ಮನೆ ಮನರಂಜನೆ “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ಗಿರಿಜಾ ಶೆಟ್ಟರ್‌ ನಟನೆ

“ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ಗಿರಿಜಾ ಶೆಟ್ಟರ್‌ ನಟನೆ

0

“ಪರಂವಃ ಸ್ಟುಡಿಯೋಸ್‌’ ಲಾಂಛನದಲ್ಲಿ ಜಿ. ಎಸ್‌ ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿರುವ, “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಖ್ಯಾತ ನಟಿ ಗಿರಿಜಾ ಶೆಟ್ಟರ್‌ ನಟಿಸುತ್ತಿದ್ದಾರೆ.

ತೆಲುಗಿನ “ಗೀತಾಂಜಲಿ’ ಸೇರಿದಂತೆ ಅನೇಕ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಗಿರಿಜಾ ಶೆಟ್ಟರ್‌, ಈಗ “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಔಟ್‌ ಆ್ಯಂಡ್‌ ಔಟ್‌ ಪ್ರೇಮಕಥಾಹಂದರ ಹೊಂದಿರುವ “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ವಿಹಾನ್‌ ನಾಯಕನಾಗಿ ಮತ್ತು ಅಂಕಿತಾ ಅಮರ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಚಂದ್ರಶೇಖರ್‌ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಹಾಡುಗಳಿಗೆ ಗಗನ್‌ ಬಡೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ.

ಸಿನಿಮಾಕ್ಕೆ ಶ್ರೀವತ್ಸನ್‌ ಸೆಲ್ವರಾಜನ್‌ ಛಾಯಾಗ್ರಹಣ, ರಕ್ಷಿತ್‌ ಕಾಪ್‌ ಸಂಕಲನವಿದೆ. ಸದ್ಯ “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ಗಿರಿಜಾ ಶೆಟ್ಟರ್‌ ಅವರ ಫ‌ಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಏರೋನಾಟಿಕಲ್ ಡೆವಲಪ್‌ ಮೆಂಟ್ ಏಜೆನ್ಸಿ: 53 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ