ಮನೆ ಕ್ರೀಡೆ ಕಾಮನ್‌ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

ಕಾಮನ್‌ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

0

ಬರ್ಮಿಂಗ್‌ ಹ್ಯಾಮ್ (Birmingham): ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತಕ್ಕೆ 5ನೇ ಪದಕ ಲಭಿಸಿದೆ. ಅದ್ಭುತ ಪ್ರದರ್ಶನ ನೀಡುವ ಮೂಲಕ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

67ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ 300 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇನ್ನು 300 ಕೆಜಿ ತೂಕ ಎತ್ತುವ ಮೂಲಕ ಗೇಮ್ಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 

ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ ಜೆರೆಮಿ ಬರೋಬ್ಬರಿ 160 ಕೆಜಿ ಭಾರವನ್ನು ಎತ್ತಿದ್ದರು. ಇನ್ನು 293 ಕೆಜಿ ಭಾರ ಎತ್ತುವ ಮೂಲಕ ವೈಪವಾ ಅಯೋನೆ ಬೆಳ್ಳಿ ಪದಕ ಹಾಗೂ 290 ಕೆಜಿ ಭಾರ ಎತ್ತುವ ಮೂಲಕ ನೈಜೀರಿಯಾದ ಎಡಿಡಿಯಾಂಗ್ ಉಮೊಫಿಯಾ ಕಂಚಿನ ಪದಕ ಗೆದ್ದಿದ್ದಾರೆ.

ಭಾರತದ ಪದಕ ವಿಜೇತರ ಪಟ್ಟಿ: ಸಂಕೇತ್ ಸರ್ಗಾರ್ – ಬೆಳ್ಳಿ ಪದಕ, ಗುರುರಾಜ ಪೂಜಾರಿ – ಕಂಚಿನ ಪದಕ, ಮೀರಾಬಾಯಿ ಚಾನು – ಚಿನ್ನದ ಪದಕ, ಬಿಂದ್ಯಾರಾಣಿ – ಬೆಳ್ಳಿ ಪದಕ, ಜೆರೆಮಿ ಲಾಲ್ರಿನ್ನುಂಗಾ – ಚಿನ್ನದ ಪದಕ.

ಹಿಂದಿನ ಲೇಖನಹಿರಿಯರು ಮಾಡಬಹುದಾದ ಸರಳ ವ್ಯಾಯಾಮಗಳು
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ