ಮನೆ ರಾಷ್ಟ್ರೀಯ ಅಸ್ಸಾಂನಲ್ಲಿ 4.4 ತೀವ್ರತೆಯ ಭೂಕಂಪ

ಅಸ್ಸಾಂನಲ್ಲಿ 4.4 ತೀವ್ರತೆಯ ಭೂಕಂಪ

0

ಅಸ್ಸಾಂ: ಅಸ್ಸಾಂನ ಸೀನಿತ್​ ಪುರದಲ್ಲಿ ಸೋಮವಾರ ಬೆಳಗ್ಗೆ 4.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.

Join Our Whatsapp Group

ಗುವಾಹಟಿಯ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಇಂದು ಬೆಳಗ್ಗೆ 8.03 ಗಂಟೆಗೆ 15 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಬಾಂಗ್ಲಾದೇಶ, ಭೂತಾನ್, ಚೀನಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ.

ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 2.58ರ ಸುಮಾರಿಗೆ 10 ಕಿ.ಮೀ ಆಳದ ಭೂಕಂಪ ಸಂಭವಿಸಿದೆ.

ಗುವಾಹಟಿ ನಗರದ ವಿವಿಧ ಭಾಗಗಳಲ್ಲಿ ಸಂಜೆಯ ವೇಳೆಗೆ ಕಂಪನದ ಅನುಭವವಾಗಿದೆ. ಇದಕ್ಕೂ ಮೊದಲು, ಭಾನುವಾರ ಸಂಜೆ 6.26 ಕ್ಕೆ ಅಫ್ಘಾನಿಸ್ತಾನದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಈ ಹಿಂದೆ ದೇಶದಲ್ಲಿ ಲಘು ಭೂಕಂಪ ಸಂಭವಿಸಿದ ನಂತರ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿಯೂ ಲಘು ಕಂಪನದ ಅನುಭವವಾಗಿದೆ. ಕೆಲವು ಸೆಕೆಂಡ್‌ ಗಳ ಕಾಲ ಈ ಕಂಪನವು ಬೆಳಿಗ್ಗೆ 11.20 ರ ಸುಮಾರಿಗೆ ಸಂಭವಿಸಿದೆ ಎಂದು ಭೂಕಂಪಶಾಸ್ತ್ರಜ್ಞರು ತಿಳಿಸಿದ್ದಾರೆ.

ಹಿಂದಿನ ಲೇಖನಆರೋಗ್ಯ ಲಾಭಕ್ಕಾಗಿ ರೇನ್ ಬೋ ಡಯಟ್‌  ಅನುಸರಿಸಿ
ಮುಂದಿನ ಲೇಖನನೂತನ ಸಂಸತ್ ಭವನ ಉದ್ಘಾಟನೆಗೆ ಸಾಕ್ಷಿಯಾದ ಗಣ್ಯಾತಿಗಣ್ಯರು