ಥೈಲ್ಯಾಂಡ್ : ಮೆಕ್ಸಿಕೋದ ಫಾತಿಮಾ ಬಾಷ್ ಅವರು 2025ನೇ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಧರಿಸಿದ್ದಾರೆ. ಮಿಸ್ ಥೈಲ್ಯಾಂಡ್ ಮೊದಲ ರನ್ನರ್ ಅಪ್ ಆಗಿ ಮತ್ತು ಮಿಸ್ ವೆನೆಜುವೆಲಾ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು
ʼಮಿಸ್ ಫಿಲಿಪೈನ್ಸ್ ಮತ್ತು ಮಿಸ್ ಕೋಟ್ ಡಿʼ ಐವರಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದರು. ಮಿಸ್ ಯೂನಿವರ್ಸ್ 2025 ರ ಕೊನೆಯ ಸುತ್ತಿನಲ್ಲಿ 12 ಸ್ಪರ್ಧಿಗಳಿದ್ದರು. ಗ್ವಾಡೆಲೋಪ್, ಕೊಲಂಬಿಯಾ, ಕ್ಯೂಬಾ, ಮಾಲ್ಟಾ, ಕೋಟೆಡ್’ಐವೊಯಿರ್, ಮೆಕ್ಸಿಕೊ, ಪೋರ್ಟೊ ರಿಕೊ, ಚಿಲಿ, ಥೈಲ್ಯಾಂಡ್, ಫಿಲಿಪೈನ್ಸ್, ಚೀನಾ ಮತ್ತು ವೆನೆಜುವೆಲಾದ ಸುಂದರಿಯರು ಕಿರೀಟಕ್ಕಾಗಿ ಪೈಪೋಟಿ ನಡೆಸಿದ್ದರು.
ಮೆಕ್ಸಿಕೊ, ಥೈಲ್ಯಾಂಡ್, ಕೋಟ್ ಡಿ’ಐವರಿ, ಫಿಲಿಪೈನ್ಸ್ ಮತ್ತು ವೆನೆಜುವೆಲಾ ಸ್ಪರ್ಧಿಗಳು ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡರು. ತೀರ್ಪುಗಾರರಲ್ಲಿ ಭಾರತದ ಬ್ಯಾಡ್ಮಿಂಟನ್ ದಂತಕಥೆ ಸೈನಾ ನೆಹ್ವಾಲ್ ಇದ್ದರು.















