ಬೆಂಗಳೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಅಲ್ಲದೇ ಬೆಂಗಳೂರಿನಿಂದ ಮೈಸೂರು ವರೆಗೆ ಪಾದಯಾತ್ರೆ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿವೆ.
ಇದಕ್ಕೂ ಮುನ್ನವೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಇಂದು(ಜುಲೈ 26) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ಸ್ಪೀಕರ್ ಅವಕಾಶ ನೀಡಿದ್ದರೆ ಬಿಜೆಪಿಯವರ ಬಂಡವಾಳ ಬಿಚ್ಚಿಡ್ತಿದ್ದೆ. ಹಲವಾರು ಮಠಗಳಿಗೂ ನಿವೇಶನ ಹಂಚಿಕೆಯಾಗಿದೆ. ಜಿ.ಟಿ.ದೇವೇಗೌಡ, ಸಿ.ಎನ್.ಮಂಜೇಗೌಡ, ಹೆಚ್.ವಿಶ್ವನಾಥ್. ಸಾ.ರಾ.ಮಹೇಶ್, ಹೆಚ್.ಡಿ.ಕುಮಾರಸ್ವಾಮಿಗೂ ನಿವೇಶನ ಹಂಚಿಕೆ ಇವರಿಗೆಲ್ಲರಿಗೂ ಬದಲಿ ನಿವೇಶನ ಹಂಚಿಕೆಯಾಗಿದೆ. ತನಿಖಾ ಆಯೋಗದ ಮುಂದೆ ಅಕ್ರಮವೋ ಸಕ್ರಮವೋ ತಿಳಿಯುತ್ತೆ ಎಂದು ಹೇಳಿದರು.
ಮೂಡದಲ್ಲಿ ಬದಲಿ ನಿವೇಶನ ಪಡೆದ ರಾಜಕಾರಣಿಗಳ ಪಟ್ಟಿ
1) ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್) :ಇಂಡಸ್ಟ್ರಿಯಲ್ ಸಬರ್ಬ್ ಮೂರನೇ ಹಂತ ಮೈಸೂರು. 21 ಸಾವಿರ ಚದರ ಅಡಿ ಕೈಗಾರಿಕಾ ನಿವೇಶನ ಸಂಖ್ಯೆ 17/ಬಿ1.
2) ಸಾ.ರಾ.ಮಹೇಶ್(ಜೆಡಿಎಸ್) – ಮಳಲವಾಡಿ ಸರ್ವೆ ನಂಬರ್ 7/11A ರಲ್ಲಿ -011 ಗುಂಟೆ ಜಮೀನು ಬೋಗಾದಿ ಸರ್ವೆ ನಂಬರ್ 170,171,173 ರಲ್ಲಿ 2-11 ಎಕರೆ ಜಮೀನು
3) ಜಿ.ಟಿ.ದೇವೆಗೌಡ(ಜೆಡಿಎಸ್ -ಈರನಗೆರೆ 14/1 ರಲ್ಲಿ 2-25 ಎಕರೆ, ಮಾದಗಳ್ಳಿ 17 ರಲ್ಲಿ 1 ಎಕರೆ
4) ಸಿ.ಎನ್.ಮಂಜೇಗೌಡ (ಜೆಡಿಎಸ್ ಎಂಎಲ್‌ಸಿ): ಹಿನಕಲ್ ಗ್ರಾಮ ಸರ್ವೆ ನಂ 337 ರಲ್ಲಿ 1 ಎಕರೆ ದೇವನೂರು ಸರ್ವ ನಂಬರ್ 91 ರಲ್ಲಿ 2-25 ಎಕರೆ, ಕೆಸರೆ ಸರ್ವೆ ನಂಬರ್ 450 ರಲ್ಲಿ 4-15 ಎಕರೆ ಜಮೀನು, ಮೈಸೂರು ಸರ್ವೆ ನಂಬರ್ 86 ರಲ್ಲಿ 7-08 ಎಕರೆ ಜಮೀನು
5) ಹೆಚ್.ವಿಶ್ವನಾಥ್ (ಬಿಜೆಪಿ ಎಂಎಲ್‌ಸಿ) ಬೆಲವತ್ತ ಸರ್ವೆ ನಂಬರ್ 32 ರಲ್ಲಿ 0-05 ಜಮೀನು
6)ಮಹದೇವಸ್ವಾಮಿ (ಬಿಜೆಪಿ): 255/1, 257 ರಲ್ಲಿ 0-34 ಗುಂಟೆ ಜಮೀನು.