ಮನೆ ಅಪರಾಧ ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ಕಂಪನಿ;ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ಕಂಪನಿ;ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

0

ಹಲಗೂರು:ಮೈಕ್ರೋ ಫೈನಾನ್ಸ್ ಕಂಪನಿಯಿಂದ ಪಡೆದಿದ್ದ ಸಾಲಕ್ಕೆ ಮನೆಯನ್ನೇ ಜಪ್ತಿ ಮಾಡಿದ ಕಂಪನಿ ಸಿಬ್ಬಂದಿಯವರ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಜರುಗಿದೆ.


ಗ್ರಾಮದ ಅಂದಾನಯ್ಯ ಎಂಬುವರ ಪತ್ನಿಯಾದ 52 ವರ್ಷದ ಪ್ರೇಮ ಎಂಬುವರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯಾಗಿದ್ದು ಸಾವು ಬದುಕಿನೊಡನೆ ಹೋರಾಟ ನಡೆಸುತ್ತಿರುವ ಇವರಿಗೆ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಖಾಸಗಿ ಫೈನಾನ್ಸ್ ಕಂಪನಿಯೊಂದ ರಿಂದ 6 ಲಕ್ಷ ರೂ ಸಾಲ ಪಡೆದಿದ್ದ ಪ್ರೇಮ ಅವರು ಕಳೆದ 5-6 ವರ್ಷಗಳಿಂದ ಸಾಲದ ಕಂತಿನ ಹಣ ಕಟ್ಟುತ್ತ ಬಂದಿದ್ದರು ಸಹ ಇದು ಬಡ್ಡಿಗೆ ಜಮಾ ಆಗಿದೆ ಎಂದು ಹೇಳಿ 6 ಲಕ್ಷ ಹೊಸ ಸಾಲ ಎಂದು ನವೀಕರಿಸಿ ಕೊಂಡು ಉಳಿಕೆ ಬಡ್ಡಿ ಸೇರಿ 8 ಲಕ್ಷ ಕಟ್ಟಬೇಕೆಂದು ಪಟ್ಟು ಹಿಡಿದಿದ್ದ ಕಂಪನಿಯವರು ಈ ಕುರಿತು ನೋಟೀಸ್ ನೀಡಿದ್ದರು ಎನ್ನಲಾಗಿದೆ.


ಹಣ ಕಟ್ಟಲು ವಿಳಂಬವಾದ ಕಾರಣಕ್ಕೆ ಒಂದು ವಾರದ ಹಿಂದೆ ಕಂಪನಿಯವರು ಈ ಕುಟುಂಬ ವಾಸವಿದ್ದ ಮನೆಯನ್ನು ಸೀಜ್ ಮಾಡಿದ್ದರು ಎನ್ನಲಾಗಿದೆ.
ಕಳೆದ ಒಂದು ವಾರದಿಂದ ಪ್ರೇಮ ಹಾಗೂ ಕುಟುಂಬದವರು ತಮ್ಮ ಸಂಬಂದಿಕರ ಮನೆಯಲ್ಲಿ ವಾಸವಿದ್ದು ಇದರಿಂದ ಮನನೊಂದ ಪ್ರೇಮ ಅವರು ವಿಷ ಸೇವಿಸಿದ್ದು ಅಸ್ವಸ್ಥಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


ಹಲಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.