ಹಿಮಾಲಯ ಮತ್ತು ದಕ್ಷಿಣ ಭಾರತದ ದಟ್ಟ ಅಡವಿಗಳ ನಿತ್ಯ ಹಸಿರು ಮರಗಳು ಇವು. ಇದರ ಮೇಲೆ ಹೊಳೆಯುವ ಹಸಿರು ಬಣ್ಣ ಕೆಳಗಡೆ ಬಿಳಿಯ ತಿಳಿ ಬಣ್ಣವಿರುತ್ತದೆ. ಚಿಹುರೆಗಳು ನೆತ್ತರು ರಂಗಿನವು. ವಸಂತಕಾಲದಲ್ಲಿ ಸುಂದರ ಬಿಳಿಯ ಗುಲಾಬಿ ಗಾತ್ರದ ಹೂಗಳು ಅರಳುತ್ತದೆ. ಹೂ ನಡುವಿನ ಕೇಸರ ಬಣ್ಣ ಕೆಂಪು. ಇಡಿ ಹೂ ಮತ್ತು ಕೇಸರಗಳನ್ನು ಮದ್ದಿಗಾಗಿ ಬಳಸುತ್ತಾರೆ. ಅಂಡಾಕಾರದ ಗಟ್ಟಿ ಕಾಯಿ, ಒಳಗೆ ಒಂದರಿಂದ ನಾಲ್ಕು ಬೀಜಗಳಿರುತ್ತದೆ. ಅನುಕೂಲ ಪರಿಸರದಲ್ಲಿ ಬೀಜ ಮೊಳೆತು ಹೊಸ ಸಸಿ ಹುಟ್ಟುತ್ತದೆ. ಬೀಜದಲ್ಲಿ ಅಧಿಕ ಪ್ರಮಾಣದ ತೈಲಾಂಶವಿರುತ್ತದೆ.
ಔಷಧೀಯ ಗುಣಗಳು :-
* ಬೀಜದಿಂದ ತೆಗೆದ ಎಣ್ಣೆಯನ್ನು ಮಾಲೀಶ್ ಮಾಡಿದರೆ ಚರ್ಮರೋಗ, ಕೀಲು ಗಂಟು ಬೇನೆ ಪರಿಹಾರವಾಗುತ್ತದೆ.
* ಹೊಟ್ಟೆ ಉಬ್ಬರ, ಹೊಟ್ಟೆಯ ಉರಿ, ಹುಣ್ಣು ಪರಿಹರಿಸಲು ಮರದ ಚಕ್ಕೆ ಅಥವಾ ಬೇರು ಕಷಾಯ ರೂಪದಲ್ಲಿ ಸೇವಿಸಲು ಯೋಗ್ಯವಾಗಿದೆ. ಇದು ಪರಿಹಾರೋಪಾಯ ಸಹ ಆಗಿದೆ.
* ಜ್ವರ, ಮೈ ತುರಿಗೆ, ಬಾಯಾರಿಕೆ, ಅತಿ ಬೆವರು, ವಾಂತಿ, ವಾಕರಿಕೆ ಮತ್ತು ಅತಿ ಮುಖ್ಯವಾಗಿ ರಕ್ತಸ್ರಾವನ್ನು ನಿಲ್ಲಿಸಲು ಹೂವಿನ ಬಳಿಕೆಯು ಪ್ರಶಸ್ತವಾಗಿದೆ.
* ಅತಿ ಹೆಚ್ಚಿನ ನೆಗಡಿ, ಮೂಗು ಕಟ್ಟುವಿಕೆ ಪರಿಹಾರಕ್ಕೆ ಎಲೆ ಅರೆದು ಬಿಸಿ ಮಾಡಿ ಪೋಲ್ಟಿಸು ಹಣೆಗೆ ಹಾಕಬಹುದು.
* ಮಾಸಿಕ ಮುಟ್ಟು ಸ್ರಾವ ಅಧಿಕವಿದ್ದರೆ ನಾಗಕೇಸರ ಎಲೆ ಅರೆದು ಬಿಸಿ ಮಾಡಿದ ಪೋಲ್ಟಿಸು ಹಣಗೆ ಹಾಕಿದರೆ ಹಿತಕರ.
* ಕಲ್ಲುಸಕ್ಕರೆ ಮತ್ತು ಬೆಣ್ಣೆ ಸಂಗಡ ಪುಡಿ ಮಾಡಿ ಪುಷ್ಪ ಚೂರ್ಣ ಸೇವಿಸಿದಾಗ ರಕ್ತ ಬೀಳುವ ಮೂಲವ್ಯಾಧಿಗೆ ಪರಿಹಾರ.