾಣತನ, ಅನೇಕ ಮುಂಜಾಗ್ರತಾ ಕ್ರಮಗಳಿಂದ ಬುದ್ಧಿ ಮಾಂದ್ಯತೆ ಬರದಂತೆ ತಡೆಗಟ್ಟಬಹುದು. ಕೆಳಗಿನ ಈ ಸಲಹೆಗಳನ್ನು ಪಾಲಿಸಿರಿ.

1. ಈಗಾಗಲೇ ನಿಮಗೆ ಒಂದು ಬುದ್ದಿಮಾಂದ್ಯ ಮಗುವಿದ್ದರೆ ಮುಂದಿನ ಮಗುವಿನ ಬಗ್ಗೆ ಯೋಚಿಸಿ. ಇನ್ನೊಂದು ಮಗು ಬೇಕೇಬೇಕು ಎನಿಸಿದರೆ ಮನೋವೈದ್ಯರ ಸಲಹೆ ಪಡೆಯಿರಿ. ಇಲ್ಲದಿದ್ದರೆ ಇನ್ನೊಂದು ಮಗುವಾಗದಂತೆ, ಕುಟುಂಬಯೋಜನಾ ಕ್ರಮ ಕೈಗೊಳ್ಳಿ.

2. ಗರ್ಭಿಣಿ ಸ್ತ್ರೀ ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಯಾವುದೇ ಸಣ್ಣಪುಟ್ಟ ಖಾಯಿಲೆ ಬಂದರೂ ಉದಾಸೀನ ಮಾಡದೆ ವೈದ್ಯರ ನೆರವು ಪಡೆಯಬೇಕು. ಯಾವುದೇ ಔಷಧವನ್ನು ವೈದ್ಯರ ಅನುಮತಿಯಿಲ್ಲದೆ ಸೇವಿಸಬಾರದು. ಮಾದಕ ಪದಾರ್ಥಗಳಿಂದ ದೂರವಿರಬೇಕು. ಅನಾವಶ್ಯಕವಾಗಿ ಎಕ್ಸರೇ ತೆಗೆಸಬಾರದು. ಆಕೆಯ ಮನಸ್ಸು ಸಂತೋಷ ಸಮಾಧಾನದಿಂದ ಇರುವ ಹಾಗೆ ಇತರರು ನೋಡಿಕೊಳ್ಳಬೇಕು. ಚಿಂತೆ, ವ್ಯಥೆಮಾಡುವುದು ಒಳ್ಳೆಯದಲ್ಲ. ಆಗಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಹಿಂದಿನ ಹೆರಿಗೆ ಕಷ್ಟವಾಗಿದ್ದರೆ, ಇನ್ನೂ ಹೆಚ್ಚಿನ ಎಚ್ಚರ ಅಗತ್ಯ

3. ಹೆರಿಗೆ ಸಮಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು, ತಜ್ಞ ವೈದ್ಯರು ಹಾಗೂ ದಾದಿಯರ ನೆರವು ದೊರೆಯಬೇಕು.

4. ಸಣ್ಣ ಕೂಸಿಗೆ ಬರುವ ಸಣ್ಣಪುಟ್ಟ ಖಾಯಿಲೆಗಳಿಗೆ ಸರಿಯಾದ, ಸಕಾಲದ ಚಿಕಿತ್ಸೆ ನಡೆಯಬೇಕು.

5. ಮಗುವಿನ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ವಾತಾವರಣವನ್ನು ಕಲ್ಪಿಸಬೇಕು.

6. ಮಗುವಿಗೆ ಸರಿಯಾದ ಪ್ರಮಾಣದ ಪ್ರೀತಿ-ಮಮತೆ, ಶಿಸ್ತು-ಶಿಕ್ಷೆ,ಶಿಕ್ಷಣ-ಪ್ರೋತ್ಸಾಹ ನೀಡಬೇಕು.

7.ಅಪಘಾತಗಳಾಗಿ ತಲೆಗೆ ಪೆಟ್ಟು ಬೀಳದಂತೆ, ಮಗುವಿನ ಪರಿಸರ ವನ್ನು ಸುರಕ್ಷಿತವಾಗಿಡಬೇಕು.

8. ಬೆಳೆಯುವ ಮಗುವಿಗೆ ಒಳ್ಳೆಯ ಪೌಷ್ಟಿಕ ಆಹಾರ ಹಾಗೂ ಮೊಟ್ಟೆ, ಬೇಳೆಕಾಳುಗಳು ಹಣ್ಣು ತರಕಾರಿ ಕೊಡಬೇಕು.

ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆಗೆ ಪರಿಹಾರ=

9.ಜೀವನ ಮಟ್ಟದ ಸುಧಾರಣೆ, ಸ್ವಚ್ಛ ಪರಿಸರ,

10.ಆದಷ್ಟು ಬೇಗ ಬುದ್ಧಿ ಮಾಂದ್ಯತೆಯನ್ನು ಗುರುತಿಸಿ, ತಕ್ಕ ಪರಿಹಾರೋಪಾಯ ಮಾಡುವುದು. ಈ ಬಗ್ಗೆ ನೆರೆಹೊರೆಯವರಿಗೆ ತಿಳುವಳಿಕೆ ನೀಡುವುದು.

 ಗಮನಿಸಿ :

      ರೋಗ ನಿರೋಧಕ ಶಕ್ತಿಯ ಕೊರತೆಯಿಂದಾಗಿ, ಬುದ್ದಿ ಮಾಂದ್ಯ ಮಕ್ಕಳು, ಹಲವು ಸೋಂಕು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ನೆಗಡಿ, ಕೆಮ್ಮಲು, ಜ್ವರ, ಭೇದಿ ಪದೇಪದೇ ಅವರನ್ನು ಕಾಡಬಹುದು. ಕ್ಷಯರೋಗ, ಚರ್ಮರೋಗ ಸಾಮಾನ್ಯ. ಆದ್ದರಿಂದ ಆಗಿಂದಾಗ್ಗೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯ.

 ಬುದ್ದಿ ಮಾಂದ್ಯ ಮಕ್ಕಳ ಹಕ್ಕುಗಳು ( ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ)

1. ಸೂಕ್ತ ಮಾನಸಿಕ ಹಾಗೂ ದೈಹಿಕ ಪೋಷಣೆ

2. ಉತ್ತಮ ಶಿಕ್ಷಣ, ತರಪೇತಿ

3. ಉದ್ಯೋಗ

4. ಆರ್ಥಿಕ ರಕ್ಷಣೆ

5. ಒಳ್ಳೆಯ ಜೀವನ ಮಟ್ಟ ಅಗತ್ಯಗಳ ಪೂರೈಕೆ.

 ಬುದ್ದಿ ಮಾಂದ್ಯರು ಮದುವೆಯಾಗಬಹುದೇ?

      ಮದುವೆ ಮಾಡಿಕೊಂಡು, ಸಂಸಾರದ ಹೊಣೆ ಹೊರಲು ಸಾಕಷ್ಟು ಬುದ್ದಿ, ಚತುರತೆಗಳು ಅಗತ್ಯ. ಹೀಗಾಗಿ ಸಾಧಾರಣ ಮತ್ತು ತೀವ್ರ ಸ್ವರೂಪದ ಬುದ್ದಿ ಮಾಂದ್ಯತೆ ಇರುವ ವ್ಯಕ್ತಿಗಳಿಗೆ ಮದುವೆ ಮಾಡಬಾರದು. ಅಲ್ಪಮಟ್ಟದ ಬುದ್ದಿ ಮಾಂದ್ಯತೆ ಇರುವ ವ್ಯಕ್ತಿಗೆ, ಆತನನ್ನು ಅರ್ಥಮಾಡಿಕೊಂಡು, ಹೊಂದಾಣಿಕೆಯಿಂದ ಜೀವನ ಮಾಡಬಲ್ಲ ಸಂಗಾತಿದೊರೆತರೆ, ಮದುವೆ ಮಾಡಲು ಅಡ್ಡಿಯಿಲ್ಲ. ಸಂಬಂಧ ಮಾಡುವಾಗ ಯಾವ ಸಂಗತಿಯನ್ನೂ ಮುಚ್ಚಿಡದೆ, ಪರಸ್ಪರ ಚರ್ಚಿಸಿ, ಒಪ್ಪಂದಕ್ಕೆ ಬರುವುದು ಅವಶ್ಯ.

ಬುದ್ಧಿ ಮಾಂದ್ಯ ಮಕ್ಕಳ ತಂದೆ ತಾಯಿಗಳಿಗೆ ದಶಾಂಶ ಸೂತ್ರ :

1.ಆದಷ್ಟು ಜಾಗ್ರತೆ ತಜ್ಞ ಮನೋವೈದ್ಯರನ್ನು ಕಂಡು, ಮಗುವಿಗೆ ತರಪೇತಿ ಮತ್ತು ಶಿಕ್ಷಣವನ್ನು ಕ್ರಮವಾಗಿ ಪ್ರಾರಂಭಿಸಿ.

2.ನಿಮಗೆ ಬುದ್ದಿ ಮಾಂದ್ಯ ಮಗು ಇದೆ ಎಂದು ನಿರಾಶೆ, ನಾಚಿಕೆ ಪಡಬೇಡಿ. ನಿಮ್ಮ ಮಗುವೂ ಆ ದೇವರ ಸೃಷ್ಟಿಯೇ.

3. ನಿಮ್ಮ ಅಥವಾ ನಿಮ್ಮ ಜೀವನ ಸಂಗಾತಿಯ ಯಾವುದೋ ತಪ್ಪಿನಿಂದ ಅಥವಾ ಪಾಪಕರ್ಮದಿಂದ ಇಂತಹ ಮಗು ಹುಟ್ಟಿದೆ ಎಂದುಕೊಳ್ಳಬೇಡಿ.

4. ಬುದ್ದಿ ಮಾಂದ್ಯ ಮಗುವಿನ ಸಾಮರ್ಥ್ಯಕ್ಕೆ ಮೀರಿ, ಅದರಿಂದ ಕೆಲಸ-ಕೌಶಲಗಳನ್ನು ನಿರೀಕ್ಷಿಸಬೇಡಿ.

5. ಈ ಮಗುವಿಗೆ ಬೇಕಾದ ಪ್ರೀತಿ, ಆಸರೆಗಳನ್ನು ಕೊಡಿ.

6 ಈ ಮಗುವನ್ನು ಇತರರಿಂದ ಬಚ್ಚಿಡಲು ಪ್ರಯತ್ನಿಸಬೇಡಿ.

7. ಈ ಮಗುವಿಗೆ ವಿಶೇಷ ಶಾಲೆ, ವಿಶೇಷ ಔಷಧಿ, ವಿಶೇಷ ಆಹಾರ ಎಂದು ನಿಮ್ಮ ಸಾಮರ್ಥ್ಯ ಮೀರಿ, ಖರ್ಚು ಮಾಡಿ ಸಾಲಗಾರರಾಗ ಬೇಡಿ. ನಿಮ್ಮ ಮನೆಯ ಇತರರಂತೆ ಅದನ್ನೂ ನೋಡಿಕೊಳ್ಳಿ.

8 ಬುದ್ದಿ ಮಾಂದ್ಯ ಮಗುವನ್ನು ನೋಡಿಕೊಳ್ಳುವ ಭರದಲ್ಲಿ ನಿಮ್ಮ ಇತರ ಮಕ್ಕಳನ್ನು ನಿರ್ಲಕ್ಷಿಸಬೇಡಿ.

9. ಇನ್ನೊಂದು ಮಗು ಬೇಕೆನಿಸಿದಾಗ ವೈದ್ಯರ ಸಲಹೆ ಪಡೆಯಿರಿ.

10. ಬುದ್ದಿ ಮಾಂದ್ಯ ಮಗುವಿನ ಭವಿಷ್ಯಕ್ಕೆ ಹಣದ ವ್ಯವಸ್ಥೆ ಮಾಡಿ (ಬ್ಯಾಂಕ್‌ನಲ್ಲಿ ಠೇವಣಿ ಇಡುವುದು, ಜೀವ ವಿಮೆ ಇತ್ಯಾದಿ). ಬುದ್ದಿ ಮಾಂದ್ಯ ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗೆ ಇತರರ ಜೊತೆಗೂಡಿ ಸಹಾಯ ಮಾಡಿ. ತೀವ್ರ ಬುದ್ದಿ ಮಾಂದ್ಯ ಮಗುವಿಗೆ (ಶೇಕಡಾ 35ಕ್ಕಿಂತ ಕಡಿಮೆಯಿದ್ದರೆ ತಂದೆ ತಾಯಿ ಬಡವರಾಗಿದ್ದರೆ) ಕರ್ನಾಟಕ ಸರ್ಕಾರ ಮಾಸಿಕ ಸಹಾಯಧನವನ್ನು ಕೊಡುತ್ತದೆ. ಸಹಾಯ ಕೋರಿ ಅರ್ಜಿ ಸಲ್ಲಿಸಬೇಕು. ಬಂದ ಹಣವನ್ನು ಮಗುವಿನ ಯೋಗ ಕ್ಷೇಮಕ್ಕೆ ಬಳಸಬೇಕು. ಸರ್ಕಾರ ನೀಡುವ ಇತರ ಸವಲತ್ತು ರಿಯಾಯಿತಿಗಳನ್ನು ಬಳಸಿಕೊಳ್ಳಬೇಕು.

 ಮಕ್ಕಳಲ್ಲಿ ಕಲಿಕೆಯ ಹಿಂದುಳಿಯುವಿಕೆಯ ಕಾರಣ ಮತ್ತು ನಿವಾರಣೆ :

        ಯಾವುದೇ ಶಾಲೆಯಲ್ಲಿ ಶೇಕಡಾ 10ರಿಂದ 20ರಷ್ಟು ವಿದ್ಯಾರ್ಥಿಗಳು ಕಲಿಯುವುದರಲ್ಲಿ ಬಹಳ ಹಿಂದೆ ಬಿದ್ದು ಫೇಲಾಗುತ್ತಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾ 50ರಿಂದ 55ರಷ್ಟು ಫೇಲಾಗುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಶೇಕಡಾ 30ರಿಂದ 40ರಷ್ಟು ವಿದ್ಯಾರ್ಥಿಗಳು ‘ಬಿ’ ಮತ್ತು ‘ಸಿ’ ಗ್ರೇಡ್ ತೆಗೆದುಕೊಳ್ಳುತ್ತಾರೆ. ಶೇಕಡಾ 20ರಿಂದ 25ರಷ್ಟು ಮಂದಿ ಮಾತ್ರ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಾರೆ. ಒಂದು ಹಂತದ ತನಕ ಪ್ರಥಮ ಶ್ರೇಣಿಯಲ್ಲಿದ್ದ ವಿದ್ಯಾರ್ಥಿ, ‘ಬಿ’ ಅಥವಾ ‘ಸಿ’ ಗ್ರೇಡ್‌ಗೆ ಇಳಿಯಬಹುದು ಅಥವಾ ಫೇಲ್ ಆಗಬಹುದು. ಕಡಿಮೆ ಅಂಕಗಳನ್ನು ತೆಗೆಯುವುದು ಫೇಲಾಗುವುದು ವಿದ್ಯಾರ್ಥಿಗಷ್ಟೇ ಅಲ್ಲ ಪಾಲಕರಿಗೆ ಪೋಷಕರಿಗೆ, ಶಿಕ್ಷಕರಿಗೆ ಬಹಳ ನೋವನ್ನುಂಟುಮಾಡುತ್ತದೆ. ಕಲಿಕೆಯಲ್ಲಿ ಹಿಂದುಳಿಯುವ ವಿದ್ಯಾರ್ಥಿಯನ್ನು ಕೇಳರಿಮೆ, ನಿರಾಶೆ, ನಿರುತ್ಸಾಹಗಳು ಬಾಧಿಸುತ್ತವ ಇಂತಹ ಅನೇಕ ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟುಬಿಡುತ್ತಾರೆ. ಅವರಲ್ಲಿ ಕೆಲವರು ಸಿಟ್ಟು, ಆಕ್ರೋಶಗಳನ್ನು ಮೈಗೂಡಿಸಿಕೊಂಡು, ಸಮಾಜ ವಿರೋಧಿ ನಡೆವಳಿಕೆಗಳನ ಪ್ರದರ್ಶಿಸುತ್ತಾರೆ ಎಂಬುದು ವಾಸ್ತವಿಕ ಕಟುಸತ್ಯ. ಇವೆಲ್ಲವನ್ನು ನಿವಾರಿಸಬೇಕಾದ ಈ ವಿದ್ಯಾರ್ಥಿಗಳು ಕಲಿಯಲು ಹಿಂದೆ ಬೀಳಲು ಏನು ಕಾರಣ, ಅದನ್ನು ನಿವಾರಿಸಲ್ಪ ಸಾಧ್ಯವೇ ಎಂಬುದನ್ನು ಎಲ್ಲರೂ ಗಮನಿಸಬೇಕು.”

ಕಲಿಕೆ ಮೂರು ಹಂತಗಳಲ್ಲಿ ನಡೆಯುತ್ತದೆ..