ಮನೆ ರಾಜ್ಯ ಮೆಟ್ರೋ ಪಿಲ್ಲರ್​ ಕುಸಿತ ಪ್ರಕರಣ: ಕನ್ಸ್‌’ಟ್ರಕ್ಷನ್ ಕಂಪನಿ ಸೇರಿ 8 ಮಂದಿ ವಿರುದ್ಧ ಎಫ್’ಐಆರ್

ಮೆಟ್ರೋ ಪಿಲ್ಲರ್​ ಕುಸಿತ ಪ್ರಕರಣ: ಕನ್ಸ್‌’ಟ್ರಕ್ಷನ್ ಕಂಪನಿ ಸೇರಿ 8 ಮಂದಿ ವಿರುದ್ಧ ಎಫ್’ಐಆರ್

0

ಬೆಂಗಳೂರು(Bengaluru): ಮೆಟ್ರೋ ಪಿಲ್ಲರ್​ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾರ್ಜುನ ಕನ್ಸ್‌’ಟ್ರಕ್ಷನ್ ಕಂಪನಿ ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್​​’ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಘಟನೆ ಸಂಬಂಧ ನಾಗಾರ್ಜುನ ಕನ್ಸ್‌’ಟ್ರಕ್ಷನ್ ಕಂಪನಿಯ ಪೂಜಾ ಜೆಇ, ಚೈತನ್ಯ, ಮೆಥಾಯಿ ಕಂಪನಿಯ ವಿಕಾಸ್ ಸಿಂಗ್ ಪಿಎಂ, ಸೂಪರ್ ವೈಸರ್ ಲಕ್ಷ್ಮಿ ಪತಿ, ಬಿಎಂಆರ್’​ಸಿಎಲ್​ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಬಿಎಂಆರ್​’ಸಿಎಲ್​ ಎಂಜಿನಿಯರ್ ಮಹೇಶ್ ಬೆಂಡೆಕೇರಿ ಇವರ ಮೇಲೆ ದೂರು ದಾಖಲಾಗಿದ್ದು, ಕ್ರಮ ಆಗಲಿದೆ ಎಂದರು.

ಇದೇ ವೇಳೆ ತಾಯಿ ಮಗುವಿನ ಸಾವಿನ ಕುರಿತು ವಿಷಾದಿಸಿದ ಅವರು, ನಿರ್ಲಕ್ಷ್ಯದಿಂದ ಪ್ರಾಣ ಹಾನಿಯಾಗಿದೆ. ಈ ರೀತಿ ಆಗಬಾರದು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಶೀಘ್ರವೇ ಸ್ಯಾಂಟ್ರೋ ರವಿ ಬಂಧನ: ಇದೇ ವೇಳೆ ಸ್ಯಾಂಟ್ರೋ ರವಿಯ ಬಂಧನ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈಗಾಗಲೇ ಅವನ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ. ಅವನ‌ ಓಡಾಟ ಎಲ್ಲೆಲ್ಲಿ ಇತ್ತೋ ಅಲ್ಲಿ ಎಲ್ಲಾ ಕಡೆ ಪೊಲೀಸರು ಸರ್ಚ್ ಮಾಡಿದ್ದಾರೆ. ಆತ ಎಲ್ಲೇ ಇದ್ದರೂ ಎಳೆದುಕೊಂಡು ಬಂದೇ ಬರುತ್ತಾರೆ. ಆತನನ್ನು ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಏನೇ ಆರೋಪ ಮಾಡಲು ಹೇಸುವುದಿಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆದಿದ್ದಾನೆ. ಆತನನ್ನು ನ ನಾವು ಮಟ್ಟ ಹಾಕುತ್ತೇವೆ. ಯಾರೇ ಆಗಿದ್ದರೂ ಬಿಡುವುದಿಲ್ಲ. ಬಂಧನ ಮಾಡಿಯೇ ಮಾಡುತ್ತೇವೆ ಎಂದರು.

ಸ್ಯಾಂಟ್ರೊ ರವಿಯಿಂದ ವರ್ಗಾವಣೆ ದಂಧೆ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಸ್‌’ಐ ಹಗರಣದಲ್ಲಿ ನಾವು ಯಾರನ್ನು ಬಿಟ್ಟಿದ್ದೇವೆ? ಇದೇ ರವಿ ಸಿಗಲಿ. ಯಾರೇ ಇದ್ದರೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಏನನ್ನೂ ಹೇಳಲು ಆಗುವುದಿಲ್ಲ. ವಿಚಾರಣೆಯಿಂದ ಎಲ್ಲ ಸಂಗತಿ ಹೊರಗೆ ಬರಲಿ ಎಂದರು.

ಯಾರ ಕರೆ ಬಂದರೂ ನಾವು ಪ್ರತಿಕ್ರಿಯೆ ನೀಡಲೇಬೇಕು. ನಾವು ಸುಲವಾಗಿ ಲಭ್ಯ ಇರುತ್ತೇವೆ. ಆಗ ಇಂಥವರೂ ಕೂಡ ಕರೆ ಮಾಡ್ತಾರೆ. ನಾನು ನಿಮ್ಮೆಲ್ಲರಿಗೂ (ಮಾಧ್ಯಮದವರು) ಗೊತ್ತು. ಯಾರು ಬೇಕಾದರೂ ನನ್ನನ್ನು ಭೇಟಿ ಮಾಡಬಹುದು. ನನ್ನ ಮನೆಗೆ ಬರುವಾಗ ಪೊಲೀಸರಿಂದ ಪ್ರಮಾಣಪತ್ರ ತೆಗೆದುಕೊಂಡು ಬಾ ಎಂದು ಹೇಳಲು ಆಗಲ್ಲ. ಅನೇಕರು ಬಂದಾಗ ಪೋಟೊ ತೆಗೆಸಿಕೊಳ್ಳುತ್ತಾರೆ. ಆ ಕಾರಣಕ್ಕೆ ನಾವು ಅವರ ಜೊತೆ ಇರಲ್ಲ  ಎಂದರು.