ಮನೆ ಅಂತಾರಾಷ್ಟ್ರೀಯ ಪಾಕಿಸ್ತಾನದ ಬಂದರಿನಲ್ಲಿ ಉಗ್ರರ ದಾಳಿ: 7 ಕಾರ್ಮಿಕರ ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಬಂದರಿನಲ್ಲಿ ಉಗ್ರರ ದಾಳಿ: 7 ಕಾರ್ಮಿಕರ ಗುಂಡಿಕ್ಕಿ ಹತ್ಯೆ

0

ಪಾಕಿಸ್ತಾನ:. ಗ್ವಾದರ್‌ ನ ಸರಬಂದ್‌ ನಲ್ಲಿರುವ ಫಿಶ್ ಹಾರ್ಬರ್ ಜೆಟ್ಟಿ ಬಳಿಯ ವಸತಿ ಕ್ವಾರ್ಟರ್ಸ್​​ ಗಳ ಮೇಲೆ ಭಯೋತ್ಪಾದಕರು ದಾಳಿ ನಡೆದಿದ್ದು, 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Join Our Whatsapp Group

ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಮಲಗಿದ್ದ ಏಳು ಮಂದಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಇತ್ತೀಚೆಗೆ ಸೆಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯುರಿಟಿ ಸ್ಟಡೀಸ್ ವಾರ್ಷಿಕ ಭದ್ರತಾ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಈ ವರದಿಯ ಪ್ರಕಾರ, 2023 ರಲ್ಲಿ ಪಾಕಿಸ್ತಾನದಲ್ಲಿ 789 ಭಯೋತ್ಪಾದಕ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ 1,524 ಜನರು ಸಾವನ್ನಪ್ಪಿದ್ದಾರೆ ಮತ್ತು 1,463 ಜನರು ಗಾಯಗೊಂಡಿದ್ದಾರೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಧಿಕ ದಾಖಲೆಯಾಗಿದೆ.

ಹಿಂದಿನ ಲೇಖನಎಸ್ ಎಸ್ ಎಲ್ ಸಿ ಫಲಿತಾಂಶ: ಅಂಕಿತಾ ಕೊಣ್ಣೂರ ರಾಜ್ಯಕ್ಕೆ ಪ್ರಥಮ ಸ್ಥಾನ
ಮುಂದಿನ ಲೇಖನವಾಟ್ಸಾಪ್‌ ನಲ್ಲಿ ಬಿಜೆಪಿ ಪರ ಪ್ರಚಾರದ ಸಂದೇಶ ರವಾನೆ: ಸರ್ಕಾರಿ ನೌಕರನ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ