ಮನೆ ಅಪರಾಧ 26/11ರ ಮಾದರಿ ಮುಂಬೈ ಮೇಲೆ ದಾಳಿ ನಡೆಸುವ ಬಗ್ಗೆ ಸಂದೇಶ ರವಾನೆ: ಬಿಗಿ ಭದ್ರತೆ

26/11ರ ಮಾದರಿ ಮುಂಬೈ ಮೇಲೆ ದಾಳಿ ನಡೆಸುವ ಬಗ್ಗೆ ಸಂದೇಶ ರವಾನೆ: ಬಿಗಿ ಭದ್ರತೆ

0

ಮುಂಬೈ(Mumbai): ಮುಂಬೈನ ತಾಜ್ ಹೋಟೆಲ್​ ಮೇಲೆ 2008 ರಲ್ಲಿ ನಡೆದ 26/11 ದಾಳಿ ಮಾದರಿಯಲ್ಲಿ ಮತ್ತೊಂದು ಉಗ್ರ ಕೃತ್ಯ ನಡೆಸುವ ಬಗ್ಗೆ ಪಾಕಿಸ್ತಾನದಿಂದ ಬೆದರಿಕೆ ಸಂದೇಶ ರವಾನೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಮುಂಬೈ ಟ್ರಾಫಿಕ್​ ಪೊಲೀಸ್​ ಕಂಟ್ರೋಲ್​ ರೂಂಗೆ ಈ ಸಂದೇಶ ಬಂದಿದೆ. ಮುಂಬೈ ಮೇಲೆ 26/11 ರಂತಹ ಭಯೋತ್ಪಾದಕ ದಾಳಿ ನಡೆಸಲಾಗುತ್ತದೆ ಎಂದು ಬರೆಯಲಾಗಿದೆ.

ತಕ್ಷಣವೇ ಎಚ್ಚೆತ್ತಿರುವ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಹೆಚ್ಚಿಸಿದ್ದಾರೆ. ಅನುಮಾನಾಸ್ಪದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.