ಮನೆ ಸುದ್ದಿ ಜಾಲ ಹನೂರು: ವಿದ್ಯುತ್ ಆಘಾತದಿಂದ ಹೆಣ್ಣಾನೆ ಸಾವು

ಹನೂರು: ವಿದ್ಯುತ್ ಆಘಾತದಿಂದ ಹೆಣ್ಣಾನೆ ಸಾವು

0

ಹನೂರು: ಹೆಣ್ಣಾನೆಯೊಂದು ವಿದ್ಯುತ್ ಆಘಾತದಿಂದ ಮೃತಪಟ್ಟಿರುವ ಘಟನೆ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಬೈಲೂರು ವನ್ಯಜೀವಿ ವಲಯದಲ್ಲಿ ನಡೆದಿದೆ.

ಬೈಲೂರು ವ್ಯನ್ಯಜೀವಿ ವಲಯದ ಗುಂಡಿಮಾಳದಲ್ಲಿರುವ ಪ್ರಭಾಕರ್ ಎಂಬುವವರು ತಮ್ಮ ಜಮೀನಿಗೆ ವಿದ್ಯುತ್ ತಂತಿಯನ್ನು ಬಿಟ್ಟಿದ್ದರು. ಸೋಮವಾರ ರಾತ್ರಿ ಕಾಡಾನೆಗಳ ಹಿಂಡು ಜೋಳ ಬೆಳೆದಿದ್ದ ಜಮೀನಿಗೆ ನುಗ್ಗಲು ಯತ್ನಿಸಿವೆ.

ಈ ಸಂದರ್ಭದಲ್ಲಿ ಹೆಣ್ಣಾನೆ ವಿದ್ಯುತ್ ಆಘಾತದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿ, ಪರಿಶೀಲಿಸಿದ್ದಾರೆ.

ಜಮೀನು ಮಾಲೀಕ ಪ್ರಭಾಕರ್ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಅಂಚಿನಲ್ಲಿ ವಿದ್ಯುತ್ ಕಂಬಗಳು ಬಾಗಿದ್ದು, ತಂತಿಗಳು ಜೋತು ಬಿದ್ದಿವೆ.

ರಾತ್ರಿ ವೇಳೆ ಅರಣ್ಯದಂಚಿನ ಜಮೀನಿನಲ್ಲಿರುವ ರೈತರು ತಮ್ಮ ಜಮೀನಿನ ಸುತ್ತಲೂ ವಿದ್ಯುತ್ ತಂತಿ ಬಿಡುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳು, ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.

ಹಿಂದಿನ ಲೇಖನಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್: ಎಸ್.ಟಿ.ಸೋಮಶೇಖರ್
ಮುಂದಿನ ಲೇಖನಸಮಗ್ರ ಅಭಿವೃದ್ಧಿಗೆ  ಪೂರಕ ಬಜೆಟ್: ಸಚಿವ ಸಿ. ಸಿ. ಪಾಟೀಲರ ಅಭಿಮತ