ಮನೆ Uncategorized ಫಿಟ್ಸ್ ನಿಯಂತ್ರಣಕ್ಕೆ  ಔಷಧಿ ಬಳಸುವ ವಿಧಾನ 

ಫಿಟ್ಸ್ ನಿಯಂತ್ರಣಕ್ಕೆ  ಔಷಧಿ ಬಳಸುವ ವಿಧಾನ 

0

ಸಾಮಾನ್ಯವಾಗಿ ಫಿಟ್ಸ್ ಗೆ ಒಂದೇ ರೀತಿಯ ಔಷಧಿಗಳು ಸಾಕಾಗುತ್ತವೆ. 2-3 ವಿಧದ ಔಷಧಿಗಳ ಅಗತ್ಯವಿಲ್ಲ. ಫಿಟ್ಸ್ ನಿಯಂತ್ರಣಕ್ಕೆ ಬಾರದಿದ್ದರೆ ಆಗ ಔಷಧೀಯ ಪ್ರಮಾಣವನ್ನು ಹೆಚ್ಚಿಸಬೇಕು.

Join Our Whatsapp Group

ಔಷಧಿ ಆರಂಭಿಸಿದ ನಂತರ 2 ವರ್ಷಗಳವರೆಗೆ ಫಿಟ್ಸ್ ಮರುಕಳಿಸದಿದ್ದರೆ ನಿಧಾನವಾಗಿ ಔಷಧದ ಪ್ರಮಾಣ ಕಡಿಮೆ ಮಾಡುತ್ತಾ 2-3 ತಿಂಗಳಲ್ಲಿ ಔಷಧವನ್ನು ನಿಲ್ಲಿಸಬೇಕು. ಒಂದೇ ಸಾರಿ ಇದ್ದಕ್ಕಿದ್ದಂತೆ ನಿಲ್ಲಿಸಬಾರದು. ಔಷಧಿಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ ಪ್ರತಿಶತ 20 ರಷ್ಟು ಸಂದರ್ಭಗಳಲ್ಲಿ ಆರು ತಿಂಗಳ ಒಳಗೆ ಮತ್ತೆ ಪಿಟ್ಸ್ ಮರುಕಳಿಸಬಹುದು.

ಜನರಲೈಸ್ಡ್ ಕ್ರೋನಿಕ್ ಟೋನಿಕ್ ಸೀಜರ್ಸ್ ಮತ್ತು ಪಾರ್ಷಿಯಲ್ ಸೀಜರ್ಸ್ ನಲ್ಲಿ ಕಾರ್ಬೋಮಾ ಜೆಪಿನ್ ಗುಳಿಗೆಗಳನ್ನು ಬಳಸಬಹುದು. ಇಲ್ಲವೇ ಫಿನಟಾಯಿನ್ ಸೋಡಿಯಂ ವೇಲಪೆರೇಟ್,ಫಿನೋಬಾರ್ಬಿ ಟೋನ್, ಕ್ಲೋನಜಿಪಾಮ್ ಬಳಸಬಹುದು. ಫಿಟ್ಸ್ ಅಲ್ಲದ ಫಿಟ್ಸ್ ಆಗಿದ್ದರೆ ಪೆಟಿಟ್ಮಾಲ್ ಎಲಿಲೆಪ್ಸಿಗೆ ಸೋಡಿಯಂ ವೇಲಪರೇಟ್ ಔಷಧಿ ಬಳಸಬೇಕು. ಇಲ್ಲವೇ ಇಥೋಸಕ್ಸಿಮೈಡ್  ಬಳಸಬಹುದು. 

ಮಯೋಕ್ಲೋನಿಕ್ ಸೀಜರ್ಸ್ ಗೆ ಸೋಡಿಯಂ ವೆಲಪೆರೇಟ್ ಇಲ್ಲವೇ ಕ್ಲೊನಜಿಪಾಮ್ ಬಳಸಬೇಕು.

ಜ್ವರದೊಂದಿಗೆ ಫಿಟ್ಸ್ ಬಂದವರಿಗೆ ಪ್ಯಾರಾಸೆಟಮಾಲ್, ಡೈಜಿ ಪಾವ್ ಬಳಸಬೇಕು.

ತಲೆಗೆ ಪೆಟ್ಟು ಬಿದ್ದ ಫಿಟ್ಸ್ ಬರುತ್ತಿರುವವರಿಗೆ ಫಿನಟಾಯಿನ್, ಹುಟ್ಟಿದ ಕೆಲವೇ ದಿನಗಳಿಗೆ ಫಿಟ್ಸ್ ಬರುತ್ತಿರುವವರಿಗೆ ಫಿನೋಬಾರ್ಬಿಟೋನ್,ಡೈಜಿಪಾಮ್, ಪಿನಟಾಯಿನ್ ಇವುಗಳಲ್ಲಿ ಯಾವುದಾದರೂ ಒಂದು ಬಳಸಬೇಕು.

ಫಿಟ್ಸ್ ಸಂಪೂರ್ಣ ನಿವಾರಣೆ :-

ಬಹಳಷ್ಟು ಸಂದರ್ಭದಲ್ಲಿ ಫಿಟ್ಸ್ ಸಂಪೂರ್ಣ ವಾಸಿಯಾಗುತ್ತದೆ. ಮೆದುಳಿಗೆ ಬಹಳ ತೊಂದರೆಯಾಗಿರುವವರು ಫಿಟ್ಸ್ ನಿಂದ ಬೇಗ ಹೊರಬರಲಾರರು. ಆರೋಗ್ಯವಾಗಿರುವ ಮತ್ತು ವಯಸ್ಸಿಗೆ ತಕ್ಕ ಬೆಳವಣಿಗೆ ಇರುವ ಮಗು ಫಿಟ್ಸ್ ನಿಂದ ಸುಲಭವಾಗಿ ಹೊರಬರುತ್ತದೆ. ನರಮಂಡಲದ ರೋಗಗಳಿರುವರಿಗಿಂತ ಇಲ್ಲದವನು ಫಿಟ್ಸ್ ನಿಂದ ಸುಲಭವಾಗಿ ಹೊರಬರುತ್ತದೆ. ಔಷಧಿಗಳನ್ನು ಮಾತ್ರ ಕ್ರಮಬದ್ಧವಾಗಿ ಬಳಸಬೇಕು.

ಜ್ವರ ಮತ್ತು ಫಿಟ್ಸ್ :-

ಜ್ವರದಿಂದ ಫಿಟ್ಸ್ ಬಂದರೆ ಅಂತಹ ಫಿಟ್ಸ್ ನ್ನ ಫೆಬ್ರೈಲ್ ಸೀಜಸ್ ಎನ್ನುತ್ತಾರೆ ಅಥವಾ ಫೆಬ್ರೈಲ್ ಕಲ್ವಲ್ಷನ್ ಎನ್ನುತ್ತಾರೆ. ಮಾಮೂಲಿ ಜ್ವರದಿಂದ ಫಿಟ್ಸ್ ಯಾವುದೇ ಅಪಾಯವನ್ನು ಮಾಡುವುದಿಲ್ಲ ಕೆಲವರಿಗೆ ವಿಷಯ ಜ್ವರಗಳು ಬರುತ್ತದೆ.  ಮೆನಿಂಜೈಟಿಸ್, ಎನ್ ಕೆಫಲೈಟಿಸ್ ಇಂತಹ ಸಂದರ್ಭಗಳಲ್ಲಿ ಫಿಟ್ಸ್ ಬಂದಾಗ ಗಂಭೀರವಾಗಿ ಪರಿಗಣಿಸಬೇಕು. ಜ್ವರದೊಂದಿಗೆ ಫಿಟ್ಸ್ ಬಂದಾಗ ಸಂಪೂರ್ಣವಾಗಿ ಪರೀಕ್ಷೆಗೊಳಪಡಿಸಬೇಕು. ಕುಟುಂಬದಲ್ಲಿ ಯಾರಿಗಾದರೂ ವಂಶವಾಹಿನಿಯಿಂದ ಹರಡುವ ಫಿಟ್ಸ್ ಎಂದು ಪರಿಗಣಿಸಬೇಕು. ಇಂತಹ ಮಕ್ಕಳಿಗೆ ಮೊದಲ ಬಾರಿ ಫಿಟ್ಸ್ ಬಂದಿದ್ದರು ಕೂಡ ಔಷಧಿ ಬಳಕೆಯನ್ನು ಆರಂಭಿಸಬೇಕು. 

ಜ್ವರ ಬಂದ ಮಗುವಿಗೆ 15 ನಿಮಿಷಕ್ಕಿಂತಲೂ ಹೆಚ್ಚು ಫಿಟ್ಸ್ ಇದ್ದರೆ ಮೆದುಳಿನಲ್ಲಿ ಏನಾದರೂ ಸೋಂಕು, ಗಡ್ಡೆ, ನರಸಂಬಂಧ ತೊಂದರೆಯಿದೆ ಎಂದು ಭಾವಿಸಬೇಕು. ಮೆನಿಂಜೈಟಿಸ್ ನಂತಹ ಕಾಯಿಲೆ ಇದ್ದರೆ ತಪ್ಪದೆ ಬೆನ್ನಿನಲ್ಲಿ ನೀರು ತೆಗೆದು ಪರೀಕ್ಷಿಸಬೇಕು. ಆರೋಗ್ಯವಾಗಿರುವ ಮಗುವಿನ ಮಾಮೂಲಿ ಜ್ವರದಲ್ಲಿ ಫಿಟ್ಸ್ ಬಂದಿದ್ದರೆ ಇಇಜಿ ಪರೀಕ್ಷೆಯ ಅಗತ್ಯವಿಲ್ಲ; ಔಷಧಿ ಅಗತ್ಯವೂ ಇಲ್ಲ.

9 ತಿಂಗಳೊಳಗಿನ ಮಗುವಿಗೆ ಜ್ವರದಿಂದ ಫಿಟ್ಸ್ ಬರುವುದಿಲ್ಲ. ಐದು ವರ್ಷದ ನಂತರ ಕೂಡ ಜ್ವರದಿಂದ ಫಿಟ್ಸ್ ಬರುವುದಿಲ್ಲ. 14 ತಿಂಗಳಿಂದ 18ನೇ ತಿಂಗಳಿನ ಒಳಗೆ ಜ್ವರದಿಂದ ಫಿಟ್ಸ್ ಬರುವುದು ಜಾಸ್ತಿ. ಜ್ವರದೊಂದಿಗೆ ಮಗುವಿನ ಫಿಟ್ಸ್ ಬಂದಿದ್ದಾಗ ಫಿನಾಟಾಯಿನ್ ಅಥವಾ ಕಾರ್ಗೋಮೆಜೆಪಿನ್ ಗುಳಿಗೆಗಳನ್ನು ಬಳಸುವುದರಿಂದ ಪ್ರಯೋಜನವಿ.ಲ್ಲ ಪ್ಯಾರಾಸೆಟಮಾಲ್, ಡೈಜಿಪಾಯ್ ಕೊಟ್ಟರೆ ಸಾಕಾಗುತ್ತೆ. ಜ್ವರ ಬಂದ ಮಗುವಿಗೆ ಫಿಟ್ಸ್ ಬಂದಾಗ ಮೊದಲು ಜ್ವರವನ್ನು ನಿಯಂತ್ರಿಸಬೇಕು. ನಂತರ ಜ್ವರದ ಮೂಲಕಾರಣವನ್ನು ಗುರುತಿಸಿ, ಅದರ ಪ್ರಕಾರ ಚಿಕಿತ್ಸೆಗಳನ್ನು ಆರಂಭಿಸಬೇಕು.
ಸ್ಟೇಟಸ್ ಎಪಿಲಪ್ಟಿಕಸ್ :-
ಫಿಟ್ಸ್ 30 ನಿಮಿಷವಾದರೂ ಬಿಡುಗಡೆಯಾಗದಿದ್ದರೆ, ಫಿಟ್ಸ್ ಸಮಯದಲ್ಲಿ ಒಂದಿಷ್ಟು ಪ್ರಜ್ಞೆ ಬರೆದಿದ್ದರೆ, ಅದನ್ನ ಸ್ಟೇಟಸ್ ಎಪಿಲಪ್ಟಿಕಸ್ ಎನ್ನುತ್ತಾರೆ. ಜನರಲೈಸ್ಡ್ ಕ್ರೋನಿಕ್ ಟೋನಿಕ್ ಸೀಜರ್ಸ್ ನಲ್ಲಿ ಸ್ಟೇಟಸ್ ಸಾಮಾನ್ಯ. ಎಳೆಯ ಮಕ್ಕಳಲ್ಲಿ ಇನ್ಫೆಕ್ಷನ್ ಇದ್ದಾಗ ಕೂಡ ಸ್ಟೇಟಸ್ ಎಪಿಲಪ್ಟಿಕಸ್ ಪರಿಸ್ಥಿತಿ ತಲೆದೂರುತ್ತದೆ.
ಆಗತಾನೆ ಹುಟ್ಟಿದ ಮಗುವಿಗೆ ಆಮ್ಲಜನಕ ಆಮ್ಲಜನಕ ಸಾಕಷ್ಟು ಲಭ್ಯವಾಗದಿದ್ದರೆ ಸ್ಟೇಟಸ್ ಎಪಿಲಪ್ಟಿಕಸ್ ಉದ್ಭವವಾಗುತ್ತದೆ. ಯಾವುದೇ ಕಾರಣದಿಂದಾಗಲಿ ಆಗ ತಾನೆ ಹುಟ್ಟಿದ ಮಗುವಿಗೆ ಮೆದುಳಿನ ಪೊರೆಗಳಲ್ಲಿ ರಕ್ತ ಸೇರಿದರೆ, ರಕ್ತಸ್ರಾವದರೆ, ಮೆದುಳಿನ ರಚನೆಯಲ್ಲಿ ದೋಷವಿದ್ದರೆ ಮಗು ಹುಟ್ಟುತ್ತಿದ್ದಂತೆ ಈ ಪರಿಸ್ಥಿತಿ ಎದುರಾಗಬಹುದು.
ಚಿಕಿತ್ಸೆ :-
ಸ್ಟೇಟಸ್ ಎಪಿಲಪ್ಟಿಕಸ್ ಇದ್ದಾಗ ಮೂಲ ಕಾರಣವೇನೆಂಬುದು ಪರಿಶೀಲಿಸಬೇಕು. ಅಗತ್ಯವಾದರೆ ಸಿ.ಟಿ. ಸ್ಕ್ಯಾನ್, ಎಂ. ಆರ್. ಐ. ಪರೀಕ್ಷೆಗಳನ್ನು ಮಾಡಬೇಕು.
ಸ್ಟೇಟಸ್ ಎಪಿಲಪ್ಟಿಕಸ್ ಮಗುವಿಗೆ ತಕ್ಷಣ ವಾತಯನ ವ್ಯವಸ್ಥೆ ಮಾಡಬೇಕು. ಆಮ್ಲಜನಕವನ್ನು ಪೂರೈಸಬೇಕು. ಸರಳವಾದ ಪಾರ್ಷಿಯಲ್ ಸೀಜರ್ಸ್ 10-20 ಸೆಕೆಂಡುಗಳಷ್ಟಿರುತ್ತದೆ. ಕಾಂಪ್ಲೆಕ್ಸ್ ಪಾರ್ಷಿಯಲ್ ಸೀರ್ಜಸ್ 1-2 ನಿಮಿಷಗಳಿರುತ್ತದೆ. ಫ್ರೈಬ್ರೈಲ್ ಸೀಜರ್ಸ್ ಕೆಲವು ಸೆಕೆಂಡುಗಳಿಂದ 10 ನಿಮಿಷ ಇರುತ್ತದೆ.
ಸೀಜರ್ಸ್ ಕುರಿತು ಸರಿಯಾದ ತಿಳಿವಳಿಕೆಯಿದ್ದರೆ ಚಿಕಿತ್ಸೆ ಸುಲಭವಾಗುತ್ತದೆ.

ಮುಕ್ತಾಯ

ಹಿಂದಿನ ಲೇಖನಶಕ್ತಿ ಯೋಜನೆಗೆ ಸ್ಪಂದನೆ: 5675 ಹೊಸ ಕೆಎಸ್’ಆರ್’ಟಿಸಿ ಬಸ್‌ ಖರೀದಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಮುಂದಿನ ಲೇಖನವಿಶೇಷ ಚೇತನರಿಗೆ ಜಂಬೂಸವಾರಿ ವೀಕ್ಷಿಸಲು ಆಸನ ವ್ಯವಸ್ಥೆ